ETV Bharat / sports

ಸೋತು ಸುಣ್ಣವಾಗಿರುವ ಸಿಎಸ್​ಕೆಗೆ ಆರ್​ಸಿಬಿ ಸವಾಲು.. ಕಮ್​ಬ್ಯಾಕ್ ಮಾಡ್ತಾರಾ ಹಾಲಿ ಚಾಂಪಿಯನ್ಸ್​

ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿದೆ. ಆರ್​ಸಿಬಿ 15ನೇ ಆವತ್ತಿಯಲ್ಲಿ ಮೊದಲ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಕಂಡ ನಂತರ ಅದ್ಭುತವಾಗಿ ಕಮ್​ಬ್ಯಾಕ್ ಮಾಡಿ ಸತತ 3 ಜಯ ಸಾಧಿಸಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್​ ವಿರುದ್ಧ ಗೆಲುವು ಸಾಧಿಸಿರುವ ಬೆಂಗಳೂರು ತಂಡ ಸೋತು ಸುಣ್ಣವಾಗಿರುವ ಸಿಎಸ್​ಕೆ ವಿರುದ್ಧ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ..

ರಾಯಲ್​ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್

author img

By

Published : Apr 12, 2022, 3:17 PM IST

ಮುಂಬೈ : 15ನೇ ಆವೃತ್ತಿಯಲ್ಲಿ ಸತತ 4 ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಇಂದು ರಾಯಲ್​​ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿದೆ. ಆರ್​ಸಿಬಿ 15ನೇ ಆವತ್ತಿಯಲ್ಲಿ ಮೊದಲ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಕಂಡ ನಂತರ ಅದ್ಭುತವಾಗಿ ಕಮ್​ಬ್ಯಾಕ್ ಮಾಡಿ ಸತತ 3 ಜಯ ಸಾಧಿಸಿದೆ.

ಅದರಲ್ಲೂ ಕಳೆದ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್​ ವಿರುದ್ಧ ಗೆಲುವು ಸಾಧಿಸಿರುವ ಬೆಂಗಳೂರು ತಂಡ ಸೋತು ಸುಣ್ಣವಾಗಿರುವ ಸಿಎಸ್‌ಕೆ ವಿರುದ್ಧ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಇನ್ನು ಈ ಪಂದ್ಯಕ್ಕೆ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್​ವುಡ್​ ಕೂಡ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಇದರಿಂದ ಬೌಲಿಂಗ್ ಬಲ ದ್ವಿಗುಣವಾಗಲಿದೆ. ಆದರೆ, ಹರ್ಷಲ್ ಪಟೇಲ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರಾ ಎನ್ನುವುದು ಇನ್ನು ಖಚಿತವಾಗಿಲ್ಲ. ಒಂದು ವೇಳೆ ಪಟೇಲ್ ಕಣಕ್ಕಿಳಿಯದಿದ್ದರೆ, ವೇಗಿ ಸಿದ್ಧಾರ್ಥ್​ ಕೌಲ್​ ಕಣಕ್ಕಿಳಿಯುವ ಸಾಧ್ಯತೆಯಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಎಲ್ಲಾ ವಿಭಾಗದಲ್ಲೂ ವೈಫಲ್ಯ ಅನುಭವಿಸುತ್ತಿದೆ.

ಲಖನೌ ಸೂಪರ್ ಜೈಂಟ್ಸ್ ವಿರುದ್ಧ 200ರ ಗಡಿ ದಾಟಿದ್ದನ್ನು ಹೊರೆತುಪಡಿಸಿದರೆ, ಉಳಿದ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರಿಲ್ಲ. ಕಳೆದ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಪಡೆದಿದ್ದ ಋತುರಾಜ್ ಗಾಯಕ್ವಾಡ್ ಈ ಬಾರಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ಬೌಲಿಂಗ್ ವಿಭಾಗ ಮೊನಚು ಕಳೆದುಕೊಂಡಿದೆ.

ಆರ್​ಸಿಬಿ ವಿರುದ್ಧ ಕಳೆದ 8 ಮುಖಾಮುಖಿಯಲ್ಲಿ 6ರಲ್ಲಿ ಜಯಿಸಿರುವ ದಾಖಲೆಯನ್ನು ಹೊಂದಿರುವ ಸಿಎಸ್​ಕೆಗೆ ಕಮ್​ಬ್ಯಾಕ್ ಮಾಡುವುದಕ್ಕೆ ಈ ಪಂದ್ಯ ಅತ್ಯುತ್ತಮ ಅವಕಾಶವಾಗಿದೆ. ಇನ್ನು ತಂಡದಲ್ಲಿ ಬದಲಾವಣೆ ಬಯಸಿದರೆ ಜೋರ್ಡನ್​ ಬದಲಿಗೆ ಕಿವೀಸ್ ಸ್ಟಾರ್ ಬ್ಯಾಟರ್ ದಿವೋನ್ ಕಾನ್ವೆ ಅವರಿಗೆ ಮತ್ತೊಂದು ಅವಕಾಶ ನೀಡಬೇಕಿದೆ. ಮಹೀಶಾ ತೀಕ್ಷಣ ಬದಲಿಗೆ ಸ್ಯಾಂಟ್ನರ್ ಅಥವಾ ಪ್ರಿಟೋರಿಯಸ್​ ​ ಇಂದು ಕಣಕ್ಕಿಳಿದರೂ ಅಚ್ಚರಿಯಿಲ್ಲ.

ಮುಖಾಮುಖಿ : ಎರಡೂ ತಂಡಗಳು 28 ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ. 18-10ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುನ್ನಡೆ ಸಾಧಿಸಿದೆ. ಕಳೆದ ವರ್ಷ ಎರಡೂ ಪಂದ್ಯಗಳಲ್ಲಿ ಸಿಎಸ್​ಕೆ ಗೆಲುವು ಸಾಧಿಸಿತ್ತು.

ಆರ್​ಸಿಬಿ ಸಂಭಾವ್ಯ XI : ಫಾಫ್ ಡು ಪ್ಲೆಸಿಸ್, ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ಡೇವಿಡ್ ವಿಲ್ಲಿ/ಜೋಶ್ ಹೇಜಲ್​ವುಡ್​, ವನಿಂಡು ಹಸರಂಗ, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್

ಸಿಎಸ್​ಕೆ ಸಂಭಾವ್ಯ XI : ರುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೆ, ಎಂಎಸ್ ಧೋನಿ, ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್/ಡಿವೋನ್ ಕಾನ್ವೆ, ಮುಖೇಶ್ ಚೌಧರಿ, ಮಹೇಶ್ ತೀಕ್ಷಣ / ಡ್ವೈನ್ ಪ್ರಿಟೋರಿಯಸ್ / ಆಡಮ್ ಮಿಲ್ನೆ

ಇದನ್ನೂ ಓದಿ:ಐಪಿಎಲ್​ 2022: ಕೇನ್​ ವಿಲಿಯಮ್ಸನ್​, ಅಭಿಷೇಕ್​ ಶರ್ಮಾ ಭರ್ಜರಿ ಆಟಕ್ಕೆ ತಲೆ ಬಾಗಿದ ಗುಜರಾತ್​ ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.