ವೆಲ್ಲಿಂಗ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದೆ, ಈ ಪಂದ್ಯದಲ್ಲಿ ಬೆಂಗಳೂರಿನ ದಂಪತಿಯ ಮಗ ರಚಿನ್ ರವೀಂದ್ರ ವಿರುದ್ಧ ಭಾರತದ ವಿರುದ್ಧವೇ ತೊಡೆ ತಟ್ಟಲು ಸಜ್ಜಾಗಿದ್ದಾರೆ.
ರವೀಂದ್ರ ಬೆಂಗಳೂರು ಮೂಲದ ರವಿ ಕೃಷ್ಣಮೂರ್ತಿ ಎಂಬ ಸಾಫ್ಟ್ವೇರ್ ಸಿಸ್ಟಮ್ ಆರ್ಕಿಟೆಕ್ಟರ್ ಮತ್ತು ದೀಪಾ ಕೃಷ್ಣಮೂರ್ತಿ ಎಂಬ ದಂಪತಿಯ ಮಗ. ಇವರು 1990ರಲ್ಲಿ ನ್ಯೂಜಿಲ್ಯಾಂಡ್ಗೆ ತೆರಳಿದ್ದರು. ಶ್ರೀನಾಥ್ ಮತ್ತು ರಚಿನ್ ಕೃಷ್ಣಮೂರ್ತಿ ಸ್ನೇಹಿತರಾಗಿರುವುದರಿಂದ ಇದೀಗ ಕಿವೀಸ್ನ ಭರವಸೆಯ ಆಟಗಾರನಾಗಿರುವ ಅವರು ಭಾರತದ ಲೆಜೆಂಡರಿ ವೇಗಿ ಜಾವಗಲ್ ಶ್ರೀನಾಥ್ ಅವರಿಂದ ಕ್ರಿಕೆಟ್ ಸಲಹೆಗಳನ್ನು ಪಡೆದಿದ್ದಾರೆ.
ಪ್ರತಿ ವರ್ಷ ಆಂಧ್ರಕ್ಕೆ ಬರುತ್ತಾರೆ ರವೀಂದ್ರ:
ನ್ಯೂಜಿಲ್ಯಾಂಡ್ನ ಹಟ್ ಹಾಕ್ಸ್ ಕ್ಲಬ್ ತನ್ನ ಆಟಗಾರರನ್ನು ಪ್ರತಿವರ್ಷ ಬೇಸಿಗೆಯಲ್ಲಿ ಭಾರತಕ್ಕೆ ಕ್ರಿಕೆಟ್ ತರಬೇತಿಗಾಗಿ ಕಳುಹಿಸುತ್ತದೆ. ಆಂಧ್ರಪ್ರದೇಶದ ಆಟ್ಟಿಡಿ ಕ್ಲಬ್ನಲ್ಲಿ ಈ ಆಟಗಾರರ ತರಬೇತಿ ಪಡೆಯುತ್ತಾರೆ. ಇದೇ ಸಂದರ್ಭದಲ್ಲಿ ಲೋಕಲ್ ತಂಡಗಳ ವಿರುದ್ಧ ಚಾರಿಟಿ ಪಂದ್ಯಗಳನ್ನಾಡುತ್ತಾರೆ. ರಚಿನ್ ಜೊತೆಗೆ ಜೇಮ್ಸ್ ನೀಶಮ್, ಟಾಮ್ ಬ್ಲಂಡೆಲ್ರಂತಹ ಅಂತಾರಾಷ್ಟ್ರೀಯ ಕ್ರಿಕೆಟಿಗರು ಪ್ರತಿ ವರ್ಷ ಭಾರತ ಪ್ರವಾಸ ಕೈಗೊಳ್ಳುತ್ತಿರುತ್ತಾರೆ.
ರವಿಂದ್ರ ಹೆಸರಿನ ಹಿಂದೆ ರಚಿನ್ ಬಂದಿದ್ದೇಗೆ?
ರವಿಂದ್ರ ಹೆಸರಿನ ಮುಂದೆ ರಚಿನ್ ಬರಲು ಕೂಡ ಭಾರತೀಯ ಕ್ರಿಕೆಟಿಗರೇ ಕಾರಣ. ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಹೆಸರಿನ ಸಮ್ಮಿಲನವೇ ರಚಿನ್. ಇವರ ತಂದೆ ಕೂಡ ಸಚಿನ್ ಅವರ ಬಹುದೊಡ್ಡ ಅಭಿಮಾನಿಯಾಗಿದ್ದಾರೆ.
2016ರ ಅಂಡರ್ 19 ವಿಶ್ವಕಪ್ನಲ್ಲಿ ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್ ಎದುರಾಳಿಯಾಗಿದ್ದ ಅವರು, ಇದೀಗ 5 ವರ್ಷಗಳ ನಂತರ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದೆದುರು ಮಿಂಚಲು ತಯಾರಾಗುತ್ತಿದ್ದಾರೆ.
ಇದನ್ನು ಓದಿ: WTC ಫೈನಲ್: ಪಿಚ್ ಸ್ವಿಂಗ್ಗೆ ನೆರವಾದರೆ ಕೊಹ್ಲಿ-ಭಾರತೀಯ ಬ್ಯಾಟ್ಸ್ಮನ್ಸ್ ನಮ್ಮ ಬೌಲರ್ಗಳೆದುರು ಪರದಾಡ್ತಾರೆ!