ETV Bharat / sports

ವೃತ್ತಿ ಜೀವನದ ಮೊದಲ 10-12 ವರ್ಷ ನಿದ್ದೆಯಿಲ್ಲದೆ, ಆತಂಕದಲ್ಲೇ ಕಳೆದಿದ್ದೆ : ಸಚಿನ್ - ಮಾನಸಿಕ ಆರೋಗ್ಯದ ಬಗ್ಗೆ ಸಚಿನ್

ರಾತ್ರಿಯಲ್ಲಿ ನಿದ್ದೆ ಮಾಡಲು ಸಾಧ್ಯವಾಗದ ಸಮಯಗಳೊಂದಿಗೆ ನಾನು ಸಮಾಧಾನ ಮಾಡಿಕೊಂಡೆ. ನನ್ನ ಮನಸ್ಸನ್ನು ಹಾಯಾಗಿಡಲು ಏನಾದರೂ ಕೆಲಸ ಮಾಡಲು ಪ್ರಾರಂಭಿಸಿದೆ..

ಸಚಿನ್ ತೆಂಡೂಲ್ಕರ್​
ಸಚಿನ್ ತೆಂಡೂಲ್ಕರ್​
author img

By

Published : May 16, 2021, 10:53 PM IST

ಮುಂಬೈ : 24 ವರ್ಷಗಳ ವೃತ್ತಿಜೀವನದಲ್ಲಿ ಪಂದ್ಯಕ್ಕೆ ಪೂರ್ವ ತಯಾರಿಯ ಪ್ರಮುಖ ಭಾಗವೆಂದು ಅರಿತುಕೊಳ್ಳುವ ಮುನ್ನ 10-12 ವರ್ಷಗಳನ್ನು ಆತಂಕದಲ್ಲಿ ಎದುರಿಸಿದ್ದೇನೆ. ಮತ್ತೆ ಲೆಕ್ಕವಿಲ್ಲದಷ್ಟು ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆದಿದ್ದೆ ಎಂದು ಭಾರತ ಕ್ರಿಕೆಟ್​ನ ಲೆಜೆಂಡ್ ಸಚಿನ್​ ತೆಂಡೂಲ್ಕರ್​ ತಿಳಿಸಿದ್ದಾರೆ.

ಅನ್​ಅಕಾಡೆಮಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕೋವಿಡ್-19 ಸಮಯದಲ್ಲಿ ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯ ಬಗ್ಗೆ ಸಚಿನ್​ ಮಾತನಾಡುವ ವೇಳೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

"ತುಂಬಾ ಸಮಯದ ನಂತರ ಪಂದ್ಯಕ್ಕೆ ದೈಹಿಕವಾಗಿ ತಯಾರಾಗುವುದರ ಜೊತೆ ಮಾನಸಿಕವಾಗಿ ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳಬೇಕು ಎಂಬುದನ್ನು ಅರಿತುಕೊಂಡೆ.

ಪಂದ್ಯ ಆರಂಭವಾಗುವ ಮುನ್ನ ಮೈದಾನಕ್ಕೆ ಪ್ರವೇಶಿಸುತ್ತಿದ್ದಂತೆ ಮನಸಲ್ಲಿ ಆತಂಕ ಹೆಚ್ಚಾಗುತ್ತದೆ ಎಂಬುದ ನನ್ನ ಅಭಿಪ್ರಾಯವಾಗಿದೆ" ಎಂದು ತೆಂಡೂಲ್ಕರ್​ ಹೇಳಿದ್ದಾರೆ.

"ನಾನು ನನ್ನ ವೃತ್ತಿ ಜೀವನದ 10 ರಿತಂದ12 ವರ್ಷಗಳನ್ನು ಆತಂಕ ಅನುಭವಿಸುವ ಜೊತೆಗೆ ಪಂದ್ಯಕ್ಕೂ ಮುನ್ನ ಸಾಕಷ್ಟು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೆ.

ನಂತರ ರಾತ್ರಿಯಲ್ಲಿ ನಿದ್ದೆ ಮಾಡಲು ಸಾಧ್ಯವಾಗದ ಸಮಯಗಳೊಂದಿಗೆ ನಾನು ಸಮಾಧಾನ ಮಾಡಿಕೊಂಡೆ. ನನ್ನ ಮನಸ್ಸನ್ನು ಹಾಯಾಗಿಡಲು ಏನಾದರೂ ಕೆಲಸ ಮಾಡಲು ಪ್ರಾರಂಭಿಸಿದೆ'' ಎಂದು ತಿಳಿಸಿದ್ದಾರೆ.

"ಇಂತಹದ ಸಂದರ್ಭದಲ್ಲಿ ಟಿವಿ ನೋಡುವುದು, ಚಹಾ ತಯಾರಿಸುವುದು, ಬಟ್ಟೆಗಳನ್ನು ಐರನ್ ಮಾಡುವುದು ಕೂಡ ಪಂದ್ಯದ ತಯಾರಿಗೆ ನನಗೆ ಸಹಾಯ ಮಾಡಿತು. ಪಂದ್ಯಕ್ಕೆ ಹಿಂದಿನ ದಿನ ನಾನು ನನ್ನ ಬ್ಯಾಗ್‌ನ ಪ್ಯಾಕ್ ಮಾಡುತ್ತಿದ್ದೆ. ನನ್ನ ಸಹೋದರ ನನಗೆ ಈ ಅಭ್ಯಾಸವನ್ನು ಕಲಿಸಿದ್ದ.

ನಂತರ ಅದು ನನಗೆ ಅಭ್ಯಾಸವಾಯಿತು. ಭಾರತದ ಪರ ಆಡಿದ ಕೊನೆಯ ಪಂದ್ಯದವರೆಗೂ ನಾನು ಅದೇ ಅಭ್ಯಾಸ ಅನುಸರಿಸಿಕೊಂಡು ಬಂದಿದ್ದೆ '' ಎಂದು ಭಾರತದ 200 ಟೆಸ್ಟ್ ಪಂದ್ಯವನ್ನು ಆಡಿರುವ ತಂಡೂಲ್ಕರ್​ ಹೇಳಿದ್ದಾರೆ.

ಇದೇ ಸಂವಾದದಲ್ಲಿ 2011ರ ವಿಶ್ವಕಪ್​ ಗೆದ್ದಿದ್ದು ತಮ್ಮ ವೃತ್ತಿ ಜೀವನದ ಅತ್ಯುತ್ತಮ ದಿನ, ಅದು ನನ್ನ ಕನಸು, 24 ವರ್ಷ ನಾನು ಅದನ್ನು ಸಾಧಿಸುವುದಕ್ಕಾಗಿ ಕಾಯುತ್ತಿದ್ದೆ ಎಂದು ಕ್ರಿಕೆಟ್​ ದೇವರೆಂದೇ ಖ್ಯಾತರಾದ ತೆಂಡೂಲ್ಕರ್ ಉಲ್ಲೇಖಿಸಿದ್ದಾರೆ.

ಇದನ್ನು ಓದಿ:24 ವರ್ಷಗಳ ವೃತ್ತಿ ಜೀವನದಲ್ಲೇ ನನ್ನ ಅತ್ಯುತ್ತಮ ದಿನ ಅದು : ಸಚಿನ್ ತೆಂಡೂಲ್ಕರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.