ETV Bharat / sports

Sri Lanka vs India: ಮೈದಾನಕ್ಕಿಳಿದು ಅಭ್ಯಾಸ ಆರಂಭಿಸಿದ ದ್ರಾವಿಡ್ ಹುಡುಗರು

ಟೀಂ ಇಂಡಿಯಾ ಯುವ ಪಡೆ ಇದೀಗ ಲಂಕಾ ವಿರುದ್ಧದ ಸರಣಿಗೋಸ್ಕರ ಸನ್ನದ್ಧಗೊಳ್ಳುತ್ತಿದ್ದು, ಇಂದಿನಿಂದ ತರಬೇತಿ ಆರಂಭಿಸಿದ್ದಾರೆ.

author img

By

Published : Jul 2, 2021, 6:19 PM IST

Team India
Team India

ಕೊಲಂಬೊ: ಆತಿಥೇಯ ಲಂಕಾ ವಿರುದ್ಧದ ಕ್ರಿಕೆಟ್​ ಸರಣಿಯಲ್ಲಿ ಭಾಗಿಯಾಗಲು ಸಜ್ಜಾಗಿರುವ ಯಂಗ್​ ಇಂಡಿಯಾ ಇಂದಿನಿಂದ ಅಭ್ಯಾಸದಲ್ಲಿ ಭಾಗಿಯಾಗಿದೆ. ಮುಂಬೈನಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್​ ಮುಗಿಸಿ ಕೊಲಂಬೊಗೆ ಆಗಮಿಸಿದ್ದ ಶಿಖರ್​ ಧವನ್ ಪಡೆ 3 ದಿನಗಳ ಕ್ವಾರಂಟೈನ್​​​ನಲ್ಲಿತ್ತು. ಇದೀಗ ಯಶಸ್ವಿಯಾಗಿ ಕ್ವಾರಂಟೈನ್​​ ಮುಗಿಸಿರುವ ತಂಡ ಇದೀಗ ಅಭ್ಯಾಸದಲ್ಲಿ ಭಾಗಿಯಾಗಿದೆ.

ಎಲ್ಲ ಪ್ಲೇಯರ್ಸ್ ಅಭ್ಯಾಸದಲ್ಲಿ ಭಾಗಿಯಾಗಿರುವ ಕೆಲವೊಂದು ಫೋಟೋಗಳನ್ನ ಭಾರತೀಯ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿದ್ದು, ಟೀಂ ಇಂಡಿಯಾ ತರಬೇತಿ ಶುರುಗೊಂಡಿದೆ ಎಂದು ಹೇಳಿದೆ. ಶಿಖರ್​ ಧವನ್​ ನಾಯಕತ್ವ ಹಾಗೂ ದ್ರಾವಿಡ್​ ಕೋಚ್​​ ಆಗಿರುವ ಈ ತಂಡದಲ್ಲಿ ಬಹುತೇಕರು ಯಂಗ್​ ಪ್ಲೇಯರ್ಸ್​ ಇದ್ದಾರೆ. ಬರುವ ದಿನಗಳಲ್ಲಿ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳುವ ಉದ್ದೇಶದಿಂದ ಎಲ್ಲರೂ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿರಿ: ಲಂಕಾದಲ್ಲಿ ಕ್ವಾರಂಟೈನ್​ ಮುಗಿಸಿದ ಧವನ್ ಪಡೆ: ಸ್ವಿಮ್ಮಿಂಗ್​ ಪೂಲ್​ನಲ್ಲಿ ಫುಲ್ ಜಾಲಿ

ಜುಲೈ 13ರಿಂದ ಟೂರ್ನಿ ಆರಂಭಗೊಳ್ಳಲಿದ್ದು, ಆರಂಭದಲ್ಲಿ ಮೂರು ಏಕದಿನ ಪಂದ್ಯ ನಡೆಯಲಿದ್ದು, ತದನಂತರ ಮೂರು ಟಿ-20 ಪಂದ್ಯಗಳ ಸರಣಿ ಆಯೋಜನೆಗೊಂಡಿದೆ. ತಂಡದಲ್ಲಿ ಯಜುವೇಂದ್ರ ಚಹಾಲ್​, ಕೃನಾಲ್ ಪಾಂಡ್ಯಾ ಹಾರ್ದಿಕ್​ ಪಾಂಡ್ಯಾ, ನಿತೀಶ್ ರಾಣಾ, ಇಶನ್​ ಕಿಶನ್​, ದೇವದತ್​ ಪಡಿಕ್ಕಲ್​​, ಮನೀಷ್ ಪಾಂಡೆ ಸೇರಿದಂತೆ ಎಲ್ಲರೂ ಬಹುತೇಕ ಯುವಕರಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಗೋಸ್ಕರ ಆಯ್ಕೆಯಾಗಿರುವ ತಂಡದಲ್ಲಿ ಶಿಖರ್​ ಧವನ್​, ಮನೀಷ್ ಪಾಂಡೆ, ಹಾರ್ದಿಕ್​ ಪಾಂಡ್ಯಾ,ಯಜುವೇಂದ್ರ ಚಹಲ್​,ಕೃನಾಲ್​ ಪಾಂಡ್ಯಾ, ಭುವನೇಶ್ವರ್ ಕುಮಾರ್​ ಮಾತ್ರ ಅನುಭವ ಹೊಂದಿದ್ದು, ಉಳಿದಂತೆ ಬಹುತೇಕ ಪ್ಲೇಯರ್ಸ್ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಸನ್ನದ್ಧಗೊಳ್ಳುತ್ತಿದ್ದಾರೆ.

ತಂಡದಲ್ಲಿ ಯಾರೆಲ್ಲ ಇದ್ದಾರೆ ನೋಡಿ

ಶಿಖರ್​ ಧವನ್(ಕ್ಯಾಪ್ಟನ್​)​, ಭುವನೇಶ್ವರ್ ಕುಮಾರ್(ಉಪ ನಾಯಕ)​, ಪೃಥ್ವಿ ಶಾ, ದೇವದತ್ ಪಡಿಕ್ಕಲ್​, ಋತುರಾಜ್​​ ಗಾಯಕ್‌ವಾಡ್​, ಸೂರ್ಯಕುಮಾರ್​, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯಾ, ಕೃನಾಲ್ ಪಾಂಡ್ಯಾ, ನಿತೀಶ್ ರಾಣಾ, ಇಶನ್​ ಕಿಶನ್​(ವಿ.ಕೀ), ಸಂಜು ಸ್ಯಾಮ್ಸನ್​( ವಿ.ಕೀ), ಯಜುವೇಂದ್ರ ಚಹಲ್​, ಆರ್​.ಚಹರ್​, ಕೆ.ಗೌತಮ್​, ಕುಲ್ದೀಪ್ ಯಾದವ್​, ವರುಣ್​ ಚಕ್ರವರ್ತಿ, ದೀಪಕ್​ ಚಹರ್​, ನವದೀಪ್​ ಸೈನಿ ಹಾಗೂ ಚೇತನ್ ಸಕಾರಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.