ETV Bharat / sports

ಮಹಾರಾಜ ಟ್ರೋಫಿ.. ಚೇತನ್‌ ಆಕರ್ಷಕ ಶತಕ, ಬೆಂಗಳೂರು ಬ್ಲಾಸ್ಟರ್ಸ್ ಭರ್ಜರಿ ಜಯ - ಈಟಿವಿ ಭಾರತ ಕನ್ನಡ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿಯ ಎರಡನೇ ಪಂದ್ಯಾಟದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ 25 ರನ್ ಗಳ ಜಯಗಳಿಸಿದೆ.

banglore-blasters-beat-shivamogga-strikers-by-25-runs
ಮಹಾರಾಜ ಟ್ರೋಫಿ : ಚೇತನ್‌ ಆಕರ್ಷಕ ಶತಕ, ಬೆಂಗಳೂರು ಬ್ಲಾಸ್ಟರ್ಸ್ ಭರ್ಜರಿ ಜಯ
author img

By

Published : Aug 18, 2022, 6:51 AM IST

ಬೆಂಗಳೂರು: ಆರಂಭಿಕ ಆಟಗಾರ ಎಲ್‌.ಆರ್‌. ಚೇತನ್‌ (105*) ಅವರ ಆಕರ್ಷಕ ಶತಕ ಮತ್ತು ಟಿ. ಪ್ರದೀಪ್‌ ಅವರ ಮಾರಕ ಬೌಲಿಂಗ್‌ (28ಕ್ಕೆ 4) ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಶಿವಮೊಗ್ಗ ಸ್ಟ್ರೈಕರ್ಸ್‌ ವಿರುದ್ಧ 25 ರನ್‌ ಜಯಗಳಿಸಿದೆ.

192 ರನ್‌ಗಳ ಬೃಹತ್‌ ಮೊತ್ತವನ್ನು ಬೆನ್ನಟ್ಟಿದ ಶಿವಮೊಗ್ಗ ಸ್ಟ್ರೈಕರ್ಸ್‌ ತಂಡ ಬೆಂಗಳೂರಿನ ಬೌಲಿಂಗ್‌ ದಾಳಿಗೆ ಬಹು ಬೇಗನೆ ವಿಕೆಟ್‌ ಕಳೆದುಕೊಂಡಿತು. ಅಂತಿಮವಾಗಿ 8 ವಿಕೆಟ್‌ ನಷ್ಟಕ್ಕೆ 166 ರನ್‌ ಗಳಿಸಿ ಸೋಲು ಕಂಡಿತು. ರೋಹನ್‌ ಕದಮ್‌ (67) ಮತ್ತು ಕೆ. ಸಿದ್ಧಾರ್ಥ್‌ (25) ಹೊರತುಪಡಿಸಿದರೆ ಶಿವಮೊಗ್ಗದ ಇತರ ಆಟಗಾರರು ರನ್‌ ಗಳಿಸುವಲ್ಲಿ ವಿಫಲರಾದರು. ಈ ಸೋಲಿನೊಂದಿಗೆ ಶಿವಮೊಗ್ಗ ಸ್ಟ್ರೈಕರ್ಸ್‌ ಕೊನೆಯ ಸ್ಥಾನದಲ್ಲೇ ಉಳಿಯುವಂತಾಗಿದೆ.

ಚೇತನ್‌ ಆಕರ್ಷಕ ಶತಕ : ಆರಂಭಿಕ ಆಟಗಾರ ಎಲ್‌.ಆರ್‌. ಚೇತನ್‌ ಸಿಡಿಸಿದ ಅಜೇಯ ಶತಕ (105*) ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಶಿವಮೊಗ್ಗ ಸ್ಟ್ರೈಕರ್ಸ್‌ ವಿರುದ್ಧ 6 ವಿಕೆಟ್‌ ನಷ್ಟಕ್ಕೆ 191 ರನ್‌ ಗಳಿಸಿದೆ. ಇದು ಮಹಾರಾಜ ಟ್ರೋಫಿಯಲ್ಲಿ ದಾಖಲಾದ ಮೂರನೇ ಶತಕವಾಗಿದೆ. ಗುಲ್ಬರ್ಗ ಮೈಸ್ಟಿಕ್ಸ್‌ನ ರೋಹನ್‌ ಪಾಟೀಲ್‌ ಹಾಗೂ ಬೆಂಗಳೂರು ಬ್ಲಾಸ್ಟರ್ಸ್‌ನ ನಾಯಕ ಮಯಾಂಕ್‌ ಅಗರ್ವಾಲ್‌ ಈ ಹಿಂದೆ ಶತಕ ಸಿಡಿಸಿದ್ದರು.

ಶಿವಮೊಗ್ಗ ಸ್ಟ್ರೈಕರ್ಸ್‌ ನಾಯಕ ಕೆ. ಗೌತಮ್‌ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡು, ಆರಂಭಿಕ ಯಶಸ್ಸನ್ನೂ ಕಂಡರು. ಬೆಂಗಳೂರು ಬ್ಲಾಸ್ಟರ್ಸ್‌ನ ನಾಯಕ ಮಯಾಂಕ್‌ ಅಗರ್ವಾಲ್‌ ಕೇವಲ 1 ರನ್‌ ಗಳಿಸಿ ಪೆವಿಲಿಯನ್‌ ಸೇರಿದಾಗ ಶಿವಮೊಗ್ಗ ಎದುರಾಳಿಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುತ್ತದೆ ಎಂಬ ನಿರೀಕ್ಷೆ ಇದ್ದಿತ್ತು.

ಇದಕ್ಕೆ ಪೂರಕವೆಂಬಂತೆ ಕೆವಿ ಅನೀಶ್‌ (8), ಶಿವಕುಮಾರ್‌ ರಕ್ಷಿತ್‌ (6) ಅವರು ವಿಕೆಟ್‌ ಕಳೆದುಕೊಂಡರು. ಆದರೆ, ಚೇತನ್‌ ಹಾಗೂ ಅನಿರುಧ್‌ ಜೋಶಿ 83ರನ್‌ ಜೊತೆಯಾಟವಾಡುವುದರೊಂದಿಗೆ ತಂಡ ಚೇತರಿಕೆ ನೀಡಿದರು. ಕೇವಲ 28 ಎಸೆತಗಳನ್ನು ಎದುರಿಸಿದ ಜೋಶಿ 4 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ 54 ರನ್‌ ಸಿಡಿಸಿ ತಂಡಕ್ಕೆ ನೆರವಾದರು.

ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಚೇತನ್‌ ಅವರ ಚೈತನ್ಯ ಕುಂದಲಿಲ್ಲ. ಇನ್ನಿಂಗ್ಸ್‌ನ ಕೊನೆಯವರೆಗೂ ಉಳಿದ ಚೇತನ್‌, 55 ಎಸೆತಗಳನ್ನೆದುರಿಸಿ 8 ಬೌಂಡರಿ ಹಾಗೂ 6 ಸಿಕ್ಸರ್‌ ನೆರವಿನಿಂದ ಅಜೇಯ 105 ರನ್‌ ಗಳಿಸಿ ತಂಡದ ಬೃಹತ್‌ ಮೊತ್ತಕ್ಕೆ ನೆರವಾದರು. ಮಹಾರಾಜ ಟ್ರೋಫಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ಪರ ದಾಖಲಾದ ಎರಡನೇ ಶತಕ ಇದಾಗಿದೆ. ಒಂದು ಹಂತದಲ್ಲಿ ಅಲ್ಪ ಮೊತ್ತದ ಲಕ್ಷಣ ತೋರಿದ್ದ ಬೆಂಗಳೂರು ಬ್ಲಾಸ್ಟರ್ಸ್‌ 6 ವಿಕೆಟ್‌ ನಷ್ಟಕ್ಕೆ 191 ರನ್‌ ಗಳಿಸಿತು.

ಸಂಕ್ಷಿಪ್ತ ಸ್ಕೋರ್‌: ಬೆಂಗಳೂರು ಬ್ಲಾಸ್ಟರ್ಸ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 191 (ಎಲ್‌.ಆರ್‌. ಚೇತನ್‌ 105*, ಅನಿರುಧ್‌ ಜೋಶಿ 54, ಉತ್ತಮ್‌ ಅಯ್ಯಪ್ಪ 29ಕ್ಕೆ 2, ಕೆ. ಗೌತಮ್‌ 27ಕ್ಕೆ 2)

ಶಿವಮೊಗ್ಗ ಸ್ಟ್ರೈಕರ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 166, ರೋಹನ್‌ ಕದಮ್‌ 67, ಸಿದ್ಧಾರ್ಥ್‌ 25, ಟಿ. ಪ್ರದೀಪ್‌ 28ಕ್ಕೆ 4, ಸುಚಿತ್‌ 27ಕ್ಕೆ 2)

ಇದನ್ನೂ ಓದಿ : ವೇಟ್‌ಲಿಫ್ಟಿಂಗ್ ಕೌಶಲ್ಯ ಪ್ರದರ್ಶಿಸಿದ ವಿರಾಟ್: ಏಷ್ಯಾಕಪ್​ಗೆ ಭರ್ಜರಿ ತಯಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.