ಮುಂಬೈ : ಸಾಲು ಸಾಲು ಸರಣಿ ಸೋಲುಗಳ ಬಳಿಕ ಜೋ ರೂಟ್ ಇಂಗ್ಲೆಂಡ್ ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ. ಇದೀಗ ಆಂಗ್ಲರ ಮುಂದಿನ ನಾಯಕ ಯಾರು ಎಂಬ ಕುತೂಹಲ ಕ್ರಿಕೆಟ್ ವಲಯದಲ್ಲಿ ಬಿಸಿ ಚರ್ಚೆಯಾಗಿದೆ. ಇಂಗ್ಲೆಂಡ್ ಮಾಜಿ ನಾಯಕರೆಲ್ಲ ಪ್ರಸ್ತುತ ಉಪನಾಯಕನಾಗಿರುವ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮ್ಯಾನೇಜ್ಮೆಂಟ್ ಮುಂದಿರುವ ಸ್ಪಷ್ಟವಾದ ಆಯ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ಭಾರತದ ವಿರುದ್ಧ 2 ಸರಣಿ, ಆ್ಯಶಸ್ನಲ್ಲಿ 0-4 ಮತ್ತು ವೆಸ್ಟ್ ಇಂಡೀಸ್ ವಿರುದ್ಧ 0-1ರಲ್ಲಿ ಸರಣಿಯನ್ನು ಕಳೆದುಕೊಂಡಿತ್ತು. ಇಂಗ್ಲೆಂಡ್ ತಂಡದ ನಾಯಕತ್ವಕ್ಕೆ ಆತನನ್ನು ಬಿಟ್ಟು ತಂಡದಲ್ಲಿರುವ ಬೇರೆ ಯಾರನ್ನು ನಾನು ನೋಡುತ್ತಿಲ್ಲ. ಬೆನ್ ಸ್ಟೋಕ್ಸ್ ಮಾತ್ರ, ಆ ಸ್ಥಾನವನ್ನು ಪಡೆದುಕೊಳ್ಳಲು ಅವರಿಗೆ ಸಾಧ್ಯ. ಅವರಿಗೆ ಒಳ್ಳೆಯ ಕ್ರಿಕೆಟ್ ಜ್ಞಾನವಿದೆ. ಅದಕ್ಕಾಗಿ ಅವರು ಎಲ್ಲವನ್ನು ನೀಡಲು ಸಜ್ಜಾಗಿದ್ದಾರೆ. ಅವರು ಖಂಡಿತವಾಗಿಯೂ ತಮ್ಮ ಸುತ್ತಲಿನ ಆಟಗಾರರಿಂದ ಗೌರವವನ್ನು ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ.
ಇನ್ನು 1999ರಿಂದ 2003ರವರೆಗೆ ಇಂಗ್ಲೆಂಡ ತಂಡವನ್ನು ಮುನ್ನಡೆಸಿದ್ದ ನಾಸಿರ್ ಹುಸೇನ್ ಕೂಡ ಬೆನ್ ಸ್ಟೋಕ್ಸ್ಗೆ ಬೆಂಬಲ ಸೂಚಿಸಿದ್ದಾರೆ. "ನನಗೆ ಬೆನ್ಸ್ಟೋಕ್ಸ್ ಸ್ಪಷ್ಟ ಅಭ್ಯರ್ಥಿಯಾಗಿದ್ದಾರೆ. ಅವರು ಕ್ರಿಕೆಟರ್ ಆಗಿ ಕೆಲವು ಅದ್ಭುತವಾದದನ್ನು ಈಗಾಗಲೇ ಸಾಧಿಸಿದ್ದಾರೆ ಮತ್ತು ಅವರು ಅತ್ಯುತ್ತಮ ಕ್ರಿಕೆಟ್ ಜ್ಞಾನವನ್ನು ಹೊಂದಿದ್ದಾರೆ. ಅದನ್ನು ಅವರು ವಿಶ್ವಕಪ್ ಫೈನಲ್ನಲ್ಲಿ ತೋರಿಸಿದ್ದಾರೆ, ಹೆಡಿಂಗ್ಲೆಯಲ್ಲೂ ತೋರಿಸಿದ್ದಾರೆ.. ಜೋ ರೂಟ್ ಅನುಪಸ್ಥಿತಿಯಲ್ಲಿ ಹಂಗಾಮಿಯಾಗಿ ತಂಡವನ್ನು ಮುನ್ನಡೆಸಿದಾಗಲೂ ತೋರಿಸಿಕೊಟ್ಟಿದ್ದಾರೆ" ಎಂದು ಸ್ಕೈ ಸ್ಪೋರ್ಟ್ಸ್ಗೆ ಹೇಳಿದ್ದಾರೆ.
ಕೆಲವು ಜನರು ಓ... ಬೆನ್ ಸ್ಟೋಕ್ಸ್, ಫ್ಲಿಂಟಾಫ್ ಮತ್ತು ಬಾಥಮ್ಗೆ ಏನಾಯಿತು ಅಂತಾ ನಿಮಗೆ ಗೊತ್ತಿಲ್ಲವೇ? ಎಂದು ಹೇಳುತ್ತಾರೆ. ಆದರೆ, ಬೆನ್ ಸ್ಟೋಕ್ಸ್ ಅವರು ಫ್ಲಿಂಟಾಫ್ ಅಲ್ಲ ಅಥವಾ ಬಾಥಮ್ ಅಲ್ಲ, ಬೇರೆ ಜನರು ಏನು ಮಾಡಿದ್ದಾರೆ ಎನ್ನುವುದರ ಆಧಾರದ ಮೇಲೆ ಸ್ಟೋಕ್ಸ್ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಾರದು ಎಂದು ತಿಳಿಸಿದ್ದಾರೆ.
ಆದಾಗ್ಯೂ ಹುಸೇನ್, ಒಂದು ವೇಳೆ ಸ್ಟೋಕ್ಸ್ ನಾಯಕತ್ವವನ್ನು ವಹಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲದಿದ್ದರೆ, ಸ್ಟುವರ್ಟ್ ಬ್ರಾಡ್ರನ್ನು ಸೀಮಿತ ಅವಧಿಗೆ ನಾಯಕತ್ವ ನೀಡಬಹುದು. ಏಕೆಂದರೆ, ಅವರಿಗೂ ಒಳ್ಳೆಯ ಕ್ರಿಕೆಟ್ ಬ್ರೈನ್ ಇದೆ. ಆತನು ನೈಜ ಫೈಟರ್, ನೈಜ ಸ್ಪರ್ಧಾಳು. ಆಸ್ಟ್ರೇಲಿಯಾ ತಂಡವನ್ನು ಪ್ಯಾಟ್ ಕಮಿನ್ಸ್ ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಕೆಲವು ಸಮಯದವರೆಗೆ ಬ್ರಾಡ್ರನ್ನು ಆ ಸ್ಥಾನದಲ್ಲಿ ನೋಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಸರಣಿ ಸೋಲುಗಳ ಬಳಿಕ ಇಂಗ್ಲೆಂಡ್ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಜೋ ರೂಟ್