ನವದೆಹಲಿ: ಟಿ-20 ವಿಶ್ವಕಪ್ ಮುಗಿಯುತ್ತಿದ್ದಂತೆ ಟಿ-20 ನಾಯಕತ್ವ ತ್ಯಜಿಸಿದ್ದ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಮುಂದುವರಿಯಲು ನಿರ್ಧರಿಸಿದ್ದರು. ಆದರೆ, ಬಿಸಿಸಿಐ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನವೇ ಸ್ವತಃ ಬಿಸಿಸಿಐ ಕೊಹ್ಲಿ ಅವರನ್ನು ಏಕದಿನ ತಂಡದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ಬುಧವಾರ ನೇಮಕ ಮಾಡಿದೆ.
ಆದರೆ, ವಿರಾಟ್ ಕೊಹ್ಲಿಗೆ ನಾಯಕತ್ವದಿಂದ ಕೆಳಗಿಳಿಯುವ ಮನಸ್ಸಿರಲಿಲ್ಲ ಎಂದು ತಡವಾಗಿ ಬೆಳಕಿಗೆ ಬಂದಿದೆ. ಬಿಸಿಸಿಐ ಕೊಹ್ಲಿಗೆ 48 ಗಂಟೆಗಳಲ್ಲಿ ನಾಯಕತ್ವದಿಂದ ಸ್ವತಃ ಕೆಳಗಿಳಿಯಲು ಸೂಚಿಸಿದೆ. ಈ ಸಮಯದಲ್ಲಿ ಕೊಹ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. 49ನೇ ಗಂಟೆಯಲ್ಲಿ ಕೊಹ್ಲಿ ತಮ್ಮ ಅಧಿಕಾರವನ್ನು ಕಳೆದುಕೊಂಡಿದೆ. ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಮುಂದಿನ ಸೀಮಿತ ಓವರ್ಗಳ ನಾಯಕ ಎಂದು ಘೋಷಣೆ ಮಾಡಿದೆ.
ಕುತೂಹಲಕಾರಿ ಅಂಶ ಎಂದರೆ ಬಿಸಿಸಿಐ ಕೊಹ್ಲಿ ಅವರನ್ನು ನಾಯಕತ್ವದಿಂದ ತೆಗೆದ ವಿಚಾರವನ್ನು ಬುಧವಾರ ಹೊಸ ನಾಯಕನನ್ನು ಘೋಷಿಸಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿಲ್ಲ. ಕೇವಲ ಆಯ್ಕೆ ಸಮಿತಿ ಟಿ-20 ಮತ್ತು ಏಕದಿನ ತಂಡಗಳಿಗೆ ರೋಹಿತ್ ನಾಯಕರಾಗಿ ನೇಮಕ ಮಾಡಿದೆ ಎಂದು ಮಾತ್ರ ಉಲ್ಲೇಖಿಸಿದೆ.
ಈ ನಿರ್ಧಾರ ಏಕೆ:
ವಿರಾಟ್ ಕೊಹ್ಲಿ ಮುಂಬರುವ 2023 ತವರಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ಮಹಾತ್ವಾಕಾಂಕ್ಷೆಯನ್ನು ಹೊಂದಿದ್ದರು. ಆದರೆ, ಬಿಸಿಸಿಐ ಮತ್ತು ಆಯ್ಕೆ ಸಮಿತಿ ಮುಂಬರುವ ವಿಶ್ವಕಪ್‌ನಲ್ಲಿ ಹೊಸ ನಾಯಕನನ್ನು ನೇಮಿಸಲು ಬಯಸುದ ಕಾರಣ ಕೊಹ್ಲಿಯನ್ನು ನಾಯಕತ್ವದಿಂದ ವಜಾಮಾಡಿದೆ.
ಇತ್ತೀಚೆಗೆ ಮುಗಿದ ಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡ ಗುಂಪು ಹಂತದಲ್ಲೇ ಹೊರಬಿದ್ದ ಕಾರಣ ಏಕದಿನ ತಂಡದಿಂದಲೂ ಕೊಹ್ಲಿಯನ್ನು ಕೆಳಗಿಳಿಸಲು ನಿರ್ಧರಿಸಿತ್ತು. ಆದರೆ ಕೊಹ್ಲಿಯನ್ನು ಗೌರವಯುತವಾಗಿ ನಾಯಕತ್ವವನ್ನು ತ್ಯಜಿಸುವುದನ್ನು ಬಿಸಿಸಿಐ ನೋಡಬಯಸಿತ್ತು. ಆದರೆ, ವಿರಾಟ್ ನಿಗದಿತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳದ್ದರಿಂದ ವಜಾ ಗೊಳಿಸಿದೆ.
ಕೊಹ್ಲಿಯ ನಾಯಕತ್ವದ ಆಕರ್ಷಕ ಪಯಣ:
ವಿರಾಟ್ ಕೊಹ್ಲಿ ಕ್ಯಾಪ್ಟನ್ ಕೂಲ್ ಎಂದೇ ಹೆಸರಾಗಿದ್ದ ಮಹೇಂದ್ರ ಸಿಂಗ್ ಧೋನಿ ನೆರಳಿನಲ್ಲಿ ಅದ್ಭುತ ನಾಯಕನಾಗಿ ಬೆಳೆದಿದ್ದರು. 2014ರಲ್ಲಿ ಟೆಸ್ಟ್ ತಂಡಕ್ಕೆ ನಾಯಕನಾಗಿದ್ದ ಕೊಹ್ಲಿ ನಂತರದ ಒಂದೆರಡು ವರ್ಷಗಳ ಕಾಲ ಧೋನಿಗೆ ಉಪನಾಯಕನಾಗಿದ್ದರು. 2017ರಲ್ಲಿ ಬಿಳಿ ಚೆಂಡಿನ ಜವಾಬ್ದಾರಿ ನೀಡಲಾಯಿತು. ಮುಂದಿನ 2 ವರ್ಷಗಳಲ್ಲಿ, ಕೊಹ್ಲಿ ತಮ್ಮದೇ ಆದ ಆಕ್ರಮಣಕಾರಿ ತಂತ್ರಗಳನ್ನು ರೂಪಿಸುವ ಮೂಲಕ, ತಂಡದ ಪ್ರಬಲ ನಾಯಕರಾಗಿ ಹೊರಹೊಮ್ಮಿದರು.
ಕೊಹ್ಲಿ ಟಿ20 ತಂಡದ ಜವಾಬ್ದಾರಿ ತ್ಯಜಿಸಿದರೂ ಕ್ರಿಕೆಟ್ನಲ್ಲಿ ಸ್ವತಃ ನಾಯಕರಾಗಿ ಅನುಭವವುಳ್ಳ ಹಾಗೂ ಬಿಸಿಸಿಐ ಅಧ್ಯಕ್ಷ ಮತ್ತು ಕಾರ್ಯದರ್ಶಿ ಜಯ್ ಶಾ ಸೀಮಿತ ಓವರ್ಗಳ ತಂಡಕ್ಕೆ ಇಬ್ಬರ ನಾಯಕತ್ವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದು ರೋಹಿತ್ ಶರ್ಮಾರನ್ನು ಮುಂದಿನ ನಾಯಕ ಎಂದು ಘೋಷಿಸಿದರು.
ಈ ಹಿಂದೆ 2014ರಲ್ಲಿ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಾಗಲೂ ಮಹೇಂದ್ರ ಸಿಂಗ್ ಧೋನಿ ಟಿ-20 ಮತ್ತು ಏಕದಿನ ತಂಡಕ್ಕೆ ನಾಯಕನಾಗಿದ್ದರು. ಪ್ರಸ್ತುತ ಇಂಗ್ಲೆಂಡ್ , ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಕೂಡ ದೀರ್ಘ ಮಾದರಿ ಮತ್ತು ಸೀಮಿತ ಓವರ್ಗಳ ತಂಡಕ್ಕೆ ವಿಭಿನ್ನ ನಾಯಕರನ್ನು ನೇಮಿಸಿದೆ.
ಇದನ್ನೂ ಓದಿ:ODI ಗೆಲುವಿನ ಸರಾಸರಿಯಲ್ಲಿ ಕೊಹ್ಲಿಯೇ ಅಗ್ರ... ಭಾರತದ ನಾಯಕನಾಗಿ ವಿರಾಟ್ ಸಾಧನೆ ಹೀಗಿದೆ