ನವದೆಹಲಿ: ಭಾರತ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ದೀರ್ಘಕಾಲದವರೆಗೆ ಫಿಟ್ನೆಸ್ ಕಾಪಾಡಿಕೊಂಡರೆ ಟೆಸ್ಟ್ ಕ್ರಿಕೆಟ್ನಲ್ಲಿ 400 ವಿಕೆಟ್ ಪಡೆಯಬಲ್ಲರು ಎಂದು ವೆಸ್ಟ್ ಇಂಡೀಸ್ ಲೆಜೆಂಡರಿ ವೇಗದ ಬೌಲರ್ ಕರ್ಟ್ಲೀ ಆ್ಯಂಬ್ರೋಸ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಪ್ರಸ್ತುತ ಕೆಲವು ಅದ್ಭುತ ವೇಗದ ಬೌಲರ್ಗಳನ್ನು ಪಡೆದುಕೊಂಡಿದೆ. ನಾನು ಜಸ್ಪ್ರೀತ್ ಬುಮ್ರಾ ಅವರ ಬಹುದೊಡ್ಡ ಅಭಿಮಾನಿ. ನಾನು ನೋಡಿರುವ ಬೌಲರ್ಗಳಲ್ಲೇ ಈತ ತುಂಬಾ ವಿಭಿನ್ನವಾಗಿದ್ದಾರೆ. ಆತ ತುಂಬಾ ಪರಿಣಾಮಕಾರಿ ಬೌಲರ್ ಮತ್ತು ಅವರ ಉತ್ತಮ ಸಾಧನೆ ಮಾಡುವುದನ್ನು ನೋಡಲು ನಾನು ಎದುರು ನೋಡುತ್ತಿದ್ದೇನೆ ಎಂದು ತಮ್ಮ ಯೂಟ್ಯೂಬ್ ಶೋ 'ಕರ್ಟ್ಲಿ ಅಂಡ್ ಕರೀಷ್ಮಾ' ದಲ್ಲಿ ಹೇಳಿದ್ದಾರೆ.
ಅವರು ದೀರ್ಘಾವಧಿಯವರೆಗೆ ಆರೋಗ್ಯ, ಫಿಟ್ನೆಸ್ ಕಾಪಾಡಿಕೊಂಡು ಆಡಿದರೆ ಟೆಸ್ಟ್ ಕ್ರಿಕೆಟ್ನಲ್ಲಿ 400 ಕ್ಕೂ ಹೆಚ್ಚು ವಿಕೆಟ್ ಪಡೆಯಲಿದ್ದಾರೆ. ಅವರು ವೇಗವಾಗಿ ಬೌಲಿಂಗ್ ಮಾಡಬಲ್ಲರು, ಚೆಂಡನ್ನು ಸ್ವಿಂಗ್ ಮಾಡಬಲ್ಲರು ಮತ್ತು ಅದ್ಭುತವಾದ ಯಾರ್ಕರ್ಗಳನ್ನು ಎಸೆಯಬಲ್ಲರು. ಅವರ ಬತ್ತಳಿಕೆಯಲ್ಲಿ ಇಂತಹ ಸಾಕಷ್ಟು ಅಸ್ತ್ರಗಳನ್ನು ಹೊಂದಿದ್ದಾರೆ ಎಂದು 98 ಟೆಸ್ಟ್ ಪಂದ್ಯಗಳಿಂದ 405 ವಿಕೆಟ್ ಪಡೆದಿರುವ ಆ್ಯಂಬ್ರೋಸ್ ವಿವರಿಸಿದ್ದಾರೆ.
27 ವರ್ಷದ ಜಸ್ಪ್ರೀತ್ ಬುಮ್ರಾ 19 ಪಂದ್ಯಗಳಲ್ಲಿ 83 ಟೆಸ್ಟ್ ವಿಕೆಟ್ ಪಡೆದಿದ್ದಾರೆ. 67 ಏಕದಿನ ಪಂದ್ಯಗಳಿಂದ 108, 50 ಟಿ20 ಪಂದ್ಯಗಳಿಂದ 59 ವಿಕೆಟ್ ಪಡೆದಿದ್ದಾರೆ.
ಇದನ್ನು ಓದಿ:ಕೋವಿಡ್ ಸಂಕಷ್ಟ ಕಾಲದಲ್ಲಿ ನೆರವಿಗೆ ಧಾವಿಸಿದ ಟೀಂ ಇಂಡಿಯಾ ಆಟಗಾರರು ಇವರು..