ಢಾಕಾ(ಬಾಂಗ್ಲಾದೇಶ): ಬಲಿಷ್ಠ ತಂಡಗಳ ಮೇಲೆ ಸವಾರಿ ನಡೆಸುತ್ತಿರುವ ಬಾಂಗ್ಲಾದೇಶ ಇಂದು ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲೂ 4ರನ್ಗಳ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಪಡೆದುಕೊಂಡಿದೆ.
ಶೇರ್ ಬಾಂಗ್ಲಾ ರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆತಿಥೇಯ ತಂಡ ನಿಗದಿತ 20 ಓವರ್ಗಳಲ್ಲಿ 6ವಿಕೆಟ್ನಷ್ಟಕ್ಕೆ 141ರನ್ಗಳಿಕೆ ಮಾಡಿತು. ತಂಡದ ಪರ ಆರಂಭಿಕರಾದ ನೈಮ್(39) ಹಾಗೂ ಲಿಟನ್ ದಾಸ್(33)ರನ್ಗಳಿಕೆ ಮಾಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಕ್ಯಾಪ್ಟನ್ ಮೊಹಮ್ಮದುಲೈ ಅಜೇಯ 37ರನ್ಗಳಿಕೆ ಮಾಡಿದರು.
-
What a thriller 🔥
— ICC (@ICC) September 3, 2021 " class="align-text-top noRightClick twitterSection" data="
Bangladesh hold their nerve to restrict New Zealand to 137/5 and secure a close four-run win in the second T20I.
They go 2-0 up in the series.#BANvNZ | https://t.co/gGI44aESQP pic.twitter.com/UytHisyjc5
">What a thriller 🔥
— ICC (@ICC) September 3, 2021
Bangladesh hold their nerve to restrict New Zealand to 137/5 and secure a close four-run win in the second T20I.
They go 2-0 up in the series.#BANvNZ | https://t.co/gGI44aESQP pic.twitter.com/UytHisyjc5What a thriller 🔥
— ICC (@ICC) September 3, 2021
Bangladesh hold their nerve to restrict New Zealand to 137/5 and secure a close four-run win in the second T20I.
They go 2-0 up in the series.#BANvNZ | https://t.co/gGI44aESQP pic.twitter.com/UytHisyjc5
ಉಳಿದಂತೆ ಶಕೀಬ್(12), ಹುಸೈನ್(3) ಹಾಗೂ ಹಸನ್(13)ರನ್ಗಳಿಕೆ ಮಾಡಿ ತಂಡದ ಮೊತ್ತ 141 ಆಗಲು ಕಾರಣವಾದರು. ನ್ಯೂಜಿಲ್ಯಾಂಡ್ ಪರ ರವೀಂದ್ರ 3 ವಿಕೆಟ್ ಪಡೆದುಕೊಂಡರೆ, ಅಜಾಜ್ ಪಟೇಲ್, ಬೆನಿಟ್ ತಲಾ 1 ವಿಕೆಟ್ ಪಡೆದುಕೊಂಡರು.
142ರನ್ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲ್ಯಾಂಡ್ ತಂಡ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಆರಂಭಿಕರಾಗಿ ಕಣಕ್ಕಿಳಿದ ಥಾಮ್ ಬ್ಲಡೆಲ್(6), ರವೀಂದ್ರ(10)ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಒದಾದ ಥಾಮ್ ಲಾಥನ್ ಹಾಗೂ ಯುಂಗ್ ತಂಡಕ್ಕೆ ಚೇತರಿಕೆ ನೀಡುವಲ್ಲಿ ಯಶಸ್ವಿಯಾದರೂ, ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ವಿಫಲವಾದರು. ಕ್ಯಾಪ್ಟನ್ ಲಾಥಮ್ 65ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರೆ, ಯಂಗ್ 22ರನ್ಗಳಿಕೆ ಮಾಡಿ ಔಟಾದರು. ಇದಾದ ಬಳಿಕ ಗ್ರ್ಯಾಂಡ್ ಹೋಮ್(8), ನಿಕೋಲಸ್(6) ಹಾಗೂ ಕೂಲೆ ಅಜೇಯ(15)ರನ್ಗಳಿಕೆ ಮಾಡಿದರು. ತಂಡ ಕೊನೆಯದಾಗಿ 20 ಓವ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 137ರನ್ಗಳಿಕೆ ಮಾಡಿ, 4ರನ್ಗಳ ಅಂತರದ ಸೋಲು ಕಂಡಿತು.
ಇದನ್ನೂ ಓದಿರಿ: Eng vs Ind Test: 90 ರನ್ ಮುನ್ನಡೆ ಪಡೆದು ಇಂಗ್ಲೆಂಡ್ ಆಲೌಟ್; ರೋಹಿತ್-ರಾಹುಲ್ ತಾಳ್ಮೆಯ ಆಟ
ಮೊದಲ ಟಿ-20 ಪಂದ್ಯದಲ್ಲಿ ಕೇವಲ 60ರನ್ಗಳಿಗೆ ನ್ಯೂಜಿಲ್ಯಾಂಡ್ ಕಟ್ಟಿ ಹಾಕಿ ಗೆಲುವು ದಾಖಲು ಮಾಡಿದ್ದ ಬಾಂಗ್ಲಾದೇಶ, ಎರಡನೇ ಟಿ-20 ಪಂದ್ಯದಲ್ಲೂ ಗೆಲುವು ದಾಖಲು ಮಾಡುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಐದು ಪಂದ್ಯಗಳ ಪೈಕಿ ಬಾಂಗ್ಲಾದೇಶ ಇನ್ನೊಂದು ಪಂದ್ಯ ಗೆದ್ದರೆ ಚುಟುಕು ಸರಣಿ ಕೈವಶ ಮಾಡಿಕೊಳ್ಳಲಿದೆ. ತವರಿನಲ್ಲೇ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ-20 ಕ್ರಿಕೆಟ್ ಸರಣಿಯಲ್ಲಿ ಬಾಂಗ್ಲಾದೇಶ ಈಗಾಗಲೇ ಗೆಲುವು ಸಾಧಿಸಿದ್ದು, ಉತ್ತಮ ಫಾರ್ಮ್ನಲ್ಲಿದೆ. ವಿಶೇಷವೆಂದರೆ ತವರಿನಲ್ಲಿ ನಡೆದಿರುವ 11 ಟಿ20 ಪಂದ್ಯಗಳಲ್ಲಿ ಬಾಂಗ್ಲಾದೇಶ 10ರಲ್ಲಿ ಗೆಲುವು ಸಾಧಿಸಿ, ಕೇವಲ ಒಂದು ಪಂದ್ಯ ಸೋತಿದೆ.