ಮೌಂಟ್ ಮೌಂಗನುಯಿ (ನ್ಯೂಜಿಲ್ಯಾಂಡ್ ): ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಮತ್ತು ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್ ಹೊಸ ದಾಖಲೆ ನಿರ್ಮಿಸಿದ್ದಾರೆ. ತಮ್ಮ ಕೋಚ್ ಎದುರೇ ಅವರ ದಾಖಲೆ ಮುರಿದು ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್ನ ಬ್ರೆಂಡನ್ ಮೆಕಲಮ್ ಅವರು ಸದ್ಯ ಇಂಗ್ಲೆಂಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೆಕಲಮ್ ಟೆಸ್ಟ್ನಲ್ಲಿ ಗಳಿಸಿದ್ದ 107 ಸಿಕ್ಸ್ನ ದಾಖಲೆಯನ್ನು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಮುರಿದ್ದಿದ್ದಾರೆ. ಮೌಂಟ್ ಮೌಂಗನುಯಿಯಲ್ಲಿ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ನಡುವೆ ಪಂದ್ಯ ನಡೆಯುತ್ತಿದ್ದು, ಮ್ಯಾಚ್ನ ಎರಡನೇ ಇನ್ನಿಂಗ್ಸ್ನಲ್ಲಿ ಸ್ಟೋಕ್ಸ್ 2 ಸಿಕ್ಸ್ ಬಾರಿಸುವ ಮೂಲಕ ಈ ದಾಖಲೆ ಬರೆದಿದ್ದಾರೆ. ಮೂರನೇ ದಿನದಾಟದಲ್ಲಿ ಪಂದ್ಯದಲ್ಲಿ ಸ್ಕಾಟ್ ಕುಗ್ಗೆಲೆಯ್ನ್ ಬೌಲಿಂಗ್ನಲ್ಲಿ ಫೈನ್ ಲೆಗ್ ಕಡೆಗೆ ಸಿಕ್ಸ್ ಹೊಡೆಯುವ ಮೂಲಕ ಈ ದಾಖಲೆ ಬರೆದರು. ಈ ವೇಳೆ, ಇಂಗ್ಲೆಂಡ್ ಕೋಚ್ ಆಗಿರುವ ಬ್ರೆಂಡನ್ ಮೆಕಲಮ್ ಚಪ್ಪಾಳೆ ತಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು. ಸ್ಟೋಕ್ಸ್ 33 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ನಿಂದ 31 ರನ್ ಗಳಿಸಿದರು.
-
Historic moment - Ben Stokes has most sixes in Test cricket.pic.twitter.com/5UcXmKQm3W
— Johns. (@CricCrazyJohns) February 18, 2023 " class="align-text-top noRightClick twitterSection" data="
">Historic moment - Ben Stokes has most sixes in Test cricket.pic.twitter.com/5UcXmKQm3W
— Johns. (@CricCrazyJohns) February 18, 2023Historic moment - Ben Stokes has most sixes in Test cricket.pic.twitter.com/5UcXmKQm3W
— Johns. (@CricCrazyJohns) February 18, 2023
ಇದುವರೆಗೂ 90 ಟೆಸ್ಟ್ನಲ್ಲಿ 169 ಇನ್ನಿಂಗ್ಸ್ ಆಡಿರುವ ಸ್ಟೋಕ್ಸ್ 109 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. 36.00 ಸರಾಸರಿಯಲ್ಲಿ 12 ಶತಕ ಮತ್ತು 28 ಅರ್ಧಶತಕಗಳೊಂದಿಗೆ ಒಟ್ಟು 5,652 ರನ್ ಗಳಿಸಿದ್ದಾರೆ. ಟೆಸ್ಟ್ ಮಾಡರಿಯಲ್ಲಿ 258 ಅವರ ಅತ್ಯುತ್ತಮ ಸ್ಕೋರ್ ಆಗಿದೆ. ನ್ಯೂಜಿಲ್ಯಾಂಡ್ನ ಬ್ರೆಂಡನ್ ಮೆಕಲಮ್ 101 ಟೆಸ್ಟ್‌ಗಳಲ್ಲಿ 107 ಸಿಕ್ಸರ್‌ಗಳನ್ನು ಗಳಿಸಿ ಟೆಸ್ಟ್ನಲ್ಲಿ ಅತೀ ಹೆಚ್ಚು ಸಿಕ್ಸ್ ಗಳಿಸಿದ ದಾಖಲೆ ಹೊಂದಿದ್ದರು. ಮೆಕಲಮ್ 38.64 ರ ಸರಾಸರಿಯಲ್ಲಿ 6,453 ರನ್ ಗಳಿಸಿದ್ದು, 302 ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಟೆಸ್ಟ್ನಲ್ಲಿ 12 ಶತಕಗಳು ಮತ್ತು 31 ಅರ್ಧಶತಕಗಳನ್ನು ಮೆಕಲಮ್ ಗಳಿಸಿದ್ದಾರೆ.
ಮೂರನೇ ದಿನದಾಟ ಆಗುತ್ತಿದ್ದು, ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ನಲ್ಲಿ 374ಕ್ಕೆ ಆಲ್ಔಟ್ ಆಗಿದೆ. ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಆರಂಭಿಸಿದ್ದು ಮೂರು ವಿಕೆಟ್ ಕಳೆದುಕೊಂಡಿದೆ. ಎರಡೂ ವಿಕೆಟ್ಗಳನ್ನು ಬ್ರಾಡ್ ಗಳಿಸದ್ದಾರೆ. ಪಂದ್ಯ ಗೆಲ್ಲಲು ನ್ಯೂಜಿಲ್ಯಾಂಡ್ಗೆ 394 ರನ್ಗಳ ಅವಶ್ಯಕತೆ ಇದೆ. ಇನ್ನು ಎರಡು ದಿನ ವಿಕಟ್ ಕಾಯ್ದು ಕೊಂಡರೆ ಕಿವೀಸ್ಗೆ ಪಂದ್ಯ ಗೆಲ್ಲುವ ಅವಕಾಶ ಇದೆ.
-
The most successful bowling pair in Test history! 👑#NZvENG pic.twitter.com/Bo8OGoXw9o
— England Cricket (@englandcricket) February 18, 2023 " class="align-text-top noRightClick twitterSection" data="
">The most successful bowling pair in Test history! 👑#NZvENG pic.twitter.com/Bo8OGoXw9o
— England Cricket (@englandcricket) February 18, 2023The most successful bowling pair in Test history! 👑#NZvENG pic.twitter.com/Bo8OGoXw9o
— England Cricket (@englandcricket) February 18, 2023
ಆಂಡರ್ಸನ್ ಮತ್ತು ಬ್ರಾಡ್ ಜೋಡಿಯಿಂದ ವಿಕೆಟ್ ದಾಖಲೆ ಗಳಿಕೆ: ಆಂಡರ್ಸನ್ ಮತ್ತು ಬ್ರಾಡ್ ಅವರು ವಾರ್ನ್ ಮತ್ತು ಮೆಕ್‌ಗ್ರಾತ್ ಜೋಡಿಯ ವಿಕೆಟ್ ಗಳಿಕೆಯ ದಾಖಲೆಯನ್ನು ಮುರಿದಿದ್ದಾರೆ. ಎರಡನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲ್ಯಾಂಡ್ಗೆ ಬ್ರಾಡ್ ಆರಂಭಿಕ ಆಘಾತ ನೀಡುವ ಮೂಲಕ ಜೊತೆಯಾಗಿ 1002 ವಿಕೆಟ್ ಪಡೆದ ದಾಖಲೆ ನಿರ್ಮಾಣ ಮಾಡಿದ್ದಾರೆ.
ಪಂದ್ಯ: ಟಾಸ್ ಗೆದ್ದ ಕಿವೀಸ್ ಫೀಲ್ಡ್ ಆಯ್ದುಕೊಂಡಿತು. ಬ್ಯಾಟಿಂಗ್ಗೆ ಇಳಿದ ಆಂಗ್ಲರ ಪಡೆ 325ಕ್ಕೆ 9 ವಿಕೆಟ್ ಕಳೆದುಕೊಂಡು ಡಿಕ್ಲೆರ್ ಘೋಷಿಸಿತು. ಡಕೆಟ್ 84 ಮತ್ತು ಹ್ಯಾರಿ ಬ್ರೂಕ್ 89 ರನ್ಗಳಿಸಿ ತಂಡ ತ್ರಿಶತಕ ತಲುಪಲು ಸಹಕಾರಿಯಾದರು. ನೀಲ್ ವ್ಯಾಗ್ನರ್ 4 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ನಲ್ಲಿ ಕಿವೀಸ್ ಡೆವೊನ್ ಕಾನ್ವೇ (77) ಮತ್ತು ಟಾಮ್ ಬ್ಲಂಡೆಲ್ (138) ಬ್ಯಾಟಿಂಗ್ ನೆರವಿನಿಂದ 306ರನ್ ಗಳಿಸಿತು. 19 ರನ್ನ ಮುನ್ನಡೆಯಿಂದ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಜೋ ರೂಟ್, ಹ್ಯಾರಿ ಬ್ರೂಕ್ ಮತ್ತು ಬೆನ್ ಫೋಕ್ಸ್ ಅವರ ಅರ್ಧ ಶತಕದ ನೆರವಿನಿಂದ 374 ರನ್ಗಳಿಸಿತು. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಕಿವೀಸ್ಗೆ ಆರಂಭಿಕ ಆಘಾತ ಆಗಿದ್ದು, 9 ಓವರ್ಗೆ 24ಕ್ಕೆ 3 ವಿಕೆಟ್ ಕಳೆದುಕೊಂಡಿದೆ.
ಇದನ್ನೂ ಓದಿ: ಬಾರ್ಡರ್ ಗವಾಸ್ಕರ್ ಟ್ರೋಫಿ: ಎರಡನೇ ಟೆಸ್ಟ್ನಿಂದ ವಾರ್ನರ್ ಹೊರಕ್ಕೆ