ಮ್ಯಾಂಚೆಸ್ಟರ್: ಟೀಂ ಇಂಡಿಯಾದ ಜೂನಿಯರ್ ಫಿಜಿಯೋ ಯೋಗೇಶ್ ಪರ್ಮಾರ್ಗೆ ಕೊರೊನಾ ಸೋಂಕು ದೃಢಗೊಂಡಿರುವ ಕಾರಣ, ನಾಳೆಯಿಂದ ಆರಂಭಗೊಳ್ಳಲಿರುವ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯ ಅನುಮಾನ ಮೂಡಿಸಿದೆ. ಇದರ ಬೆನ್ನಲ್ಲೇ ಫೈನಲ್ ಟೆಸ್ಟ್ ಪಂದ್ಯ ಅಮಾನತು ಮಾಡುವಂತೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಬಿಸಿಸಿಐ ಬಳಿ ಕೇಳಿಕೊಂಡಿದೆ ಎಂದು ತಿಳಿದು ಬಂದಿದೆ.
ಫೈನಲ್ ಪಂದ್ಯ ಮುಂದೂಡಿಕೆ ಅಥವಾ ಅಮಾನತು ಮಾಡಲು ಭಾರತೀಯ ಕ್ರಿಕೆಟ್ ಮಂಡಳಿ ಹಿಂದೇಟು ಹಾಕಿದ್ದು, ಅಗತ್ಯಬಿದ್ದರೆ ಪಂದ್ಯ ರದ್ದುಗೊಳಿಸುವುದಾಗಿ ತಿಳಿಸಿದೆ. ಇಂದು ಮಧ್ಯರಾತ್ರಿ ವೇಳೆಗೆ ಎಲ್ಲ ಕ್ರಿಕೆಟರ್ಸ್ ಕೊರೊನಾ ಆರ್ಟಿ-ಪಿಸಿಆರ್ ವರದಿ ಬರಲಿದ್ದು, ತದನಂತರ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಟೀಂ ಇಂಡಿಯಾದ ಪಿಜಿಯೋಗೆ ಕೊರೊನಾ ದೃಢಗೊಳ್ಳುತ್ತಿದ್ದಂತೆ ಅಭ್ಯಾಸ ಮೊಟಕುಗೊಳಿಸಿ ಎಲ್ಲ ಪ್ಲೇಯರ್ಸ್ಗಳಿಗೆ ಹೋಟೆಲ್ನಲ್ಲಿ ಕ್ವಾರಂಟೈನ್ ಆಗುವಂತೆ ತಿಳಿಸಲಾಗಿದೆ. ಈಗಾಗಲೇ ಎಲ್ಲ ಆಟಗಾರರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಇಂದು ಮಧ್ಯರಾತ್ರಿ ವೇಳೆಗೆ ವರದಿ ಬರಬಹುದು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಭಾರತ-ದ.ಆಫ್ರಿಕಾ ಕ್ರಿಕೆಟ್ ಸರಣಿ ಡಿ. 17ರಿಂದ ಆರಂಭ... ಹರಿಣಗಳ ನಾಡಿಗೆ ಟೀಂ ಇಂಡಿಯಾ ಪ್ರವಾಸ
ಪಂದ್ಯ ಅಮಾನತಿಗೆ ಇಸಿಬಿ ಮನವಿ
ಟೀಂ ಇಂಡಿಯಾದಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಫೈನಲ್ ಪಂದ್ಯ ಅಮಾನತುಗೊಳಿಸುವಂತೆ ಇಸಿಬಿ ಮನವಿ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಸಿಸಿಐ, ಆರ್ಟಿ-ಪಿಸಿಆರ್ ವರದಿ ಬರುವವರೆಗೆ ಕಾಯ್ದುನೋಡುವ ಯೋಜನೆಗೆ ಮುಂದಾಗಿದೆ. ಒಂದು ವೇಳೆ ಪ್ಲೇಯರ್ಸ್ಗೆ ಕೊರೊನಾ ನೆಗೆಟಿವ್ ಬಂದರೆ ಪಂದ್ಯ ನಡೆಸಲು ಯೋಜನೆ ಹಾಕಿಕೊಂಡಿದೆ. ಜೊತೆಗೆ ಓರ್ವ ಫಿಜಿಯೋಗೆ ನೀಡುವಂತೆ ಇಸಿಬಿ ಬಳಿ ಮನವಿ ಮಾಡಿಕೊಂಡಿದೆ.