ಚಿತ್ತಗಾಂಗ್: ಭಾರತದ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಬಾಂಗ್ಲಾದೇಶ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಈ ಪಂದ್ಯವನ್ನೂ ವಶಪಡಿಸಿಕೊಂಡು ಸರಣಿ ಕ್ಲೀನ್ಸ್ವೀಪ್ ಮಾಡಲು ಬಾಂಗ್ಲಾ ತಂತ್ರ ಹೆಣೆದಿದ್ದರೆ, ಅಂತಿಮ ಪಂದ್ಯ ಗೆದ್ದು ಮಾನ ಉಳಿಸಿಕೊಳ್ಳಲು ಭಾರತ ಹೋರಾಡಲಿದೆ.
ಚಿತ್ತಗಾಂಗ್‌ನ ಮೈದಾನದಲ್ಲಿ ನಡೆಯಲಿರುವ ಪಂದ್ಯ ಬಾಂಗ್ಲಾಗೆ ಔಪಚಾರಿಕವಾಗಿದೆ. ಸರಣಿ ಸೋಲು ಅನುಭವಿಸಿರುವ ಭಾರತದ ಆಟಗಾರರು ಕೊನೆಯ ಪಂದ್ಯದಲ್ಲಾದರೂ ಸಿಡಿದು ಸಾಮರ್ಥ್ಯ ಸಾಬೀತು ಮಾಡಿಕೊಳ್ಳಬೇಕಿದೆ.
-
🚨 Team News 🚨
— BCCI (@BCCI) December 10, 2022 " class="align-text-top noRightClick twitterSection" data="
2⃣ changes for #TeamIndia as @ishankishan51 & @imkuldeep18 are named in the team. #BANvIND
Follow the match 👉 https://t.co/HGnEqugMuM
A look at our Playing XI 🔽 pic.twitter.com/pZY5cfh8HR
">🚨 Team News 🚨
— BCCI (@BCCI) December 10, 2022
2⃣ changes for #TeamIndia as @ishankishan51 & @imkuldeep18 are named in the team. #BANvIND
Follow the match 👉 https://t.co/HGnEqugMuM
A look at our Playing XI 🔽 pic.twitter.com/pZY5cfh8HR🚨 Team News 🚨
— BCCI (@BCCI) December 10, 2022
2⃣ changes for #TeamIndia as @ishankishan51 & @imkuldeep18 are named in the team. #BANvIND
Follow the match 👉 https://t.co/HGnEqugMuM
A look at our Playing XI 🔽 pic.twitter.com/pZY5cfh8HR
ಕೆಎಲ್ ರಾಹುಲ್ಗೆ ನಾಯಕತ್ವ: ಎರಡನೇ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿರುವ ರೋಹಿತ್ ಶರ್ಮಾ ಬದಲಾಗಿ ಕೆಎಲ್ ರಾಹುಲ್ಗೆ ನಾಯಕತ್ವ ಹೊಣೆ ನೀಡಲಾಗಿದೆ. ಬ್ಯಾಟಿಂಗ್ನಲ್ಲಿ ಸುಧಾರಣೆ ಮಾಡಿಕೊಳ್ಳಬೇಕಾದ ಒತ್ತಡದಲ್ಲಿರುವ ರಾಹುಲ್ ನಾಯಕತ್ವದ ಜವಾಬ್ದಾರಿಯೂ ನಿಭಾಯಿಸಬೇಕಾಗಿದೆ.
ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಉತ್ತಮ ಲಯದಲ್ಲಿರುವ ಆಟಗಾರರ ಅನುಪಸ್ಥಿತಿಯಿಂದಾಗಿ ತಂಡ ಖದರ್ ಕಳೆದುಕೊಂಡಿದೆ. ಹಿರಿಯ ಆಟಗಾರರಾದ ಶಿಖರ್ ಧವನ್, ವಿರಾಟ್ ಕೊಹ್ಲಿ, ರಾಹುಲ್, ರೋಹಿತ್ ಬ್ಯಾಟಿಂಗ್ನಲ್ಲಿ ಮಿಂಚುತ್ತಿಲ್ಲ. ಅದರಲ್ಲೂ ವಿರಾಟ್ ಕೊಹ್ಲಿ 2 ಪಂದ್ಯಗಳಿಂದ 18 ರನ್ ಮಾತ್ರ ಮಾಡಿದ್ದಾರೆ. ಬ್ಯಾಟಿಂಗ್ ವೈಫಲ್ಯದ ಜೊತೆಗೆ ಬೌಲಿಂಗ್ ಮತ್ತು ಫೀಲ್ಡಿಂಗ್ ಕಳೆಗುಂದಿದ್ದು ಚಿಂತೆಗೀಡು ಮಾಡಿದೆ.
ತಂಡದಲ್ಲಿ ಬದಲಾವಣೆ: ಗಾಯಕ್ಕೀಡಾದ ರೋಹಿತ್, ದೀಪಕ್ ಚಹರ್ ಬದಲಾಗಿ ಇಶಾನ್ ಕಿಶನ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದಾರೆ.
ಬಾಂಗ್ಲಾಗೆ ಮತ್ತೊಂದು ಸರಣಿ ಕ್ಲೀನ್ಸ್ವೀಪ್ ಗುರಿ: 2018 ರಿಂದ ತವರಿನಲ್ಲಿ ಸತತವಾಗಿ ಸರಣಿ ಗೆಲ್ಲುತ್ತಾ ಬಂದಿರುವ ಬಾಂಗ್ಲಾದೇಶ, ಬಲಿಷ್ಠ ಭಾರತದ ವಿರುದ್ಧವೂ ಸರಣಿ ಗೆದ್ದಾಗಿದೆ. ಜೊತೆಗೆ ಈ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್ಸ್ವೀಪ್ ಮಾಡಿಕೊಂಡು ಬೀಗುವ ಇರಾದೆಯಲ್ಲಿದೆ. ಇದಕ್ಕೂ ಮೊದಲು ಜಿಂಬಾಬ್ವೆ, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳನ್ನು ಬಾಂಗ್ಲಾ ಪಡೆದ ಸದೆಬಡಿದಿತ್ತು.
ಪಿಚ್ ರಿಪೋರ್ಟ್: ಚಿತ್ತಗಾಂಗ್‌ನ ಮೈದಾನ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಅನುಕೂಲಕರವಾಗಿದೆ. ಇಲ್ಲಿ ಸಮತಟ್ಟಾದ ಪಿಚ್ ಇದೆ. ಇಂದು ಶುಭ್ರ ಹವಾಮಾನ ಇರಲಿದ್ದು, ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ರನ್ ಮಳೆ ಸುರಿಯಬಹುದು.
ತಂಡಗಳು: ಭಾರತ: ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.
ಬಾಂಗ್ಲಾದೇಶ: ಅನಾಮುಲ್ ಹಕ್, ಲಿಟ್ಟನ್ ದಾಸ್ (ನಾಯಕ), ಯಾಸಿರ್ ಅಲಿ, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಎಬಾಡೋತ್ ಹೊಸೈನ್, ಮುಸ್ತಾಫಿಜರ್ ರೆಹಮಾನ್, ತಸ್ಕಿನ್ ಅಹ್ಮದ್.
ಓದಿ: ಶೂಟೌಟ್ನಲ್ಲಿ ಗೆದ್ದ ಅರ್ಜೆಂಟೀನಾ ಸೆಮೀಸ್ಗೆ.. ನೆದರ್ಲ್ಯಾಂಡ್ಸ್ ಕನಸು ಭಗ್ನ