ETV Bharat / sports

ಇಂಗ್ಲೆಂಡ್ ಬಿ ಟೀಂ ಪಾಕ್​ ವಿರುದ್ಧ ತೋರಿದ ಪ್ರದರ್ಶನ ಅಚ್ಚರಿ ತಂದಿದೆ: ಸ್ಟೋಕ್ಸ್​​

ಇಂಗ್ಲೆಂಡ್‌ ದ್ವಿತೀಯ ದರ್ಜೆಯ ತಂಡ ಪಾಕಿಸ್ತಾನವನ್ನು ಮೊದಲ ಪಂದ್ಯದಲ್ಲಿ 141ಕ್ಕೆ ಕಟ್ಟಿಹಾಕಿದರೆ, ಎರಡನೇ ಪಂದ್ಯದಲ್ಲಿ 248 ರನ್​ಗಳ ಸಾಧಾರಣ ಟಾರ್ಗೆಟ್ ನೀಡಿದ್ದು, 195 ರನ್​ಗಳಿಗೆ ಆಲೌಟ್ ಮಾಡಿ ಜಯ ಸಾಧಿಸಿತ್ತು.

ಬೆನ್​ ಸ್ಟೋಕ್ಸ್​
ಬೆನ್​ ಸ್ಟೋಕ್ಸ್​
author img

By

Published : Jul 13, 2021, 3:24 PM IST

ಬರ್ಮಿಂಗ್​ಹ್ಯಾಮ್: ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಾತ್ಕಾಲಿಕ ತಂಡ ಘೋಷಿಸಿತ್ತು. ಅನನುಭವಿಗಳಿಂದ ಕೂಡಿದ್ದ ಈ ತಂಡ ಅತ್ಯುತ್ತಮ ಪ್ರದರ್ಶನ ತೋರಿ ಪ್ರವಾಸಿ ತಂಡವನ್ನು ಮಣಿಸಿ ಸರಣಿ ಗೆದ್ದುಕೊಂಡಿದೆ. ಆದರೆ ನಾಯಕ ಬೆನ್​ ಸ್ಟೋಕ್ಸ್​ ತಂಡದ ಪ್ರದರ್ಶನ ನಿಜಕ್ಕೂ ಆಶ್ಚರ್ಯ ತಂದಿದೆ ಎಂದಿದ್ದಾರೆ.

ದ್ವಿತೀಯ ದರ್ಜೆಯ ತಂಡ ಪಾಕಿಸ್ತಾನವನ್ನು ಮೊದಲ ಪಂದ್ಯದಲ್ಲಿ 141 ರನ್‌ಗಳಿಗೆ ಕಟ್ಟಿಹಾಕಿದರೆ, ದ್ವಿತೀಯ ಪಂದ್ಯದಲ್ಲಿ 248 ರನ್​ಗಳ ಸಾಧಾರಣ ಟಾರ್ಗೆಟ್ ನೀಡಿ 195 ರನ್​ಗಳಿಗೆ ಆಲೌಟ್ ಮಾಡಿ 52 ರನ್​ಗಳ ಜಯ ಸಾಧಿಸಿತ್ತು.

ಈ ಕುರಿತು ಮಾತನಾಡಿದ ಅವರು, ಇಂಗ್ಲೆಂಡ್​ ತಂಡ ತವರಿನಲ್ಲಿ ಸೀಮಿತ ಓವರ್​ಗಳ ಪಂದ್ಯವನ್ನು ಹೊರಗಿನ ರಾಷ್ಟ್ರಗಳ ವಿರುದ್ಧ ಹೇಗೆ ಆಡಬೇಕೆಂಬ ಸಂದೇಶವನ್ನು ಪ್ರದರ್ಶನದ ಮೂಲಕ ತೋರಿಸಿಕೊಟ್ಟಿದೆ. ಸಂಪೂರ್ಣ ತಂಡದ ಬದಲಾವಣೆ ಕೊನೆಯ ನಿಮಿಷದ ವಿಷಯವಾಗಿದ್ದರೂ ಸಹ, ನಮ್ಮದು ಬಲವಾದ ಮತ್ತು ಪ್ರತಿಭಾವಂತ ತಂಡವಾಗಿದೆ ಎಂದು ನಾವು ಭಾವಿಸಿದ್ದೆವು. ಅದು ಪಾಕಿಸ್ತಾನದ ವಿರುದ್ಧ ಉತ್ತಮವಾಗಿ ಹೋರಾಡುವ ಮೂಲಕ ಸಾಬೀತಾಗಿದೆ ಎಂದು ಹೇಳಿದರು.

ಶ್ರೀಲಂಕಾ ವಿರುದ್ಧದ ಸರಣಿಯ ನಂತರ ಇಂಗ್ಲೆಂಡ್​ ತಂಡದಲ್ಲಿ ಕೆಲವರಿಗೆ ಕೊರೊನಾ ಕಾಣಿಸಿಕೊಂಡಿದ್ದರಿಂದ ಇಸಿಬಿ ಇಡೀ ತಂಡವನ್ನು ಕ್ವಾರಂಟೈನ್ ಮಾಡಿತ್ತು. ಆದ್ದರಿಂದ ಕೊನೆಯ ಕ್ಷಣದಲ್ಲಿ 16 ಸದಸ್ಯರ ಹೊಸ ತಂಡವನ್ನು ಪ್ರಕಟಿಸಿ ಅದಕ್ಕೆ ಬೆನ್​ ಸ್ಟೋಕ್ಸ್ ಅವ​ರನ್ನು ನಾಯಕರನ್ನಾಗಿ ನೇಮಿಸಿತ್ತು.

ಇದನ್ನೂ ಓದಿ: T20 ಇತಿಹಾಸದಲ್ಲೇ 14 ಸಾವಿರ ರನ್​ ಪೂರೈಸಿದ ಮೊದಲ ಆಟಗಾರ 'ಯೂನಿವರ್ಸ್ ಬಾಸ್'!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.