ETV Bharat / sports

Bangladesh vs India 2nd Test: ಟಾಸ್​ ಗೆದ್ದ ಬಾಂಗ್ಲಾ ಬ್ಯಾಟಿಂಗ್​ ಆಯ್ಕೆ..ಸ್ಪಿನ್ನರ್​ ಕುಲದೀಪ್​ ಯಾದವ್​ ಔಟ್​

author img

By

Published : Dec 22, 2022, 8:54 AM IST

ಬಾಂಗ್ಲಾದೇಶ ವಿರುದ್ಧದ 2ನೇ ಮತ್ತು ಕೊನೆಯ ಟೆಸ್ಟ್​ ಪಂದ್ಯ ಢಾಕಾದ ಶೇರ್​ ಎ ಬಾಂಗ್ಲಾ ಮೈದಾನದಲ್ಲಿ ನಡೆಯಲಿದ್ದು, ಭಾರತ ಟಾಸ್​ ಸೋತು ಫೀಲ್ಡಿಂಗ್​ ಮಾಡಲಿದೆ. ಪಂದ್ಯದಿಂದ ಸ್ಪಿನ್ನರ್​ ಕುಲದೀಪ್​ ಯಾದವ್​​ ಹೊರಬಿದ್ದಿದ್ದಾರೆ.

Bangladesh opt to bat
ಟಾಸ್​ ಗೆದ್ದ ಬಾಂಗ್ಲಾ ಬ್ಯಾಟಿಂಗ್​ ಆಯ್ಕೆ

ಢಾಕಾ(ಬಾಂಗ್ಲಾದೇಶ): ಮೊದಲ ಟೆಸ್ಟ್​ ಪಂದ್ಯವನ್ನು ಸೋತಿರುವ ಬಾಂಗ್ಲಾದೇಶ ಇಂದಿನಿಂದ ಢಾಕಾದ ಶೇರ್​ ಎ ಬಾಂಗ್ಲಾ ಮೈದಾನದಲ್ಲಿ ಆರಂಭವಾಗುವ 2ನೇ ಟೆಸ್ಟ್​ನಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡಿದೆ. ಈ ಪಂದ್ಯವನ್ನೂ ಗೆದ್ದು ಭಾರತ ಟೆಸ್ಟ್ ಚಾಂಪಿಯನ್ ಶಿಪ್​ನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಹೋರಾಡಲಿದೆ.

ತಂಡದಲ್ಲಿ ಬದಲಾವಣೆ: ಗಾಯದ ಸಮಸ್ಯೆಯಿಂದಾಗಿ ನಾಯಕ ರೋಹಿತ್​ ಶರ್ಮಾಗೆ 2ನೇ ಟೆಸ್ಟ್​ನಿಂದ ವಿಶ್ರಾಂತಿ ನೀಡಲಾಗಿದೆ. ಇದರಿಂದ ಕನ್ನಡಿಗ ಕೆಎಲ್​ ರಾಹುಲ್​ ತಂಡದ ಸಾರಥ್ಯ ವಹಿಸಿಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಮಿಂಚು ಹರಿಸಿದ್ದ ಸ್ಪಿನ್ನರ್​​ ಕುಲದೀಪ್​ ಯಾದವ್​ರನ್ನು ಈ ಪಂದ್ಯದಿಂದ ಕೈಬಿಡಲಾಗಿದೆ. ಕುಲದೀಪ್​ ಬದಲಾಗಿ ಜಯದೇವ್​ ಉನದ್ಕಟ್​​ಗೆ ಅವಕಾಶ ನೀಡಲಾಗಿದೆ.

ಏಕದಿನ ಸರಣಿಯಲ್ಲಿ ಪಾರಮ್ಯ ಮೆರೆದಿದ್ದ ಬಾಂಗ್ಲಾದೇಶ ಮೊದಲ ಟೆಸ್ಟ್​ ಸೋಲು ಕಂಗೆಡಿಸಿದ್ದು, 2 ಬದಲಾವಣೆ ಮಾಡಿದೆ. ಯಾಸೀರ್​ ಬದಲಾಗಿ ಮೊಮಿನುಲ್​, ಎಬಾದತ್​ ಬದಲಾಗಿ ವೇಗಿ ಟಸ್ಕಿನ್​ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯವನ್ನು ಗೆದ್ದು ಬಾಂಗ್ಲಾ ಸರಣಿಯನ್ನು 1-1 ರಲ್ಲಿ ಸಮಬಲ ಮಾಡಿಕೊಂಡು ಸರಣಿ ಸೋಲಿನಿಂದ ಪಾರಾಗಲು ಯೋಜಿಸಿದೆ.

12 ವರ್ಷಗಳ ಬಳಿಕ ಕಣಕ್ಕೆ: ಸ್ಪಿನ್ನರ್​​ ಕುಲದೀಪ್​ ಬದಲಾಗಿ ಅವಕಾಶ ಪಡೆದ ವೇಗಿ ಜಯದೇವ್​ ಉನದ್ಕಟ್​​ ಬರೋಬ್ಬರಿ 12 ವರ್ಷಗಳ ಬಳಿಕ ಕಣಕ್ಕಿಳಿಯಲಿದ್ದಾರೆ. ಈ ಅವಧಿಯಲ್ಲಿ ಜಯದೇವ್​ 118 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಫಾರ್ಮ್​ ಕೊರತೆಯಿಂದಾಗಿ ಜಯದೇವ್​ 2010 ರ ಬಳಿಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ.

ತಂಡಗಳು ಇಂತಿವೆ: ಭಾರತ- ಕೆಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕಟ್​, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್.

ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶ್ಯಾಂಟೊ, ಜಾಕಿರ್ ಹಸನ್, ಮೊಮಿನುಲ್ ಹಕ್, ಲಿಟ್ಟನ್ ದಾಸ್, ಮುಶ್ಫೀಕರ್ ರಹೀಮ್, ಶಕೀಬ್ ಅಲ್ ಹಸನ್(ನಾಯಕ), ನೂರುಲ್ ಹಸನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ಟಸ್ಕಿನ್ ಅಹ್ಮದ್.

ಓದಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನದಿಂದ ರಮಿಜ್ ರಾಜಾ ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.