ETV Bharat / sports

ಭಾರತೀಯ ಕ್ರೀಡಾಭಿಮಾನಿಗಳೊಂದಿಗೆ ಕೇಕ್​ ಕತ್ತರಿಸಿ, ಬರ್ತಡೇ ಆಚರಿಸಿಕೊಂಡ ಶಮಿ

author img

By

Published : Sep 4, 2021, 4:22 AM IST

31ನೇ ವಸಂತಕ್ಕೆ ಕಾಲಿಟ್ಟಿರುವ ಮೊಹಮ್ಮದ್ದ ಶಮಿ ನಿನ್ನೆ ಒವಲ್​ ಮೈದಾನದಲ್ಲಿ ಭಾರತೀಯ ಕ್ರೀಡಾಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ, ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

Bowler Shami
Bowler Shami

ಓವಲ್​​: ಟೀಂ ಇಂಡಿಯಾದ ವೇಗದ ಬೌಲರ್​ ಮೊಹಮ್ಮದ್​ ಶಮಿ ನಿನ್ನೆ 31ನೇ ವಸಂತಕ್ಕೆ ಕಾಲಿಟ್ಟಿದ್ದು, ಓವರ್​​ನಲ್ಲಿ ಭಾರತೀಯ ಕ್ರೀಡಾಭಿಮಾನಿಗಳೊಂದಿಗೆ ಕೇಕ್​ ಕತ್ತರಿಸಿ, ಬರ್ತಡೇ ಆಚರಣೆ ಮಾಡಿಕೊಂಡಿದ್ದಾರೆ.

ಓವಲ್​​ ಮೈದಾನದಲ್ಲಿ ಸದ್ಯ ಭಾರತ-ಇಂಗ್ಲೆಂಡ್ ನಡುವೆ ನಾಲ್ಕನೇ ಟೆಸ್ಟ್​​ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ವೇಗದ ಬೌಲರ್​​ ಮೊಹಮ್ಮದ್​​ ಶಮಿಗೆ ವಿಶ್ರಾಂತಿ ನೀಡಲಾಗಿದ್ದು, ಉಮೇಶ್​ ಯಾದವ್​ ಆಡುವ 11ರ ಬಳಗದಲ್ಲಿದ್ದಾರೆ.

ಇದನ್ನೂ ಓದಿರಿ: 2ನೇ ಇನ್ನಿಂಗ್ಸ್​​ನಲ್ಲಿ ವಿಕೆಟ್​ನಷ್ಟವಿಲ್ಲದೇ 43ರನ್​ಗಳಿಸಿದ ಭಾರತ, 56ರನ್​ಗಳ ಹಿನ್ನಡೆ!

ಪಂದ್ಯ ವೀಕ್ಷಣೆ ಮಾಡಲು ಬಂದಿದ್ದ ಭಾರತೀಯ ಕ್ರೀಡಾಭಿಮಾನಿಗಳ ಪೈಕಿ ಓರ್ವ ವ್ಯಕ್ತಿ ‘Happy Birthday Shami’ ಎಂದು ಬರೆಯಲಾಗಿದ್ದ ಟಿ-ಶರ್ಟ್​ ಹಾಕಿಕೊಂಡಿದ್ದರು. ಕೇಕ್​ ತೆಗೆದುಕೊಂಡು ಬಂದು, ಅದನ್ನ ಕತ್ತರಿಸುವಂತೆ ಮೊಹಮ್ಮದ್​ ಶಮಿ ಬಳಿ ವಿನಂತಿ ಸಹ ಮಾಡಿಕೊಂಡಿದ್ದನು ಈ ವೇಳೆ ಅಲ್ಲಿಗೆ ಆಗಮಿಸಿದ ವೇಗದ ಬೌಲರ್ ಕೇಕ್​ ಕತ್ತರಿಸಿದ್ದಾರೆ. ಇದರ ವಿಡಿಯೋ ಸದ್ಯ ಟ್ವಿಟರ್​​ನಲ್ಲಿ ಶೇರ್ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.