ಚಿತ್ತಗಾಂಗ್: ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ 150 ರನ್ಗೆ ಆಲೌಟ್ ಆಗಿದೆ. ಈ ಮೂಲಕ ಬಾಂಗ್ಲಾ ತಂಡವು 254 ರನ್ಗಳ ಹಿನ್ನಡೆ ಅನುಭವಿಸಿದೆ. ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ 5 ವಿಕೆಟ್ ಕಿತ್ತು ಸಂಭ್ರಮಿಸಿದರು.
ಭಾರತದ ಮೊದಲ ಇನ್ನಿಂಗ್ಸ್ನ 404 ರನ್ಗಳಿಗೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಪರ ಯಾರೊಬ್ಬರೂ ಸಹ ಅರ್ಧಶತಕವನ್ನೂ ಗಳಿಸಲಿಲ್ಲ. ಗುರುವಾರ 8 ವಿಕೆಟ್ಗೆ 133 ರನ್ ಗಳಿಸಿದ್ದ ಬಾಂಗ್ಲಾ ಇಂದು 150 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
-
A five-wicket haul from Kuldeep Yadav has helped India dominate Bangladesh.#BANvIND | #WTC23 | 📝 https://t.co/ym1utFHoek pic.twitter.com/ChAC1HFIjq
— ICC (@ICC) December 16, 2022 " class="align-text-top noRightClick twitterSection" data="
">A five-wicket haul from Kuldeep Yadav has helped India dominate Bangladesh.#BANvIND | #WTC23 | 📝 https://t.co/ym1utFHoek pic.twitter.com/ChAC1HFIjq
— ICC (@ICC) December 16, 2022A five-wicket haul from Kuldeep Yadav has helped India dominate Bangladesh.#BANvIND | #WTC23 | 📝 https://t.co/ym1utFHoek pic.twitter.com/ChAC1HFIjq
— ICC (@ICC) December 16, 2022
ಮೂರನೇ ದಿನದಾಟ ಆರಂಭಿಸಿದ ಎಬಾಡೋಟ್ ಹೊಸೈನ್ 15 ರನ್ಗೆ ಕುಲದೀಪ್ ಯಾದವ್ ಬೌಲಿಂಗ್ನಲ್ಲಿ ಪಂತ್ಗೆ ಕ್ಯಾಚ್ ನೀಡಿ ಔಟಾದರು. ಬಳಿಕ 25 ರನ್ ಬಾರಿಸಿದ್ದ ಮೆಹಿದಿ ಹಸನ್ ಮಿರಾಜ್ ಅಕ್ಷರ್ ಪಟೇಲ್ ಎಸೆತವನ್ನು ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ಸ್ಟಂಪ್ ಔಟ್ ಆಗುವ ಮೂಲಕ ಬಾಂಗ್ಲಾ ಇನ್ನಿಂಗ್ಸ್ಗೆ ತೆರೆಬಿದ್ದಿತು.
ಇದಕ್ಕೂ ಮುನ್ನ ಭಾರತವು ಮೊದಲ ಇನ್ನಿಂಗ್ಸ್ನಲ್ಲಿ ಚೇತೇಶ್ವರ ಪೂಜಾರ(90), ಶ್ರೇಯಸ್ ಅಯ್ಯರ್(86) ಹಾಗೂ ಆರ್. ಅಶ್ವಿನ್(58) ಅವರ ಅರ್ಧಶತಕದ ಬಲದಿಂದ 404 ಪೇರಿಸಿತ್ತು.
ಇದನ್ನೂ ಓದಿ: ಪಿಎಸ್ಎಲ್ಗೆ ಇಡೀ ಜಗತ್ತು ಬೆರಗು, ಐಪಿಎಲ್ಗಿಂತ ಕಠಿಣ ಟೂರ್ನಿ: ಮೊಹಮ್ಮದ್ ರಿಜ್ವಾನ್