ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಪಂಜಾಬ್ ಸೇರಿದಂತೆ ಇತರೆ ದೇಶಿ ತಂಡದಲ್ಲಿ ಆಡಿದ್ದ ಬಿಪುಲ್ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಅವರು ಭವಿಷ್ಯದಲ್ಲಿ ಅಮೆರಿಕಾದಲ್ಲಿ ಕ್ರಿಕೆಟ್ ಆಡುವುದಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
25 ವರ್ಷಗಳ ಕಾಲ ಕ್ರಿಕೆಟ್ ಆಡಿರುವ 38 ವರ್ಷದ ಕ್ರಿಕೆಟರ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ಇದು ತಮ್ಮ ವೃತ್ತಿ ಜೀವನಕ್ಕೆ ತೆರೆ ಎಳೆಯಲು ಸಕಾಲ ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಈ ಕ್ರಿಕೆಟ್ ಕ್ರೀಡೆಯಲ್ಲಿ ನನ್ನ ಪಯಣ ಗಮನಾರ್ಹವಾದದ್ದಾಗಿದೆ. ನನ್ನನ್ನು ನಿರಂತರವಾಗಿ ಬೆಂಬಲಿಸಿದ್ದಕ್ಕಾಗಿ ಕುಟುಂಬಕ್ಕೆ, ಕೋಚ್ಗಳಿಗೆ ಮತ್ತು ಹಿತೈಷಿಗಳ ಪ್ರೋತ್ಸಾಹಕ್ಕೆ ಧನ್ಯವಾದ ಅರ್ಪಿಸುತ್ತೇನೆ.
ನನಗೆ ಪ್ರತಿನಿಧಿಸಲು ಅವಕಾಶ ನೀಡಿದ ಪಂಜಾಬ್, ಹಿಮಾಚಲಪ್ರದೇಶ ಮತ್ತು ಸಿಕ್ಕಿಂ ಕ್ರಿಕೆಟ್ ಅಸೋಸಿಯೇಷನ್ಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಯುಎಸ್ನಲ್ಲಿ ಕ್ರಿಕೆಟ್ ಆಡಲು ಶರ್ಮಾ ನಿರ್ಧಾರ
ಶರ್ಮಾ ತಮ್ಮ ಜೀವನದ ಮುಂದಿನ ಹಂತದಲ್ಲಿ ಮಕ್ಕಳು ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸಿದ್ದಾರೆ. ಜೊತೆಗೆ ಅಮೆರಿಕಾದಲ್ಲಿ ಕ್ರಿಕೆಟ್ ಆಡುವುದಾಗಿ ತಿಳಿಸಿದ್ದಾರೆ.
ಈಗಾಗಲೇ 2012ರಲ್ಲಿ ಭಾರತಕ್ಕೆ ಅಂಡರ್ 19 ವಿಶ್ವಕಪ್ ತಂದುಕೊಟ್ಟಿದ್ದ ಉನ್ಮುಕ್ತ್ ಚಾಂದ್ ಕೂಡ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಅಮೆರಿಕಾಗೆ ತೆರಳಿದ್ದಾರೆ. ಅವರು ಈಗಾಗಲೇ ಅಲ್ಲಿನ ಸ್ಥಳೀಯ ಟೂರ್ನಿಗಳಲ್ಲಿ ಆಡುತ್ತಿದ್ದಾರೆ.
-
Crucial cameos in the playoffs. ✅
— SunRisers Hyderabad (@SunRisers) December 27, 2021 " class="align-text-top noRightClick twitterSection" data="
Wicket of AB de Villiers in the final. ✅
Thank you @sharmabipul27 for the memories 🧡#OrangeArmy 📸: IPL pic.twitter.com/K7A3D006oK
">Crucial cameos in the playoffs. ✅
— SunRisers Hyderabad (@SunRisers) December 27, 2021
Wicket of AB de Villiers in the final. ✅
Thank you @sharmabipul27 for the memories 🧡#OrangeArmy 📸: IPL pic.twitter.com/K7A3D006oKCrucial cameos in the playoffs. ✅
— SunRisers Hyderabad (@SunRisers) December 27, 2021
Wicket of AB de Villiers in the final. ✅
Thank you @sharmabipul27 for the memories 🧡#OrangeArmy 📸: IPL pic.twitter.com/K7A3D006oK
ಬಿಪುಲ್ ಶರ್ಮಾ 59 ಪ್ರಥಮ ದರ್ಜೆ ಮತ್ತು 96 ಲಿಸ್ಟ್ ಎ ಪಂದ್ಯಗಳನ್ನಾಡಿದ್ದಾರೆ. ಕ್ರಮವಾಗಿ 126 ಮತ್ತು 96 ವಿಕೆಟ್ ಪಡೆದಿದ್ದಾರೆ. ಜೊತೆಗೆ 3012 ಮತ್ತು 1620 ರನ್ಗಳಿಸಿದ್ದಾರೆ. ಐಪಿಎಲ್ನಲ್ಲೂ 33 ಪಂದ್ಯಗಳಿಂದ 17 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:ರೋಹಿತ್ಗೆ ಏಕದಿನ ನಾಯಕತ್ವ ವಹಿಸಿದ್ದು ಒಳ್ಳೆಯ ನಿರ್ಧಾರ: ರವಿಶಾಸ್ತ್ರಿ