ETV Bharat / sports

14 ಟಿ20, 4 ಟೆಸ್ಟ್​ ಸೇರಿ 3 ಏಕದಿನ ಪಂದ್ಯ: 2021-22ನೇ ಸಾಲಿನ ಟೀಂ ಇಂಡಿಯಾ ವೇಳಾಪಟ್ಟಿ ರಿಲೀಸ್​ - 2021-22ರ ಟೀಂ ಇಂಡಿಯಾ ವೇಳಾಪಟ್ಟಿ

ಟೀಂ ಇಂಡಿಯಾ 2021-22ರ ಅವಧಿಯಲ್ಲಿ ತವರಿನಲ್ಲಿ 14 ಟಿ-20, 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದ್ದು, ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ವೇಳಾಪಟ್ಟಿ ರಿಲೀಸ್ ಮಾಡಿದೆ.

Team india
Team india
author img

By

Published : Sep 20, 2021, 7:09 PM IST

ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​ ಹಾಗೂ ಟಿ-20 ವಿಶ್ವಕಪ್​ ಮುಕ್ತಾಯಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಯಾವೆಲ್ಲ ದೇಶಗಳೊಂದಿಗೆ ಸೆಣಸಾಟ ನಡೆಸಲಿದೆ ಎಂಬ ವೇಳಾಪಟ್ಟಿ ಬಿಸಿಸಿಐನಿಂದ ರಿಲೀಸ್​ ಆಗಿದೆ. ವೇಳಾಪಟ್ಟಿ ಪ್ರಕಾರ ಟೀಂ ಇಂಡಿಯಾ ತವರಿನಲ್ಲಿ 14 ಟಿ-20 ಪಂದ್ಯ, ನಾಲ್ಕು ಟೆಸ್ಟ್​ ಹಾಗೂ ಮೂರು ಏಕದಿನ ಪಂದ್ಯಗಳಲ್ಲಿ ಭಾಗಿಯಾಗಲಿದೆ.

ನವೆಂಬರ್​​​ 2021ರಿಂದ ಜೂನ್​​ 2022ರೊಳಗೆ ಭಾರತ ಯಾವೆಲ್ಲ ತಂಡಗಳೊಂದಿಗೆ ಸೆಣಸಾಟ ನಡೆಸಲಿದೆ ಎಂಬ ವೇಳಾಪಟ್ಟಿ ಇದಾಗಿದ್ದು, ಎಂಟು ತಿಂಗಳಲ್ಲಿ ನ್ಯೂಜಿಲ್ಯಾಂಡ್​​​(ನವೆಂಬರ್​-ಡಿಸೆಂಬರ್​), ವೆಸ್ಟ್​ ಇಂಡೀಸ್​( ಫೆಬ್ರವರಿ 2022), ಶ್ರೀಲಂಕಾ(ಫೆಬ್ರವರಿ-ಮಾರ್ಚ್​​ 2022) ಹಾಗೂ ದಕ್ಷಿಣ ಆಫ್ರಿಕಾ(ಜೂನ್​ 2022) ತಂಡಗಳೊಂದಿಗೆ ತವರಿನಲ್ಲಿ ಸೆಣಸಾಟ ನಡೆಸಲಿದೆ. ಇದಾದ ಬಳಿಕ 2022-23ರ ಡಿಸೆಂಬರ್​​-ಜನವರಿ ತಿಂಗಳಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಇದಾದ ಬಳಿಕ ಏಪ್ರಿಲ್​​-ಮೇ ತಿಂಗಳಲ್ಲಿ ಇಂಡಿಯನ್​ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳಲಿದೆ.

ಇದನ್ನೂ ಓದಿ: ದೇಶಿ ಕ್ರಿಕೆಟಿಗರಿಗೆ ಬಿಸಿಸಿಐ ಗುಡ್​ ನ್ಯೂಸ್: ಪಂದ್ಯ ಶುಲ್ಕ ಹೆಚ್ಚಳದ ಜೊತೆಗೆ ಕೋವಿಡ್​ ಪರಿಹಾರ ಘೋಷಣೆ

ಟೀಂ ಇಂಡಿಯಾ ಸಂಪೂರ್ಣ ವೇಳಾಪಟ್ಟಿ ಇಂತಿದೆ.​

  • ಭಾರತ-ನ್ಯೂಜಿಲ್ಯಾಂಡ್​​

ಅಕ್ಟೋಬರ್ ತಿಂಗಳಲ್ಲಿ ಈ ಸರಣಿ ಆರಂಭಗೊಳ್ಳಲಿದ್ದು, ಮೂರು ಟಿ-20 ಪಂದ್ಯಗಳು ಕ್ರಮವಾಗಿ ಜೈಪುರ್​, ರಾಂಚಿ ಹಾಗೂ ಕೋಲ್ಕತ್ತಾದಲ್ಲಿ ನಡೆಯಲಿದ್ದು, ಇದಾದ ಬಳಿಕ ಎರಡು ಟೆಸ್ಟ್​​ ಪಂದ್ಯಗಳು ಕಾನ್ಪುರ್​ ಹಾಗೂ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿವೆ.

  • ಭಾರತ-ವೆಸ್ಟ್​ ಇಂಡೀಸ್​

ಕೆರಿಬಿಯನ್​​ ವಿರುದ್ಧ ಟೀಂ ಇಂಡಿಯಾ ಮೂರು ಏಕದಿನ ಹಾಗೂ ಐದು ಟಿ-20 ಪಂದ್ಯಗಳು ಆಯೋಜನೆಗೊಂಡಿದ್ದು, ಫೆಬ್ರವರಿ 6ರಂದು ಸರಣಿಗಳು ಆರಂಭಗೊಳ್ಳಲಿವೆ. ಅಹ್ಮಮದಾಬಾದ್​, ಜೈಪುರ್ ಹಾಗೂ ಕೋಲ್ಕತ್ತಾದಲ್ಲಿ ಏಕದಿನ ಸರಣಿಗಳು ನಡೆಯಲಿದ್ದು, ಕಟಕ್​, ವೈಜಾಗ್ ಹಾಗೂ ತಿರುವನಂತಪುರಂನಲ್ಲಿ ಟಿ-20 ಪಂದ್ಯಗಳು ಆಯೋಜನೆಯಾಗಿವೆ.

  • ಭಾರತ-ಶ್ರೀಲಂಕಾ

ಫೆಬ್ರವರಿ-ಮಾರ್ಚ್​ ತಿಂಗಳಲ್ಲಿ ಈ ಸರಣಿ ಆಯೋಜನೆಗೊಂಡಿದ್ದು, ಎರಡು ಟೆಸ್ಟ್​​ ಹಾಗೂ ಮೂರು ಟಿ-20 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಟೆಸ್ಟ್​ ಪಂದ್ಯ ಫೆಬ್ರವರಿ 25ರಿಂದ ಆರಂಭಗೊಳ್ಳಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಟೆಸ್ಟ್​​ ಪಂದ್ಯ ಮೊಹಾಲಿಯಲ್ಲಿ ಆಯೋಜನೆಗೊಂಡಿದೆ. ಉಳಿದಂತೆ ಮೊಹಾಲಿ, ಧರ್ಮಶಾಲಾ ಹಾಗೂ ಲಕ್ನೋದಲ್ಲಿ ಟಿ-20 ಪಂದ್ಯಗಳು ನಡೆಯಲಿವೆ. ಇದಾದ ಬಳಿಕ 2022-23ರ ಡಿಸೆಂಬರ್​​-ಜನವರಿ ತಿಂಗಳಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್​ ಆಯೋಜನೆಯಾಗಿರುವ ಕಾರಣ ಟೀಂ ಇಂಡಿಯಾ ಹೆಚ್ಚಿನ ಟಿ-20 ಪಂದ್ಯಗಳಲ್ಲಿ ಭಾಗಿಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.