ETV Bharat / sports

ಟಿ - 20 ಚಾಲೆಂಜ್​ ಟ್ರೋಫಿ: ಮಹಿಳಾ ತಂಡ ಪ್ರಕಟಿಸಿದ ಬಿಸಿಸಿಐ: ಮೇ. 23ರಿಂದ ಟೂರ್ನಿ ಆರಂಭ

2022ರ ಐಪಿಎಲ್ ಟೂರ್ನಮೆಂಟ್ ಮಧ್ಯದಲ್ಲೇ ಮಹಿಳಾ ಟಿ20 ಚಾಲೆಂಜ್ ಟ್ರೋಫಿ ಆಯೋಜನೆಗೊಂಡಿದ್ದು, ಅದಕ್ಕಾಗಿ ಭಾರತೀಯ ಕ್ರಿಕೆಟ್ ಮಂಡಳಿ ಇಂದು ವೇಳಾಪಟ್ಟಿ ಪ್ರಕಟಿಸಿದೆ.​​

Women's T20 Challenge
Women's T20 Challenge
author img

By

Published : May 16, 2022, 3:02 PM IST

ಮುಂಬೈ: ಮೇ. 23ರಿಂದ ಆರಂಭಗೊಳ್ಳಲಿರುವ ಟಿ-20 ಮಹಿಳಾ ಚಾಲೆಂಜ್​ ಟ್ರೋಫಿಗೋಸ್ಕರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡ ಪ್ರಕಟಿಸಿದೆ. ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಮತ್ತು ದೀಫ್ತಿ ಶರ್ಮಾ ಅವರನ್ನು ಕ್ರಮವಾಗಿ ಸೂಪರ್​ನೋವಾಸ್, ಟ್ರೈಲ್‌ಬ್ಲೇಜರ್ಸ್ ಮತ್ತು ವೆಲಾಸಿಟಿಯ ನಾಯಕಿಯನ್ನಾಗಿ ಘೋಷಿಸಿದೆ. ಪಂದ್ಯಗಳು ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಷಿಯೇಷನ್​ ಮೈದಾನದಲ್ಲಿ ನಡೆಯಲಿವೆ.

ಈ ತಂಡಗಳಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​, ವೆಸ್ಟ್​ ಇಂಡೀಸ್​ ಹಾಗೂ ಆಸ್ಟ್ರೇಲಿಯಾದ 12 ಪ್ಲೇಯರ್ಸ್​​ ಭಾಗಿಯಾಗಲಿದ್ದು, ವಿವಿಧ ಫ್ರಾಂಚೈಸಿಗಳ ಪರವಾಗಿ ಮೈದಾನಕ್ಕಿಳಿಯಲಿದ್ದಾರೆ. ಮೇ 23ರಂದು ಉದ್ಘಾಟನಾ ಪಂದ್ಯ ಟ್ರೈಲ್‌ಬ್ಲೇಜರ್ಸ್ ಮತ್ತು ಸೂಪರ್​ನೋವಾಸ್ ನಡುವೆ ನಡೆಯಲಿದ್ದು, ಮೇ 24ರಂದು ಸೂಪರ್​ನೋವಾಸ್ ತಂಡ ವೆಲಾಸಿಟಿ ವಿರುದ್ಧ ಸೆಣಸಾಟ ನಡೆಸಲಿದೆ. ಫೈನಲ್ ಪಂದ್ಯ ಮೇ. 28ರಂದು ನಡೆಯಲಿದೆ. ಈ ಸಲದ ಟೂರ್ನಿಯಲ್ಲಿ ಅನುಭವಿ ಆಟಗಾರರಾದ ಮಿಥಾಲಿ ರಾಜ್​ ಹಾಗೂ ಜೂಲನ್ ಗೋಸ್ವಾಮಿಗೆ ವಿಶ್ರಾಂತಿ ನೀಡಲಾಗಿದೆ.

ಇದನ್ನೂ ಓದಿ: IND vs SA: ರೋಹಿತ್ ಸೇರಿ ಹಿರಿಯ ಪ್ಲೇಯರ್ಸ್​ಗೆ ವಿಶ್ರಾಂತಿ.. ತಂಡ ಮುನ್ನಡೆಸಲಿರುವ ಹಾರ್ದಿಕ್​?

ತಂಡಗಳು ಇಂತಿವೆ: ಸೂಪರ್​ನೋವಾಸ್: ಹರ್ಮನ್ ಪ್ರೀತ್ ಕೌರ್​(ಕ್ಯಾಪ್ಟನ್​), ತಾನಿಯಾ ಭಾಟಿಯಾ,ಅಲಾನ್ ಕಿಂಗ್, ಆಯುಷಿ ಸೋನಿ, ಚಂದು ವಿ. ಡಿಯಾಂಡ್ರಾ ಡಾಟಿನ್​, ಹರ್ಲೀನ್ ಡಿಯೋಲ್​, ಮೇಘನಾ ಸಿಂಗ್​, ಮೋನಿಕಾ ಪಟೇಲ್, ಮುಸ್ಕಾನ್ ಮಲಿಕ್​, ಪೂಜಾ ವಸ್ತ್ರಕರ್​, ಪ್ರಿಯಾ ಪುನಿಯಾ, ರಾಶಿ ಕನೋಜಿಯಾ, ಸೋಫಿ ಎಕ್ಲೆಸ್ಟೋನ್​, ಸುನೆ ಲೂಸ್, ಮಾನ್ಸಿ ಜೋಶಿ

ಟ್ರೇಲ್‌ಬ್ಲೇಜರ್ಸ್: ಸ್ಮೃತಿ ಮಂಧಾನ (ಕ್ಯಾಪ್ಟನ್​​​), ಪೂನಂ ಯಾದವ್, ಅರುಂಧತಿ ರೆಡ್ಡಿ, ಹೇಲಿ ಮ್ಯಾಥ್ಯೂಸ್, ಜೆಮಿಮಾ ರಾಡ್ರಿಗಸ್, ಪ್ರಿಯಾಂಕಾ ಪ್ರಿಯದರ್ಶಿನಿ, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್, ರಿಚಾ ಘೋಷ್, ಎಸ್ ಮೇಘನಾ, ಸೈಕಾ ಇಶಾಕ್, ಸಲ್ಮಾ ಖಾತುನ್, ಸುಫಿಯಾ ಮಲ್ಲ್, ಶರ್ಮಿನ್ ಅಖ್ತರ್, ಶರ್ಮಿನ್ ಅಖ್ತರ್ ಎಸ್ ಬಿ ಪೋಕರ್ಕರ್

ವೆಲಾಸಿಟಿ: ದೀಪ್ತಿ ಶರ್ಮಾ (ಕ್ಯಾಪ್ಟನ್​), ಸ್ನೇಹಾ ರಾಣಾ, ಶಫಾಲಿ ವರ್ಮಾ, ಅಯಾಬೊಂಗಾ ಖಾಕಾ, ಕೆಪಿ ನವಗಿರೆ, ಕ್ಯಾಥ್ರಿನ್ ಕ್ರಾಸ್, ಕೀರ್ತಿ ಜೇಮ್ಸ್, ಲಾರಾ ವೊಲ್ವಾರ್ಡ್ಟ್, ಮಾಯಾ ಸೋನಾವಾನೆ, ನತ್ತಕನ್ ಚಂತಮ್, ರಾಧಾ ಯಾದವ್, ಆರತಿ ಕೇದಾರ್, ಶಿವಾಲಿ ಬಹಾತ್, ಸಿಮ್ರಾನ್ ಬಹಾತ್, ಸಿಮ್ರಾನ್ ಬಹಾತ್ ಪ್ರಣವಿ ಚಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.