ETV Bharat / sports

ಶಸ್ತ್ರಚಿಕಿತ್ಸೆಗಾಗಿ ಬೂಮ್ರಾ ನ್ಯೂಜಿಲ್ಯಾಂಡ್​ಗೆ ತೆರಳುವ ಸಾಧ್ಯತೆ

ಕಳೆದ ಐದು ತಿಂಗಳಿಂದ ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟ್​ ಅಂಗಳದಿಂದಲೇ ಹೊರಗುಳಿದಿರುವ ಬೂಮ್ರಾ - ಶಸ್ತ್ರಚಿಕಿತ್ಸೆಗಾಗಿ ಆಕ್ಲೆಂಡ್‌ಗೆ ಕರೆದೊಯ್ಯಲು ತಯಾರಿ - ಏಕದಿನ ವಿಶ್ವಕಪ್​ ಸಮಯದಲ್ಲಿ ಕಣಕ್ಕಿಳಿಸುವ ಸಾಧ್ಯತೆ.

bumrah-likely-to-fly-to-new-zealand-for-back-surgery-report
ಶಸ್ತ್ರಚಿಕಿತ್ಸೆಗಾಗಿ ಬೂಮ್ರಾ ನ್ಯೂಜಿಲೆಂಡ್‌ಗೆ ಹಾರುವ ಸಾಧ್ಯತೆ
author img

By

Published : Mar 2, 2023, 7:27 PM IST

ನವದೆಹಲಿ: ಭಾರತದ ವೇಗದ ಬೌಲರ್​ ಜಸ್ಪ್ರಿತ್​ ಬೂಮ್ರಾ ಅವರು ಬೆನ್ನುನೋವಿನಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗಾಗಿ ನ್ಯೂಜಿಲ್ಯಾಂಡ್​ಗೆ ಹಾರುವ ಸಾಧ್ಯತೆಯಿದೆ. ಬಿಸಿಸಿಐ ವೈದ್ಯಕೀಯ ತಂಡ ಮತ್ತು ರಾಷ್ಟ್ರೀಯ ಕ್ರಿಕೆಟ್​ ಆಕಾಡೆಮಿ (ಎನ್​ಸಿಎ) ವ್ಯವಸ್ಥಾಪಕರು ರೋವನ್​ ಸ್ಕೌಟನ್​ ಎಂಬ ಶಸ್ತ್ರಚಿಕಿತ್ಸಕರನ್ನು ಅಂತಿಮಗೊಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ರೋವನ್​ ಸ್ಕೌಟೆನ್​ ಅವರು ಇಂಗ್ಲೇಡ್​ನ ವೇಗದ ಬೌಲರ್​ ಜೋಫ್ರಾ ಆರ್ಚರ್​ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾಗ ಶಸ್ತ್ರಚಿಕಿತ್ಸೆ ಮಾಡಿ ಗುಣ ಪಡಿಸಿದ್ದರು.

ಕಳೆದ ಐದು ತಿಂಗಳಿನಿಂದ ಮೈದಾನದಿಂದ ಹೊರಗುಳಿದಿರುವ ಬೂಮ್ರಾ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಆಕ್ಲೆಂಡ್​ಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ಹಿಂದೆ ಸ್ಕೌಟನ್​ ಅವರು ಪ್ರಸಿದ್ಧ ಮೂಳೆ ಶಸ್ತ್ರ ಚಿಕಿತ್ಸಕ ಗ್ರಹಾಂ ಇಂಗ್ಲಿಸ್​ ಅವರೊಂದಿಗೆ ಕಾರ್ಯನಿರ್ವಹಿಸಿದ್ದರು. ಗ್ರಹಾಂ ಇಂಗ್ಲಿಸ್​ ಅವರು ನ್ಯೂಜಿಲ್ಯಾಂಡ್​ ಕ್ರಿಕೆಟ್​ ತಂಡದ ವೇಗದ ಬೌಲರ್​ ಶೇನ್​ ಬಾಂಡ್​ ಸೇರಿದಂತೆ ಕೆಲವು ಆಟಗಾರರಿಗೆ ಗಾಯದ ಸಮಸ್ಯೆಯಿಂದ ಹೊರಬರಲು ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಮುಂಬೈ ಇಂಡಿಯನ್ಸ್​ ತಂಡದ ಬೌಲಿಂಗ್​ ಕೋಚ್​ ಆಗಿರುವ ಶೇನ್​ ಬಾಂಡ್​ ಅವರು ಸ್ಕೌಟನ್​ ಹೆಸರನ್ನು ಸೂಚಿಸಿರುವ ಸಾಧ್ಯತೆಯಿದೆ.

ಬೆನ್ನು ನೋವಿನಿಂದ ಬೂಮ್ರಾ ಅವರು ಮೊದಲಿನಂತೆ ಚೇತರಿಸಿಕೊಳ್ಳಲು ಸುಮಾರು 20 ರಿಂದ 24 ವಾರಗಳ ಕಾಲ ಬೇಕಾಗುತ್ತದೆ. ಈ ಸಮಯದಲ್ಲಿ ಅವರು 2023ರ ಐಪಿಎಲ್​ ಆವೃತ್ತಿ ಮತ್ತು ಭಾರತ ತಂಡ ಫೈನಲ್​ಗೆ ಅರ್ಹತೆ ಹೊಂದಿದರೆ ಲಂಡನ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಪೈನಲ್​ ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು. ಬೂಮ್ರಾ ಅವರು 2022ರ ಸಪ್ಟೆಂಬರ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ-20 ಪಂದ್ಯದಲ್ಲಿ ಕೊನೆಯಾದಾಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ನಂತರ ಬೆನ್ನು ನೋವಿಗೆ ತುತ್ತಾಗಿ ಏಷ್ಯಾ ಕಪ್​ ಮತ್ತು ಟಿ20 ವಿಶ್ವಕಪ್​ನಿಂದ ಹೊರಗುಳಿದಿದ್ದರು. ಈ ವರ್ಷ ಅಕ್ಟೋಬರ್ ​ -ನವೆಂಬರ್​ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಬೂಮ್ರಾ ಅವರನ್ನು ಸಿದ್ಧಗೊಳಿಸುವುದು ಬಿಸಿಸಿಐ ಆಡಳಿತದ ಪ್ರಸ್ತುತ ಆದ್ಯತೆಯಾಗಿದೆ.

ಇದನ್ನೂ ಓದಿ: ಮಹಿಳಾ ಪ್ರೀಮಿಯರ್ ಲೀಗ್‌ 'ಶಕ್ತಿ' ಅನಾವರಣ: ವಿಡಿಯೋ

ಸೋಲಿನ ಸುಳಿಯಲ್ಲಿ ಭಾರತ: ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಮೂರನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿದೆ. ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ ರೋಹಿತ್​ ಶರ್ಮಾ ಪಡೆ ಕೇವಲ 163 ರನ್​ಗಳಿಗೆ ಆಲೌಟ್​ ಆಗಿದೆ. ಆಸೀಸ್​ ತಂಡದ ಗೆಲುವಿಗೆ 76 ರನ್​ಗಳ ಗುರಿ​ ಇದೆ. ಇಲ್ಲಿನ ಹೋಳ್ಕರ್​ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್​ನಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 109 ರನ್​ಗಳಿಗೆ ಸರ್ವಪತನ ಕಂಡಿತ್ತು. ಮತ್ತೊಂದೆಡೆ, ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 197 ರನ್​ಗಳನ್ನು ಪೇರಿಸಿತ್ತು. ಈಗ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್​ನಲ್ಲಿ 163 ರನ್​ಗಳಿಗೆ ಆಲೌಟ್​ ಆಗಿ, ಎದುರಾಳಿ ತಂಡಕ್ಕೆ ಸುಲಭ ಟಾರ್ಗೆಟ್​ ನೀಡಿದೆ.

ಇದನ್ನೂ ಓದಿ: ಮಹಿಳಾ ಪ್ರೀಮಿಯರ್ ಲೀಗ್: ಮುಂಬೈ ಇಂಡಿಯನ್ಸ್‌ಗೆ ಹರ್ಮನ್‌ಪ್ರೀತ್ ಕೌರ್ ನಾಯಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.