ETV Bharat / sports

ಐಪಿಎಲ್ ಮೇಲಿನ ವ್ಯಾಮೋಹದಿಂದ ಕಷ್ಟದಲ್ಲಿರುವ 700 ರಣಜಿ ಆಟಗಾರನ್ನ ಮರೆಯಿತೇ ಬಿಸಿಸಿಐ? - ಸೌರವ್ ಗಂಗೂಲಿ

ಸಾಂಕ್ರಾಮಿಕ ಕೊರೊನಾದಿಂದ ಈಗಾಗಲೇ 2020ರ ಆವೃತ್ತಿಯ ರಣಜಿ ಟೂರ್ನಿ ರದ್ದಾಗಿದೆ. ಇದೀಗ 2021ರಲ್ಲಿ ಎರಡನೇ ಅಲೆಯ ಕೋವಿಡ್​ನಿಂದ ಈ ವರ್ಷವೂ ರಣಜಿ ಆಯೋಜನೆ ಅನುಮಾನವಾಗಿದೆ. ಇದರಿಂದ ಸುಮಾರು 700 ಕ್ಕೂ ಹೆಚ್ಚು ರಣಜಿ ಕ್ರಿಕೆಟಿಗರ ಪರಿಸ್ಥಿತಿ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಬಿಸಿಸಿಐ ಎಸ್​ಜಿಎಂ
ಬಿಸಿಸಿಐ ಎಸ್​ಜಿಎಂ
author img

By

Published : May 29, 2021, 7:53 PM IST

ಮುಂಬೈ: ವಿಶ್ವದಲ್ಲೇ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿರುವ ಐಪಿಎಲ್​ ಕಡೆಗೆ ತನ್ನಲ್ಲೇ ಗಮನ ನೀಡುತ್ತಾ ದೇಶಾದ್ಯಂತ ಜೀವನೋಪಾಯಕ್ಕೆ ಪ್ರಥಮ ದರ್ಜೆ ಕ್ರಿಕೆಟ್​ ನಂಬಿಕೊಂಡಿರುವ 700ಕ್ಕೂ ಹೆಚ್ಚು ಕ್ರಿಕೆಟಿಗರನ್ನು ಮರೆಯುತ್ತಿದೆಯೇ ಎನ್ನುವ ಅನುಮಾನ ಮೂಡುತ್ತಿದೆ.

ಸಾಂಕ್ರಾಮಿಕ ಕೊರೊನಾದಿಂದ ಈಗಾಗಲೇ 2020ರ ಆವೃತ್ತಿಯ ರಣಜಿ ಟೂರ್ನಿ ರದ್ಧಾಗಿದೆ. ಇದೀಗ 2021ರಲ್ಲಿ ಎರಡನೇ ಅಲೆಯ ಕೋವಿಡ್​ನಿಂದ ಈ ವರ್ಷವೂ ರಣಜಿ ಆಯೋಜನೆ ಅನುಮಾನವಾಗಿದೆ. ಇದರಿಂದ ಸುಮಾರು 700 ಕ್ಕೂ ಹೆಚ್ಚು ರಣಜಿ ಕ್ರಿಕೆಟಿಗರ ಪರಿಸ್ಥಿತಿ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಕಳೆದ ವರ್ಷ ಬಿಸಿಸಿಐ ರಣಜಿ ರದ್ದು ಮಾಡಿದ್ದಕ್ಕಾಗಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ಇದರಿಂದ ಕೆಲವು ಸರ್ಕಾರಿ ಕೆಲಸವಿಲ್ಲದ ಪ್ರಥಮ ದರ್ಜೆ ಕ್ರಿಕೆಟಿಗರು ಶನಿವಾರ ನಡೆದ ಬಿಸಿಸಿಐ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಬಿಸಿಸಿಐ ಐಪಿಎಲ್ ಮತ್ತು ಟಿ-20 ವಿಶ್ವಕಪ್​ ಬಗ್ಗೆ ಮಾತ್ರ ಚರ್ಚಿಸಿ ಪ್ರಥಮ ದರ್ಜೆ ಕ್ರಿಕೆಟಿಗರ ಪರಿಹಾರದ ಬಗ್ಗೆ ಯಾವುದೇ ಚರ್ಚೆ ನಡೆಯದಿರುವುದು ಆಶ್ಚರ್ಯ ತಂದಿದೆ. ಬಿಸಿಸಿಐ ನಡೆ ನಿಜಕ್ಕೂ ರಣಜಿ ಕ್ರಿಕೆಟ್​ ಅನ್ನು ಜೀವಾನಾಧಾರವಾಗಿರಿಸಿಕೊಂಡಿರುವ ಕೆಲವು ಪ್ರಥಮ ದರ್ಜೆ ಕ್ರಿಕೆಟಿಗರಿಗೆ ನುಂಗಲಾರದ ತುತ್ತಾಗಿದೆ.

ಇದರ ಬಗ್ಗೆ ಮಾತನಾಡಿರುವ ಬಿಸಿಸಿಐ ಖಜಾಂತಿ ಅರುಣ ಧುಮಾಲ್, ನಾವು ಪಾವತಿ ಸಮಸ್ಯೆಯನ್ನು ಬೇರೆ ಸಮಯದಲ್ಲಿ ಚರ್ಚಿಸುತ್ತೇವೆ ಎಂದು ತಿಳಿಸಿದ್ದಾರೆ. ಈ ಹೇಳಿಕೆ ನಿಜಕ್ಕೂ ಬಿಸಿಸಿಐ ದೇಶೀಯ ಕ್ರಿಕೆಟಿಗರ ದುಃಸ್ಥಿತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ ಎಂದು ತೋರುತ್ತದೆ.

ದೇಶೀಯ ಕ್ರಿಕೆಟಿಗರ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಉತ್ತಮವಾಗಿ ಸಜ್ಜುಗೊಂಡಿರುವ ರಾಜ್ಯ ಸಂಸ್ಥೆಗಳೊಂದಿಗೆ ರಣಜಿ ಟ್ರೋಫಿ ಪರಿಹಾರ ನೀಡುವ ವಿಷಯವನ್ನು ಬೇರೆ ಸಮಯದಲ್ಲಿ ಚರ್ಚಿಸುತ್ತೇವೆ ಎಂದು ಅರುಣ್ ಧುಮಾಲ್ ಹಾರಿಕೆಯ ಉತ್ತರ ನೀಡಿದ್ದಾರೆ.

ರಣಜಿ ಪಂದ್ಯವನ್ನಾಡುವ ಆಟಗಾರರು ಪ್ರತಿ ಪಂದ್ಯಕ್ಕೆ 1.4 ಲಕ್ಷ ರೂ ಗಳಿಸುತ್ತಾರೆ. ಅವರು ಎಲ್ಲಾ ಪಂದ್ಯಗಳನ್ನಾಡಿದರೆ ಆವೃತ್ತಿಗೆ 12ರಿಂದ 13 ಲಕ್ಷ ರೂ ಸಿಗುತ್ತದೆ. ನಾಕ್​ಔಟ್ ಪ್ರವೇಶಿಸಿದರೆ ಇದಕ್ಕಿಂತ ಹೆಚ್ಚು ಪಡೆಯುತ್ತಾರೆ. ಇದೇ ಹಣದಿಂದ ಕೆಲವು ತರಬೇತಿ,ಡಯಟ್ ಮತ್ತು ಜಿಮ್​ ನಿರ್ವಹಣೆಗೆ ಬಳಸುತ್ತಾರೆ. ಇನ್ನೂ ಕೆಲವರ ಜೀವನ ಇದೇ ಹಣದಿಂದ ನಡೆಯುತ್ತಿರುತ್ತದೆ.

ಇದನ್ನು ಓದಿ:ಕ್ರಿಕೆಟ್​ ಪ್ರಿಯರಿಗೆ ಗುಡ್​ನ್ಯೂಸ್.. IPL ಪುನಾರಂಭಿಸಲು BCCI ನಿರ್ಧಾರ.. ಎಲ್ಲಿ ನಡೆಯತ್ತೆ ಮ್ಯಾಚ್?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.