ನವದೆಹಲಿ: ಸದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಟಿ-20 ಸರಣಿಗಳ ಪಂದ್ಯ ನಡೆಯುತ್ತಿದ್ದು, ಇಂದು ಗುವಾಟಿಯಲ್ಲಿ ಮೂರನೇ ಪಂದ್ಯ ನಡೆಯಲಿದೆ. ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಪಂದ್ಯಕ್ಕೂ ಮುನ್ನ ಬಿಸಿಸಿಐ ಇಶಾನ್ ಕಿಶನ್ ಅವರೊಂದಿಗಿನ ತಮಾಷೆಯ ಸಂದರ್ಶನದ ವಿಡಿಯೋವನ್ನು ಹಂಚಿಕೊಂಡಿದೆ. ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳಿಗೆ ತಪ್ಪು ಉತ್ತರ ನೀಡುವಂತೆ ಕಿಶನ್ಗೆ ಟಾಸ್ಕ್ ನೀಡಲಾಗಿತ್ತು. ಅದರಂತೆ ಅವರು ಕೇಳಿದ ಪ್ರಶ್ನೆಗಳಿಗೆ ತಪ್ಪಾದ ಮಾಹಿತಿ ನೀಡಿದ್ದಾರೆ.
-
Wrong answers only with @ishankishan51 😎
— BCCI (@BCCI) November 28, 2023 " class="align-text-top noRightClick twitterSection" data="
When wrong is right here 😉
WATCH 🎥🔽 - By @28anand | #TeamIndia | #INDvAUS pic.twitter.com/P9pw3X7azQ
">Wrong answers only with @ishankishan51 😎
— BCCI (@BCCI) November 28, 2023
When wrong is right here 😉
WATCH 🎥🔽 - By @28anand | #TeamIndia | #INDvAUS pic.twitter.com/P9pw3X7azQWrong answers only with @ishankishan51 😎
— BCCI (@BCCI) November 28, 2023
When wrong is right here 😉
WATCH 🎥🔽 - By @28anand | #TeamIndia | #INDvAUS pic.twitter.com/P9pw3X7azQ
ಇಶಾನ್ ಕಿಶನ್ಗೆ ಕೇಳಿದ ಪ್ರಶ್ನೆಗಳು ಅದಕ್ಕೆ ಅವರು ನೀಡಿದ ಉತ್ತರಗಳು ಇಲ್ಲಿವೆ.
ಪ್ರಶ್ನೆ: ನಿಮ್ಮ ಹೆಸರು ಏನು?
ಉತ್ತರ: ವಿವಿಎಲ್ ಲಕ್ಷ್ಮಣ್
ಪ್ರಶ್ನೆ: ನಿಮ್ಮ ವಯಸ್ಸು?
ಉತ್ತರ: 82 ವರ್ಷಗಳು
ಪ್ರಶ್ನೆ: ನೀವು ಯಾವ ಭಾಷೆ ಮಾತನಾಡುತ್ತಿದ್ದೀರಿ?
ಉತ್ತರ: ಸ್ಪ್ಯಾನಿಷ್
ಪ್ರಶ್ನೆ: ನೀವು ಯಾವ ಕ್ರೀಡೆ ಆಡುತ್ತೀರಿ?
ಉತ್ತರ: ಫುಟ್ಬಾಲ್
ಪ್ರಶ್ನೆ: ಸೂರ್ಯಕುಮಾರ್ ಯಾದವ್ ಯಾರು?
ಉತ್ತರ: ವಿಕೆಟ್ ಕೀಪರ್, ಬೌಲರ್
ಪ್ರಶ್ನೆ: ವಿರಾಟ್ ಮತ್ತು ರೋಹಿತ್ ಯಾವ ಆಟವನ್ನು ಆಡುತ್ತಾರೆ?
ಉತ್ತರ: ಖೋ-ಖೋ
ಪ್ರಶ್ನೆ: ನಿಮ್ಮ ಕೂದಲಿನ ಬಣ್ಣ ಏನು?
ಉತ್ತರ: ಕಿತ್ತಳೆ
ಪ್ರಶ್ನೆ: ಚೆಂಡು ಬ್ಯಾಟ್‌ಗೆ ಬಡಿದಾಗ ಯಾವ ಶಬ್ದ ಬರುತ್ತದೆ?
ಉತ್ತರ: ಮಿಯಾವ್
ಪ್ರಶ್ನೆ: ನಿಮ್ಮ ಕಿಟ್ ಬ್ಯಾಗ್‌ನಲ್ಲಿ ಯಾವ ಮೂರು ವಸ್ತುಗಳನ್ನು ಇಟ್ಟುಕೊಂಡಿದ್ದೀರಿ?
ಉತ್ತರ: ಹೆಡ್‌ಫೋನ್‌ಗಳು, ವಾಲೆಟ್, ಐಸ್ ಕ್ರೀಮ್
ಪ್ರಶ್ನೆ: ನೀವು ಜಿಮ್‌ನಲ್ಲಿ ಏನು ಮಾಡುತ್ತೀರಿ?
ಉತ್ತರ: ನಾನು ಆಟವಾಡುತ್ತೇನೆ
ಪ್ರಶ್ನೆ: ನಾವು ಈಗ ಎಲ್ಲಿದ್ದೇವೆ?
ಉತ್ತರ: ಟೋಕಿಯೋ ಎಂದು ಹೀಗೆ ಕೇಳಿದ ಪ್ರಶ್ನೆಗಳಿಗೆ ಕಿಶನ್ ತಪ್ಪು ಉತ್ತರಗಳನ್ನು ನೀಡಿದ್ದಾರೆ.
ಸದ್ಯ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧ ಭಾರತದ ಟಿ-20 ಸರಣಿಯಲ್ಲಿ ಇಶನ್ ಕಿಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 39 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್ ಸಮೇತ 58 ರನ್ ಕಲೆ ಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಪಂದ್ಯವನ್ನು ಭಾರತ 2 ವಿಕೆಟ್ಗಳಿಂದ ಜಯ ಗಳಿಸಿತ್ತು. ಎರಡನೇ ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್ ಮಾಡಿದ ಕಿಶನ್ ಅರ್ಧಶತಕ ಬಾರಿಸಿದ್ದರು. ಈ ಪಂದ್ಯದಲ್ಲಿ 32 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 52 ರನ್ಗಳ ಕಲೆ ಹಾಕಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಸಹಾಯ ಮಾಡಿದ್ದರು. ಈ ಪಂದ್ಯವನ್ನು ಟೀಮ್ ಇಂಡಿಯಾ 44 ರನ್ಗಳಿಂದ ಗೆದ್ದಿತ್ತು.
ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಅತ್ಯಂತ ಕಿರಿಯ ನಾಯಕ: ಪಂತ್, ಗಿಲ್ ಸೇರಿ ಈ ಪಟ್ಟಿಯಲ್ಲಿ ಯಾರಿದ್ದಾರೆ?