ಸೌತಾಂಪ್ಟನ್ (ಇಂಗ್ಲೆಂಡ್): ಇಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿರುವುದು ಗೊತ್ತಿರುವ ಸಂಗತಿ. ಆದ್ರೆ ಇದೇ ಪಂದ್ಯದಲ್ಲಿ ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರು ಪಡೆದ ವಿಕೆಟ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದಿಲ್ಲದೇ ವೈರಲ್ ಆಗ್ತಿದೆ.
-
BOWLED!
— Doordarshan Sports (@ddsportschannel) July 7, 2022 " class="align-text-top noRightClick twitterSection" data="
Bhuvneshwar Kumar gets the big wicket, Jos Buttler gone for duck 🙌 #ENGvIND pic.twitter.com/NClQLHXFgp
">BOWLED!
— Doordarshan Sports (@ddsportschannel) July 7, 2022
Bhuvneshwar Kumar gets the big wicket, Jos Buttler gone for duck 🙌 #ENGvIND pic.twitter.com/NClQLHXFgpBOWLED!
— Doordarshan Sports (@ddsportschannel) July 7, 2022
Bhuvneshwar Kumar gets the big wicket, Jos Buttler gone for duck 🙌 #ENGvIND pic.twitter.com/NClQLHXFgp
ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ಗಳಿಗೆ 198 ರನ್ ಕಲೆ ಹಾಕುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಬೃಹತ್ ಗುರಿ ನೀಡಿತು. ಈ ಸವಾಲಿನ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಭಾರತದ ವೇಗಿಗಳು ಆಘಾತದ ಮೇಲೆ ಆಘಾತವನ್ನೇ ನೀಡಿದರು. ಆರಂಭಿಕರಾಗಿ ಜಾಸನ್ ರಾಯ್ ಮತ್ತು ಜೋಸ್ ಬಟ್ಲರ್ ಕಣಕ್ಕಿಳಿದಿದ್ದರು. ಇತ್ತ ಭುವನೇಶ್ವರ್ ಕುಮಾರ್ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದರು. ಮೊದಲ ನಾಲ್ಕು ಎಸೆತಗಳನ್ನು ಎದುರಿಸಿದ ಜಾಸನ್ ರಾಯ್ 1 ರನ್ ಕಲೆ ಹಾಕಿ ಬಟ್ಲರ್ಗೆ ಬ್ಯಾಟಿಂಗ್ ನೀಡಿದರು. ಆದ್ರೆ, ಬಟ್ಲರ್ ಭುವಿ ಎಸೆದ ಅದ್ಭುತ ಇನ್ಸ್‌ವಿಂಗರ್‌ಗೆ ಕ್ಲೀನ್ ಬೌಲ್ಡ್ ಆದರು.
ಇದನ್ನೂ ಓದಿ: IND vs ENG 1st T20: ಹಾರ್ದಿಕ್ ಅಬ್ಬರಕ್ಕೆ ಇಂಗ್ಲೆಂಡ್ ತತ್ತರ; ಭಾರತಕ್ಕೆ ಅಮೋಘ ವಿಜಯ
ಸೌತಾಂಪ್ಟನ್‌ನ ರೋಸ್ ಬೌಲ್‌ನಲ್ಲಿ ಗುರುವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಟಿ20ಯಲ್ಲಿ ಆತಿಥೇಯರು 50 ರನ್‌ಗಳ ಸೋಲು ಅನುಭವಿಸಿದರು. ಈ ಪಂದ್ಯದಲ್ಲಿ ಭುವನೇಶ್ವರ್ ಒಂದು ವಿಕೆಟ್ ಪಡೆದಿದ್ದು, ಮೂರು ಓವರ್ಗಳಲ್ಲಿ ಕೇವಲ 10 ರನ್ಗಳನ್ನಷ್ಟೇ ನೀಡಿದ್ದಾರೆ.