ಓವಲ್(ಲಂಡನ್): ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ದಾಖಲೆ ಬ್ರೇಕ್ ಮಾಡಿದ್ದಾರೆ.
-
And there’s the 101st!
— ICC (@ICC) September 6, 2021 " class="align-text-top noRightClick twitterSection" data="
Jonny Bairstow goes for a duck and England have now lost half their side.#WTC23 | #ENGvIND | https://t.co/zRhnFiKhzZ https://t.co/XcvKL4fCxv
">And there’s the 101st!
— ICC (@ICC) September 6, 2021
Jonny Bairstow goes for a duck and England have now lost half their side.#WTC23 | #ENGvIND | https://t.co/zRhnFiKhzZ https://t.co/XcvKL4fCxvAnd there’s the 101st!
— ICC (@ICC) September 6, 2021
Jonny Bairstow goes for a duck and England have now lost half their side.#WTC23 | #ENGvIND | https://t.co/zRhnFiKhzZ https://t.co/XcvKL4fCxv
ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಆಂಗ್ಲರ ಬ್ಯಾಟ್ಸ್‌ಮನ್ ಒಲಿ ಪೋಪ್ ವಿಕೆಟ್ ಪಡೆದುಕೊಳ್ಳುತ್ತಿದ್ದಂತೆ ಟೆಸ್ಟ್ನಲ್ಲಿ ವೇಗವಾಗಿ 100 ವಿಕೆಟ್ ಪಡೆದುಕೊಂಡಿರುವ ಭಾರತದ ಮೊದಲ ಬೌಲರ್ ಎಂಬ ಸಾಧನೆ ಮಾಡಿದರು. ಕಪಿಲ್ ದೇವ್ 25 ಟೆಸ್ಟ್ ಪಂದ್ಯಗಳಿಂದ 100 ವಿಕೆಟ್ ಪಡೆದುಕೊಂಡಿದ್ದರು.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ.. ಐಸಿಸಿ ತಿಂಗಳ ಶ್ರೇಷ್ಠ ಆಟಗಾರ ಗೌರವ ಪಡೆದ ಬುಮ್ರಾ..
ಟೆಸ್ಟ್ನಲ್ಲಿ ವೇಗವಾಗಿ 100 ವಿಕೆಟ್ ಪಡೆದ ಭಾರತೀಯ ವೇಗಿಗಳ ವಿವರ..
- ಜಸ್ಪ್ರೀತ್ ಬುಮ್ರಾ 24 ಟೆಸ್ಟ್ ಪಂದ್ಯ
- ಕಪಿಲ್ ದೇವ್ 25 ಟೆಸ್ಟ್ ಪಂದ್ಯ
- ಇರ್ಫಾನ್ ಪಠಾಣ್ 28 ಟೆಸ್ಟ್
- ಮೊಹಮ್ಮದ್ ಶಮಿ 29 ಟೆಸ್ಟ್
- ಜಾವಗಲ್ ಶ್ರೀನಾಥ್ 30 ಟೆಸ್ಟ್
- ಇಶಾಂತ್ ಶರ್ಮಾ 33 ಟೆಸ್ಟ್
ಇಂಗ್ಲೆಂಡ್ ವಿರುದ್ಧ ಓವಲ್ ಮೈದಾನದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಕೊನೆಯ ದಿನವಾಗಿರುವ ಇಂದು ಆಂಗ್ಲರ ತಂಡ 2ನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದೆ. ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಬೌಲರ್ಸ್ ಮೇಲಿಂದ ಮೇಲೆ ವಿಕೆಟ್ ಪಡೆದುಕೊಳ್ಳುತ್ತಿದ್ದಾರೆ.