ಢಾಕಾ: ಡಾಕಾ ಪ್ರೀಮಿಯರ್ ಲೀಗ್ ವೇಳೆ ಅಂಪೈರ್ ವಿರುದ್ಧ ಅಸಮಾಧಾನಗೊಂಡ ಬಾಂಗ್ಲಾದೇಶ ತಂಡದ ಆಲ್ರೌಂಡರ್ ಹಾಗೂ ಮೊಹಮದನ್ ಸ್ಫೋರ್ಟಿಂಗ್ ಕ್ಲಬ್ ತಂಡ ನಾಯಕ ಶಕಿಬ್ ಅಲ್ ಹಸನ್ ಸ್ಟಂಪ್ಗಳಿಗೆ ಒದ್ದು ಆಕ್ರೋಶ ಹೊರ ಹಾಕಿದ್ದರು. ಆದರೆ, ಅವರ ಈ ವರ್ತನೆಗೆ ವಿಶ್ವಾದ್ಯಂತ ಟೀಕೆಗಳ ಸುರಿಮಳೆ ಕೇಳಿ ಬಂದ ಹಿನ್ನೆಲೆ ತಾವೊಬ್ಬ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿದ್ದು ಈ ರೀತಿ ವರ್ತಿಸಬಾರದಾಗಿತ್ತೆಂದು ಕ್ಷಮೆ ಕೋರಿದ್ದಾರೆ.
ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಮುಶ್ಫೀಕರ್ ರಹೀಮ್ ವಿರುದ್ಧ ಎಲ್ಬಿಡಬ್ಲ್ಯೂಗೆ ಶಕಿಬ್ ಮನವಿ ಮಾಡಿದ್ದರು. ಇದನ್ನು ಅಂಪೈರ್ ತಿರಸ್ಕಸಿದ್ದರಿಂದ ಕುಪಿತಗೊಂಡು ಸ್ಟಂಪ್ಗಳನ್ನು ಒದ್ದರು. ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಮತ್ತೊಮ್ಮೆ ಅಂಪೈರ್ಗಳ ಜೊತೆ ವಾಗ್ವಾದ ನಡೆಸಿದರು. ಆ ಸಂದರ್ಭದಲ್ಲಿ ಅಬಹಾನಿ ಲಿಮಿಟೆಡ್ ತಂಡ 21ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು. ರಹೀಮ್ 11 ರನ್ಗಳಿಸಿದ್ದರು.
-
Shakib Al Hassan too high on Machli Souppic.twitter.com/l4mf9zwG64
— Qalandari Fakhruu :^) 🏏 (@BajwaKehtaHaii) June 11, 2021 " class="align-text-top noRightClick twitterSection" data="
">Shakib Al Hassan too high on Machli Souppic.twitter.com/l4mf9zwG64
— Qalandari Fakhruu :^) 🏏 (@BajwaKehtaHaii) June 11, 2021Shakib Al Hassan too high on Machli Souppic.twitter.com/l4mf9zwG64
— Qalandari Fakhruu :^) 🏏 (@BajwaKehtaHaii) June 11, 2021
ಮೈದಾನದಲ್ಲಿ ಈ ರೀತಿ ವರ್ತನೆಯನ್ನು ಕ್ರಿಕೆಟ್ ಅಭಿಮಾನಿಗಳು ಟೀಕಿಸಿದ ಬೆನ್ನಲ್ಲೇ ಶಕಿಬ್ ಕ್ಷಮೆಯಾಚಿಸಿದ್ದಾರೆ.
" ಪ್ರೀತಿಯ ಅಭಿಮಾನಿಗಳೇ ಮತ್ತು ಹಿಂಬಾಲಕರೆ, ವಿಶೇಷವಾಗಿ ಪಂದ್ಯವನ್ನು ಮನೆಯಲ್ಲಿ ಕುಳಿತು ಟಿವಿಯಲ್ಲಿ ನೋಡುತ್ತಿರುವವರಿಗೆ ನಾನು ಮೈದಾನದಲ್ಲಿ ತೋರಿದ ವರ್ತನೆಗೆ ಕ್ಷಮೆ ಕೋರುತ್ತಿದ್ದೇನೆ. ನನ್ನಂತಹ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅನುಭವವುಳ್ಳಂತಹ ಕ್ರಿಕೆಟಿಗ ಈ ರೀತಿ ವರ್ತಿಸಬಾರದಿತ್ತು, ದುರಾದೃಷ್ಟವಶಾತ್ ನಡೆದು ಹೋಗಿದೆ" ಎಂದು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಎರಡು ತಂಡಗಳಿಗೂ, ಮ್ಯಾನೇಜ್ಮೆಂಟ್ , ಪಂದ್ಯದ ಅಧಿಕಾರಿಗಳು ಮತ್ತು ಟೂರ್ನಿ ಆಯೋಜಕರಿಗೂ ಈ ತಪ್ಪಿಗೆ ಕ್ಷಮೆ ಕೋರುತ್ತೇನೆ. ಆಶಾದಾಯಕವಾಗಿ , ಇನ್ನು ಮುಂದೆ ಎಂದೂ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರವಹಿಸುತ್ತೇನೆ. ಧನ್ಯವಾದಗಳು ಎಂದು ಬರೆದು ಕೊಂಡಿದ್ದಾರೆ.
ಇದನ್ನು ಓದಿ: WTC ಫೈನಲ್.. ಬೌಲ್ಟ್ vs ರೋಹಿತ್ ನಡುವಿನ ರೋಚಕ ಕಾಳಗ ನೋಡಲು ಕಾತುರದಿಂದ್ದೇನೆ: ಸೆಹ್ವಾಗ್