ಚೆನ್ನೈ: ಸನ್ರೈಸರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಅಸ್ಥಿರ ಬ್ಯಾಟಿಂಗ್ ಬಳಗವನ್ನು ಹೊಂದಿರುವ ಪಂಜಾಬ್ ಕಿಂಗ್ಸ್ ತಂಡ ಇಂದೂ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 120 ರನ್ಗಳಿಸಿ ಸರ್ವಫತನಗೊಂಡಿದೆ
ಬೌಲಿಂಗ್ ಸ್ನೇಹಿ ಪಿಚ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಇನ್ಫಾರ್ಮ್ ಬ್ಯಾಟ್ಸ್ಮನ್ ನಾಯಕ ಕೆಎಲ್ ರಾಹುಲ್ ಕೇವಲ 4 ರನ್ಗಳಿಸಿ ಭುವನೇಶ್ವರ್ ಬೌಲಿಂಗ್ನಲ್ಲಿ ಕೇದಾರ್ ಜಾದವ್ಗೆ ವಿಕೆಟ್ ಒಪ್ಪಿಸಿದರು. ಇವರ ವಿಕೆಟ್ ಬೀಳುತ್ತಿದ್ದಂತೆ ಪಂಜಾಬ್ ನಿರಂತರವಾಗಿ ವಿಕೆಟ್ ಕಳೆದುಕೊಂಡಿತ್ತಲ್ಲದೆ, ರನ್ರೇಟ್ ಹೆಚ್ಚಿಸಿಕೊಳ್ಳಲು ಸಹಾ ವಿಫಲವಾಯಿತು.
-
.@SunRisers bowl #PBKS out for 120 runs in Chennai.
— IndianPremierLeague (@IPL) April 21, 2021 " class="align-text-top noRightClick twitterSection" data="
Scorecard - https://t.co/THdvFfevMJ #PBKSvSRH #VIVOIPL pic.twitter.com/MsoKvkBk05
">.@SunRisers bowl #PBKS out for 120 runs in Chennai.
— IndianPremierLeague (@IPL) April 21, 2021
Scorecard - https://t.co/THdvFfevMJ #PBKSvSRH #VIVOIPL pic.twitter.com/MsoKvkBk05.@SunRisers bowl #PBKS out for 120 runs in Chennai.
— IndianPremierLeague (@IPL) April 21, 2021
Scorecard - https://t.co/THdvFfevMJ #PBKSvSRH #VIVOIPL pic.twitter.com/MsoKvkBk05
ರಾಹುಲ್ ನಂತರ ನಿಧಾನಗತಿ ಬ್ಯಾಟಿಂಗ್ ಮೊರೆ ಹೋದ ಗೇಲ್ ಮತ್ತು ಮಯಾಂಕ್ 24 ರನ್ಗಳ ಜೊತೆಯಾಟ ನಡೆಸಿದರು. 25 ಎಸೆಗಳಲ್ಲಿ 22 ರನ್ಗಳಿಸಿದ್ದ ಮಯಾಂಕ್ ಖಲೀಲ್ ಅಹ್ಮದ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಅದೇ ಓವರ್ನಲ್ಲಿ ಪೂರನ್(0) ಕೂಡ ರನ್ಔಟ್ ಆಗುವ ಮೂಲಕ ಪಂಜಾಬ್ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.
ವಿಕೆಟ್ ಬೀಳುತ್ತಿದ್ದರೂ ಪಂಜಾಬ್ನ ಯಾವುದೇ ಬ್ಯಾಟ್ಸ್ಮನ್ ಕ್ರೀಸ್ನಲ್ಲಿ ನಿಂತು ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. ಶಾರುಖ್ ಖಾನ್ 17 ಎಸೆತಗಳಲ್ಲಿ 22 ರನ್ಗಳಿಸಿದ್ದೇ ತಂಡದ ಗರಿಷ್ಠ ಮೊತ್ತವಾಯಿತು. ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ 15, ದೀಪಕ್ ಹೂಡ 13, ಮೋಯಿಸನ್ ಹೆನ್ರಿಕ್ಸ್ 14 ಫ್ಯಾಬಿಯನ್ ಅಲೆನ್ 6 ರನ್ಗಳಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ಹಿಂತಿರುಗಿದರು. ಮುರುಗನ್ ಅಶ್ವಿನ್ 8 ಮೊಹಮ್ಮದ್ ಶಮಿ 3 ರನ್ಗಳಿಸಿದರು
ಪಂಜಾಬ್ ಕಿಂಗ್ಸ್ ತಂಡ 19.4 ಓವರ್ಗಳಲ್ಲಿ 120 ರನ್ಗಳಿಗೆ ಆಲೌಟ್ ಆಯಿತು. ಹೈದರಾಬಾದ್ ಪರ ಯುವ ಆಲ್ರೌಂಡರ್ ಅಭಿಷೇಕ್ ಶರ್ಮಾ 24ಕ್ಕೆ 2, ಖಲೀಲ್ ಅಹ್ಮದ್ 21ಕ್ಕೆ 3, ಭುವನೇಶ್ವರ್, ರಶೀದ್ ಮತ್ತು ಸಿದ್ಧಾರ್ಥ್ ಕೌಲ್ ತಲಾ ಒಂದು ವಿಕೆಟ್ ಪಡೆದು ಪಂಜಾಬ್ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದರು.