ಅಬು ದಾಬಿ: ಕೋಲ್ಕತ್ತಾ ನೈಟ್ ರೈಡರ್ಸ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿ ಕೇವಲ 92 ರನ್ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ ಸ್ವತಃ 5ರನ್ಗಳಿಸಿ ಪ್ರಸಿಧ್ ಕೃಷ್ಣ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದು, ತಮ್ಮ 200ನೇ ಪಂದ್ಯದಲ್ಲಿ ನಿರಾಶೆಯನುಭವಿಸಿದರು.
ನಂತರ ನಿಧಾನಗತಿ ಬ್ಯಾಟಿಂಗ್ ಮೊರೆ ಹೋದ ಯುವ ಆಟಗಾರರಾದ ದೇವದತ್ ಪಡಿಕ್ಕಲ್(22) ಮತ್ತು ಪದಾರ್ಪಣೆ ಬ್ಯಾಟ್ಸ್ಮನ್ ಶ್ರೀಕಾರ್ ಭರತ್(16) 2ನೇ ವಿಕೆಟ್ಗೆ 31 ರನ್ ಸೇರಿಸಿದರು. ಪಡಿಕ್ಕಲ್(22) ಲಾಕಿ ಫರ್ಗ್ಯುಸನ್ ಬೌಲಿಂಗ್ನಲ್ಲಿ ಕಾರ್ತಿಕ್ಗೆ ಕ್ಯಾಚ್ ನೀಡಿ ನಿರ್ಗಮಿಸುತ್ತಿದ್ದಂತೆ ಆರ್ಸಿಬಿ ಅಧಃಫತನ ಆರಂಭವಾಯಿತು.
ನಂತರ 16 ರನ್ಗಳಿಸಿದ್ದ ಭರತ್ ವಿಂಡೀಸ್ ದೈತ್ಯ ರಸೆಲ್ ಬೌಲಿಂಗ್ನಲ್ಲಿ ಗಿಲ್ಗೆ ಕ್ಯಾಚ್ ನೀಡಿದರೆ, ನಂತರದ ಎಸೆತದಲ್ಲಿ ಎಬಿ ಡಿ ವಿಲಿಯರ್ಸ್ ಕ್ಲೀನ್ ಬೌಲ್ಡ್ ಆಗಿ ಗೋಲ್ಡನ್ ಡಕ್ ಆದರು.
-
Innings Break!
— IndianPremierLeague (@IPL) September 20, 2021 " class="align-text-top noRightClick twitterSection" data="
A superb performance from #KKR. From start to finish, they were excellent, with all their bowlers doing a vital job.#RCB are all out for 92 runs with 1 over to spare.
Scorecard - https://t.co/1A9oYR0vsK #KKRvRCB #VIVOIPL pic.twitter.com/LBFbLTkVRf
">Innings Break!
— IndianPremierLeague (@IPL) September 20, 2021
A superb performance from #KKR. From start to finish, they were excellent, with all their bowlers doing a vital job.#RCB are all out for 92 runs with 1 over to spare.
Scorecard - https://t.co/1A9oYR0vsK #KKRvRCB #VIVOIPL pic.twitter.com/LBFbLTkVRfInnings Break!
— IndianPremierLeague (@IPL) September 20, 2021
A superb performance from #KKR. From start to finish, they were excellent, with all their bowlers doing a vital job.#RCB are all out for 92 runs with 1 over to spare.
Scorecard - https://t.co/1A9oYR0vsK #KKRvRCB #VIVOIPL pic.twitter.com/LBFbLTkVRf
17 ಎಸೆತಗಳನ್ನೆದುರಿಸಿದರೂ ಲಯ ಕಳೆದುಕೊಳ್ಳಲು ವಿಫಲರಾದ ಆಸ್ಟ್ರೇಲಿಯಾ ಸ್ಪೋಟಕ ಬ್ಯಾಟ್ಸ್ಮನ್ ಮ್ಯಾಕ್ಸ್ವೆಲ್ ಕೇವಲ 10 ರನ್ಗಳಿಸಿ ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಮ್ಯಾಕ್ಸ್ವೆಲ್ ವಿಕೆಟ್ ಪತನದೊಂದಿಗೆ ಆರ್ಸಿಬಿಯ ಸ್ಪರ್ಧಾತ್ಮಕ ಮೊತ್ತದ ಕನಸು ಕೂಡ ನುಚ್ಚು ನೂರಾಯಿತು.
ನಂತರ ಬಂದ ಹಸರಂಗ(0), ಸಚಿನ್ ಬೇಬಿ(7),ಕೈಲ್ ಜೆಮೀಸನ್(4) ಹರ್ಷಲ್ ಪಟೇಲ್ (12) ಮತ್ತು ಸಿರಾಜ್ (8) ರನ್ಗಳಿಸಿ ಔಟಾದರು.
ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ 13ಕ್ಕೆ 3, ಆ್ಯಂಡ್ರೆ ರಸೆಲ್ 9ಕ್ಕೆ3, ಲಾಕಿ ಫರ್ಗ್ಯುಸನ್ 24ಕ್ಕೆ 2 ಮತ್ತು ಪ್ರಸಿಧ್ ಕೃಷ್ಣ 24ಕ್ಕೆ 1 ವಿಕೆಟ್ ಪಡೆದು ಆರ್ಸಿಬಿಯನ್ನು 100ರೊಳಗೆ ಕಟ್ಟಿಹಾಕಿದರು.
ಇದನ್ನು ಓದಿ: ನೀವು ಆರ್ಸಿಬಿ ಪರ 350-400 ಪಂದ್ಯಗಳನ್ನಾಡುತ್ತೀರಿ ಎಂಬ ವಿಶ್ವಾಸವಿದೆ : ಕೊಹ್ಲಿಗೆ ಆರ್ಸಿಬಿ ಬಳಗದಿಂದ ಅಭಿನಂದನೆ