ETV Bharat / sports

ತಂಡ ಗೆದ್ದಲ್ಲಿ ಪ್ರತೀ ಆಟಗಾರನಿಗೂ 10 ಲಕ್ಷ ಮೌಲ್ಯದ ನಿವೇಶನ ಉಡುಗೊರೆ: ಬಿಜೆಪಿ ನಾಯಕ - ವಿಶ್ವಕಪ್​ 2023

BJP leader give plots Indian team players: ಭಾರತ ತಂಡ ಗೆದ್ದಲ್ಲಿ 15 ಆಟಗಾರು ಮತ್ತು ಕೋಚ್​ಗೆ ಒಂದೊಂದು ನಿವೇಶನ ಉಡುಗೊರೆ ಕೊಡುವುದಾಗಿ ಬಿಜೆಪಿ ನಾಯಕ ತಿಳಿಸಿದ್ದಾರೆ.

BJP leader give plots Indian team players

author img

By ETV Bharat Karnataka Team

Published : Nov 18, 2023, 7:39 PM IST

ರಾಜ್‌ಕೋಟ್ (ಗುಜರಾತ್​): 2023ರ ವಿಶ್ವಕಪ್​ ಯಾರ ಪಾಲಾಗಲಿದೆ ಎಂಬುದಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಕ್ರೀಡಾ ಅಭಿಮಾನಿಗಳು ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಭಾರತ ತಂಡ ಗೆಲ್ಲಲಿ ಎಂದು ನಾನಾ ರೀತಿ ಪ್ರಾರ್ಥನೆ ಪೂಜೆಗಳನ್ನು ಮಾಡಲಾಗುತ್ತಿದೆ. ಈ ನಡುವೆ ಬಿಜೆಪಿ ನಾಯಕ ಭಾರತ ತಂಡ ಗೆದ್ದಲ್ಲಿ ಪ್ರತಿ ಆಟಗಾರನಿಗೆ ಒಂದೊಂದು ನಿವೇಶನ ನೀಡುವುದಾಗಿ ಹೇಳಿದ್ದಾರೆ.

BJP leader Keur Dholariya will give each player a plot if the Indian team wins the World Cup
ತಂಡ ಗೆದ್ದಲ್ಲಿ ಪ್ರತೀ ಆಟಗಾರನಿಗೂ 10 ಲಕ್ಷ ಮೌಲ್ಯದ ನಿವೇಶನ ಉಡುಗೊರೆ

ನಡೆಯುತ್ತಿರುವ ವಿಶ್ವಕಪ್​ನಲ್ಲಿ ರೋಹಿತ್​ ಶರ್ಮಾ ಅವರ ನಾಯಕತ್ವದಲ್ಲಿ ಟೀಮ್​ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದೆ. ಲೀಗ್​ ಹಂತದಲ್ಲಿ 9 ಪಂದ್ಯಗಳನ್ನು ಗೆದ್ದಿದ್ದು, ಸೆಮೀಸ್​ನಲ್ಲೂ ಜಯದ ಓಟ ಮುಂದುವರೆಸಿ ಫೈನಲ್​ಗೆ ಪ್ರವೇಶಿಸಿದೆ. ತಂಡ ಎಲ್ಲ ವಿಭಾಗದಲ್ಲೂ ಅದ್ಭುತವಾಗಿದ್ದು, ಗೆಲ್ಲುವ ಫೇವರಿಟ್​​ ಆಗಿದೆ.

ಭಾರತ ತಂಡ ಗೆದ್ದಲ್ಲಿ ಪ್ರತಿ ಆಟಗಾರರಿಗೆ ನಿವೇಶನ ಒಂದನ್ನು ನೀಡುವುದಾಗಿ ರಾಜ್‌ಕೋಟ್ ಜಿಲ್ಲಾ ಬಿಜೆಪಿ ನಾಯಕ ಕೆಯೂರ್ ಧೋಲಾರಿಯಾ ಘೋಷಿಸಿದ್ದಾರೆ. "ಭಾರತ ತಂಡ ವಿಶ್ವಕಪ್‌ ಗೆದ್ದರೆ 15 ಆಟಗಾರರು, ಕೋಚ್‌ ಸೇರಿದಂತೆ 16 ಮಂದಿಗೆ ನಿವೇಶನ ನೀಡಲಾಗುವುದು. ಈ ನಿವೇಶನಗಳು ಭಯಸರ್ - ಕತ್ರೋಟ್ ಶಿವಂ ಜೆಮಿನ್ ಇಂಡಸ್ಟ್ರೀಸ್ ವಲಯದಲ್ಲಿದೆ" ಎಂದು ರಾಜ್‌ಕೋಟ್‌ ತಾಲೂಕಿನ ಸರಪಂಚ್‌ ಸಂಘದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಕೆಯೂರ್‌ ಧೋಲಾರಿಯಾ ಹೇಳಿದ್ದಾರೆ.

ರಾಜ್‌ಕೋಟ್ ಬಳಿ ಲೊಥ್ರಾ ಇಂಡಸ್ಟ್ರೀಸ್ ವಲಯದ 50 ಎಕರೆ ಪ್ರದೇಶದಲ್ಲಿ ನಾವು ಶಿವಂ ಇಂಡಸ್ಟ್ರೀಸ್ ವಲಯವನ್ನು ನಿರ್ಮಿಸುತ್ತಿದ್ದೇವೆ. ಅಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ. ಅಲ್ಲಿ ಆಟಗಾರರಿಗೆ ನಿವೇಶನಗಳನ್ನು ನೀಡಲಾಗುತ್ತದೆ. ಆಟಗಾರರಿಗೆ ನೀಡಿರುವ ನಿವೇಶನದ ಬೆಲೆ 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ನಾವು ಕ್ರಿಕೆಟ್ ಮಂಡಳಿಯನ್ನು ಸಂಪರ್ಕಿಸಿ ಭಾರತೀಯ ಕ್ರಿಕೆಟಿಗರಿಗೆ ಈ ನಿವೇಶನವನ್ನು ನೀಡಲಿದ್ದೇವೆ. ಅದರ ನಂತರ, ಯಾವುದೇ ಕ್ರಿಕೆಟಿಗರು ಈ ನಿವೇಶನಗಳನ್ನು ಅವರ ಕುಟುಂಬ ಸದಸ್ಯರಿಗೆ ವರ್ಗಾಯಿಸಲು ಬಯಸಿದರೆ, ನಾವು ಅದನ್ನು ಸಹ ಮಾಡುತ್ತೇವೆ. ನಮ್ಮ ಕೈಗಾರಿಕಾ ಪ್ರದೇಶದಲ್ಲಿ 230 ಪ್ಲಾಟ್‌ಗಳಿವೆ. ಅದರಲ್ಲಿ ಆಟಗಾರರಿಗೆ 16 ಪ್ಲಾಟ್‌ಗಳನ್ನು ಕಾಯ್ದಿರಿಸಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ.

ನಾಳೆ ಬಿಗ್ ಮ್ಯಾಚ್: ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಬಿಗ್ ಮ್ಯಾಚ್ ನಡೆಯಲಿದೆ. 2023ರ ವಿಶ್ವಕಪ್​ನ ಫೈನಲ್​ ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ಮೋದಿ ಉಪಸ್ಥಿತರಿರಲಿದ್ದಾರೆ. ಅಲ್ಲದೇ ಪಂದ್ಯಕ್ಕೂ ಮುನ್ನ ಏರ್​ಶೋ ನಡೆಯಲಿದೆ. ಇನ್ನಿಂಗ್ಸ್​ ನಡುವೆ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲು ಚಿಂತಿಸಲಾಗಿದೆ.

ಇದನ್ನೂ ಓದಿ: ಟೀಮ್​ ಇಂಡಿಯಾಕ್ಕೆ ದೊಡ್ಡ ಬೆಂಬಲ ಇರುತ್ತದೆ, ಅದನ್ನು ಎದುರಿಸುವುದೇ ತಂಡಕ್ಕೆ ಸವಾಲು: ಕಮಿನ್ಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.