ETV Bharat / sports

ಐಪಿಎಲ್​ನಲ್ಲಿ 3.2 ಕೋಟಿ ರೂ. ಡೀಲ್​.. ಅಪ್ಪನ ಕನಸನ್ನು ನನಸು ಮಾಡಿದ ವೇಗಿ ಯಶ್ ದಯಾಳ್​ - ಐಪಿಎಲ್ ಯಶ್ ದಯಾಳ್

24 ವರ್ಷದ ಅಲಹಾಬಾದ್​ ಯುವ ಪೇಸರ್​ನನ್ನು ಗುಜರಾತ್​ ಟೈಟನ್ಸ್​ ಭಾನುವಾರ 3.2 ಕೋಟಿ ರೂ ನೀಡಿ ಖರೀದಿಸಿತು. ಇದು ಅವರ ಕುಟುಂಬ ಮತ್ತು ಸ್ನೇಹಿತರ ಬಳಗದಲ್ಲಿ ಸಂಭ್ರಮ ಮನೆ ಮಾಡುವಂತೆ ಮಾಡಿದೆ.

Budding pacer Yash Dayal living his father's dream after multi-million IPL deal
ಯಶ್​ ದಯಾಳ್​
author img

By

Published : Feb 15, 2022, 8:54 PM IST

ಮುಂಬೈ: 2022ರ ಐಪಿಎಲ್ ಮೆಗಾ ಹರಾಜಿನಲ್ಲಿ 3.2 ಕೋಟಿ ರೂ ಒಪ್ಪಂದ ಪಡೆಯುವ ಮೂಲಕ ಯುವ ಎಡಗೈ ವೇಗಿ ಯಶ್ ದಯಾಳ್ ದೊಡ್ಡ ಮಟ್ಟದ ಕ್ರಿಕೆಟರ್ ಆಗಿ ಗುರುತಿಸಿಕೊಳ್ಳಬೇಕೇಂಬ ಅವರ ತಂದೆ ಚಂದ್ರಪಾಲ್ ದಯಾಳ್​ ಅವರ ಕನಸನ್ನು ಇಡೇರಿಸಿಕೊಂಡಿದ್ದಾರೆ.

ಐಪಿಎಲ್ ಒಂದು ಕಡೆ ಬಡತನದ ಬೇಗೆಯಲ್ಲಿ ನಲುಗಿದವರಿಗೆ ಆರ್ಥಿಕ ಸಮಸ್ಯೆ ನಿವಾರಿಸಿಕೊಳ್ಳಲು ನೆರವಾದರೆ, ಇನ್ನೂ ಕೆಲವರಿಗೆ ಕ್ರಿಕೆಟರ್​ ಆಗಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಲು ದೊಡ್ಡ ವೇದಿಕೆಯಾಗಲಿದೆ. ಯಶ್​ ದಯಾಳ್​ ತಂದೆ ಸ್ವತಃ ಮಧ್ಯಮ ವೇಗಿಯಾಗಿ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ಆಡಿದರಾದರೂ, ಅನುವಾರ್ಯ ಕಾರಣಗಳಿಂದ ಕ್ರಿಕೆಟ್​ನಲ್ಲಿ ಮುಂದುವರಿಯಲು ಸಾಧ್ಯವಾಗದೇ ಅರ್ಧದಲ್ಲೇ ತಮ್ಮ ಕನಸನ್ನು ಮೊಟಕುಗೊಳಿಸಿದ್ದರು. ಇದೀಗ ಅವರ ಮಗ ಮಲ್ಟಿ ಮಿಲಿಯನ್ ಡಾಲರ್ ಟೂರ್ನಮೆಂಟ್​ನಲ್ಲಿ ಅವಕಾಶ ಪಡೆಯುವ ಮೂಲಕ ಅಪ್ಪನ ಆಸೆ ಈಡೇರಿಸಿದ್ದಾರೆ.

24 ವರ್ಷದ ಅಲಹಾಬಾದ್​ ಯುವ ಪೇಸರ್​ನನ್ನು ಗುಜರಾತ್​ ಟೈಟನ್ಸ್​ ಭಾನುವಾರ 3.2 ಕೋಟಿ ರೂ ನೀಡಿ ಖರೀದಿಸಿತು. ಇದು ಅವರ ಕುಟುಂಬ ಮತ್ತು ಸ್ನೇಹಿತರ ಬಳಗದಲ್ಲಿ ಸಂಭ್ರಮ ಮನೆಮಾಡುವಂತೆ ಮಾಡಿದೆ.

ಇದನ್ನೂ ಓದಿ:ಗುಡಿಸಲಿನಲ್ಲಿ ವಾಸ, 9 ವರ್ಷ ಪ್ಲಂಬರ್ ಆಗಿ​ ಕೆಲಸ.. ಅದೇ ಯುವಕನಿಗೆ ಸಿಕ್ತು ರಣಜಿ ತಂಡದಲ್ಲಿ ಚಾನ್ಸ್​!

ಯಶ್ ತಂದೆ ಕೂಡ ಕ್ರಿಕೆಟಿಗ, ಅವರು ವಿಜಯ ಹಜಾರೆ ಟ್ರೋಪಿಯಲ್ಲಿ ಆಡಿದ್ದರು, ಅವರೂ ಕೂಡ ಮಧ್ಯಮ ವೇಗಿ, ಆದರೆ ಕೆಲವು ಕಾರಣಗಳಿಂದ ಕ್ರಿಕೆಟ್​ನಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಅವರು ಪ್ರಸ್ತುತ ಅಲಹಬಾದ್​ನ ಎಜಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟಿಗನಾಗುವ ಅವರ ಕನಸನ್ನು ಮಗ ಈಡೇರಿಸಿದ್ದಾರೆ ಎಂದು ಯಶ್ ಕೋಚ್​ ಅಮಿತ್ ಪಾಲ್ ಪಿಟಿಐಗೆ ತಿಳಿಸಿದ್ದಾರೆ.

ಚಂದ್ರಪಾಲ್, ಯಶ್​ನನ್ನು ನನ್ನ ಬಳಿ ತಂದು ಬಿಟ್ಟಾಗ ಆತನ ವಯಸ್ಸು 14-15 ಆಗಿತ್ತು. ನಾನು ಆಗ ಮದನ್ ಮೋಹನ ಮಾಳವೀಯ ಸ್ಟೇಡಿಯಂನಲ್ಲಿ ಕ್ರಿಕೆಟ್ ಕೋಚ್​ ಆಗಿದ್ದೆ. ಆತ ವಯೋಮಾನದ ಕ್ರಿಕೆಟ್​ ಆಡುತ್ತಲೇ ತಮ್ಮ ಸಾಮರ್ಥ್ಯವನ್ನು ತೋರಿಸಿಕೊಂಡಿದ್ದರು ಎಂದು ಬಣ್ಣಿಸಿದ್ದಾರೆ.

ಯಶ್​ ಅಂಡರ್​ 19 ಕ್ಯಾಂಪ್​ಗೆ ಆಯ್ಕೆಯಾಗಿದ್ದ, ಆದರೆ ಆ ಬಾರಿ ಅಂಡರ್ 19 ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಆದರೆ ಅವನು ತನ್ನ ಕಠಿಣ ಶ್ರಮವನ್ನು ಮುಂದುವರಿಸಿ ಅಂಡರ್ 23ರ ತಂಡದಲ್ಲಿ ಅವಕಾಶ ಪಡೆದ. ಆದರೆ, ಅಲ್ಲೂ ಕೂಡ ಮೊದಲ ಒಂದರೆಡು ಪಂದ್ಯಗಳಲ್ಲಿ 1 ಅಥವಾ 2 ವಿಕೆಟ್ ಪಡೆದಿದ್ದ. ನಂತರದ ಪಂದ್ಯದಲ್ಲಿ ಕಮ್​​ಬ್ಯಾಕ್ ಮಾಡಿ ಮಧ್ಯಪ್ರದೇಶದ ವಿರುದ್ಧ 8 ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದನು. ರಣಜಿ ಟ್ರೋಫಿಯಲ್ಲಿ ಆತನ ಕ್ರಿಕೆಟ್ ಬೆಳವಣಿಗೆ ದಿನದಿಂದ ದಿನಕ್ಕೆ ಹೆಚ್ಚಾಯಿತು ಎಂದು ಪಾಲ್ ಹೇಳಿದ್ದಾರೆ.

ಉತ್ತರ ಪ್ರದೇಶ ವಿಜಯ ಹಜಾರೆ ಟ್ರೋಫಿಯಲ್ಲಿ ಫೈನಲ್ ಪ್ರವೇಶ ಮಾಡಿದ್ದ ವೇಳೆ ಯಶ್​ ನಾಕೌಟ್​ ಪಂದ್ಯಗಳಲ್ಲಿ ಅವಕಾಶ ಪಡೆದಿದ್ದರು. ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಸರಣಿಯ ನೆಟ್​ ಬೌಲರ್​ ಆಗಿಯೂ ಕೂಡ ಆಯ್ಕೆಯಾಗಿದ್ದರು ಎಂದು ಪಾಲ್ ನೆನೆಪಿಸಿಕೊಂಡರು.

ಚಿಕ್ಕಂದಿನಿಂದ ಯಶ್​ ದಯಾಳ್​ ಅವರನ್ನು ಹತ್ತಿರದಿಂದ ನೋಡಿರುವ ಪಾಲ್, ನಾನು ಆತನಿಗೆ ಒಂದು ಹಂತಕ್ಕೆ ತಲುಪಿದ್ದೀಯ, ಇನ್ಮುಂದೆ ನಿನ್ನ ಪರಿಶ್ರಮವನ್ನು ದುಪ್ಪಟ್ಟು ಮಾಡು, ದೊಡ್ಡ ಮಟ್ಟದ ಕ್ರಿಕೆಟ್​ ಆಡುವಾಗಿ ನೀನು ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿರುವುದಾಗಿ ಯಶ್​ ಕೋಚ್​ ತಿಳಿಸಿದ್ದಾರೆ.

ಇದನ್ನೂ ಓದಿ:ಟೆನಿಸ್​ ಬಾಲ್ ಕ್ರಿಕೆಟ್​ ಮೂಲಕವೇ ಕೆಕೆಆರ್​ ತಂಡದಲ್ಲಿ ಚಾನ್ಸ್​ ಗಿಟ್ಟಿಸಿಕೊಂಡ ಚಮ್ಮಾರನ ಮಗ.. ಇಲ್ಲಿದೆ​ ರೋಚಕ ಕ್ರಿಕೆಟ್ ಜರ್ನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.