ETV Bharat / sports

ದೇಶಿ ಕ್ರಿಕೆಟಿಗರಿಗೆ ಖುಷಿ ಸುದ್ದಿ ನೀಡಿದ ಬಿಸಿಸಿಐ!! - ದೇಶಿ ಋತು ವೇಳಾಪಟ್ಟಿ

ಅಕ್ಟೋಬರ್​ 20, 2021ರಿಂದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ಆರಂಭಗೊಳ್ಳಲಿದೆ. ಫೈನಲ್ ಪಂದ್ಯ ನವೆಂಬರ್ 12, 2021ರಂದು ನಡೆಯಲಿದೆ. ಕಳೆದ 2 ವರ್ಷ ಕೋವಿಡ್​-19 ಕಾರಣದಿಂದ ರದ್ದಾಗಿದ್ದ ರಣಜಿ ಟ್ರೋಫಿ ನವೆಂಬರ್​ 16, 2021ರಿಂದ ಫೆಬ್ರವರಿ 19, 2022ರವರೆಗೆ ಮೂರು ತಿಂಗಳ ಕಾಲ ನಡೆಯಲಿದೆ..

ದೇಶಿ ಋತು ವೇಳಾಪಟ್ಟಿ ಘೋಷಣೆ
ದೇಶಿ ಋತು ವೇಳಾಪಟ್ಟಿ ಘೋಷಣೆ
author img

By

Published : Jul 3, 2021, 6:00 PM IST

ಮುಂಬೈ : ಬಿಸಿಸಿಐ ಶನಿವಾರ 2021-22ರ ಆವೃತ್ತಿಯ ದೇಶೀಯ ಋತುವಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಹಿಳಾ ಮತ್ತು ಪುರುಷರ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್ 3ನೇ ವಾರದಿಂದ ದೇಶಿ ಕ್ರಿಕೆಟ್​ಗೆ ಚಾಲನೆ ದೊರೆಯಲಿದೆ.

ದೇಶಿ ಆವೃತ್ತಿ ಸೆಪ್ಟೆಂಬರ್​ 21, 2021ರಂದು ಹಿರಿಯ ಮಹಿಳಾ ಏಕದಿನ ಲೀಗ್ ಆರಂಭಗೊಳ್ಳಲಿದೆ. ನಂತರ ಹಿರಿಯ ಮಹಿಳೆಯರ ಏಕದಿನ ಚಾಲೆಂಜರ್ ಟ್ರೋಫಿ ಅಕ್ಟೋಬರ್​ 27ರಿಂದ ಆರಂಭವಾಗಲಿದೆ.

ಅಕ್ಟೋಬರ್​ 20, 2021ರಿಂದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ಆರಂಭಗೊಳ್ಳಲಿದೆ. ಫೈನಲ್ ಪಂದ್ಯ ನವೆಂಬರ್ 12, 2021ರಂದು ನಡೆಯಲಿದೆ. ಕಳೆದ 2 ವರ್ಷ ಕೋವಿಡ್​-19 ಕಾರಣದಿಂದ ರದ್ದಾಗಿದ್ದ ರಣಜಿ ಟ್ರೋಫಿ ನವೆಂಬರ್​ 16, 2021ರಿಂದ ಫೆಬ್ರವರಿ 19, 2022ರವರೆಗೆ ಮೂರು ತಿಂಗಳ ಕಾಲ ನಡೆಯಲಿದೆ.

ಐಪಿಎಲ್​ಗೂ ಮುನ್ನ ಫೆಬ್ರವರಿ 23ರಿಂದ ಮಾರ್ಚ್​ 26, 2022ರವರೆಗೆ 50 ಓವರ್​ಗಳ ಟೂರ್ನಮೆಂಟ್ ಆದ ವಿಜಯ ಹಜಾರೆ ಟ್ರೋಫಿ ನಡೆಯಲಿದೆ. 2021-22ರ ಆವೃತ್ತಿಯಲ್ಲಿ ವಿವಿಧ ವಯೋಮಾನದ ಪುರುಷ ಮತ್ತು ಮಹಿಳೆಯರ ವಿಭಾಗದಿಂದ ಒಟ್ಟು 2127 ಪಂದ್ಯಗಳು ನಡೆಯಲಿವೆ. ಇಷ್ಟು ಟೂರ್ನಿಗಳನ್ನು ಆಟಗಾರರ ಆರೋಗ್ಯ ಮತ್ತು ಸುರಕ್ಷಿತೆಯೊಂದಿಗೆ ನಡೆಸಲು ಬದ್ಧವಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

ಇದನ್ನು ಓಧಿ: ಜೈಪುರದಲ್ಲಿ ತಲೆ ಎತ್ತಲಿದೆ ವಿಶ್ವದ 3ನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ.. ಇದರ ಸಾಮರ್ಥ್ಯ ಇಷ್ಟಿರುತ್ತೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.