ಢಾಕಾ (ಬಾಂಗ್ಲಾದೇಶ): ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ರೋಚಕ ಗೆಲುವು ಸಾಧಿಸಿದೆ. ಟೀಂ ಇಂಡಿಯಾದ ಸಾಧಾರಣ ಟಾರ್ಗೆಟ್ಅನ್ನು 46 ಓವರ್ಗಳಲ್ಲಿ ಪೂರೈಸಿ ಬಾಂಗ್ಲಾ ಒಂದು ವಿಕೆಟ್ನಿಂದ ಜಯ ದಾಖಲಿಸಿದೆ.
ಢಾಕಾದ ಶೇರ್ ಎ ಬಾಂಗ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಭಾರತ ತಂಡ 41.2 ಓವರ್ಗಳಲ್ಲಿ ಕೇವಲ 186 ರನ್ ಗಳಿಸಿ ಸರ್ವಪತನ ಕಂಡಿತ್ತು. 187 ರನ್ಗಳ ಗುರಿ ಬೆನ್ನಟ್ಟಿದ್ದ ಬಾಂಗ್ಲಾ 9 ವಿಕೆಟ್ ಕಳೆದುಕೊಂಡರೂ ಗೆಲುವಿನ ದಡ ಸೇರುವಲ್ಲಿ ಯಶಸ್ವಿಯಾಗಿದೆ.
ಕಳಪೆ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ: ಟೀಂ ಇಂಡಿಯಾ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ಸೇರಿ ಎಲ್ಲ ವಿಭಾಗಗಲ್ಲೂ ಕಳಪೆ ಪ್ರದರ್ಶನ ತೋರಿದರು. ಇತ್ತ, ಬಾಂಗ್ಲಾದೇಶ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು. ಅದರಲ್ಲೂ ಕೊನೆ ವಿಕೆಟ್‌ನಲ್ಲಿ ಒಂದಾದ ಮೆಹಿದಿ ಹಸನ್ ಮಿರಾಜ್ ಹಾಗೂ ಮಸ್ತಾಫಿಜುರ್ ರಹೆಮಾನ್ ಅಚಲ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡಕ್ಕೆ ಗೆಲುವು ತಂದು ಕೊಟ್ಟರು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾ 1-0 ಅಂತರದ ಮುನ್ನಡೆಯನ್ನು ಸಾಧಿತು.
ಒಂದು ವಿಕೆಟ್ ಪಡೆಯಲು ತಿಣುಕಾಟ: ಬ್ಯಾಟಿಂಗ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಆರಂಭದಲ್ಲಿ ಬಿಗಿ ಬೌಲಿಂಗ್ ಮಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸುವ ಮುನ್ಸೂಚನೆಯನ್ನು ನೀಡಿತ್ತು. 187 ರನ್ ಗೆಲುವಿನ ಗುರಿ ಬೆನ್ನಟ್ಟಿದ್ದ ಬಾಂಗ್ಲಾ ಆಟಗಾರರನ್ನು ಕಟ್ಟಿ ಗೆಲುವಿನ ಆಸೆಯನ್ನೂ ಮೂಡಿಸಿತ್ತು. ಆದರೆ, ಕೊನೆಯ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗದೆ ಪಂದ್ಯವನ್ನೇ ಟೀಂ ಇಂಡಿಯಾ ಕೈಚೆಲ್ಲಿತು.
ಬಾಂಗ್ಲಾದ ಆರಂಭವು ಉತ್ತಮವಾಗಿರಲಿಲ್ಲ. ಇನ್ಸಿಂಗ್ ಆರಂಭದ ಮೊದಲ ಎಸೆತದಲ್ಲೇ ನಜ್ಮುಲ್ ಹೊಸೈನ್ ಶೂನ್ಯಕ್ಕೆ ಅವರನ್ನು ದೀಪಕ್ ಚಹಾರ್ ಪೆವಿಲಿಯನ್ಗೆ ಕಳುಹಿಸಿದರು. ನಂತರ ಬಂದ ಅನಾಮುಲ್ ಹಕ್ (14) ಬೇಗ ಓಟಾದರು. ಈ ನಡುವೆ ನಾಯಕ ಲಿಟ್ಟನ್ ದಾಸ್ (41) ಹಾಗೂ ಶಕೀಬ್ ಅಲ್ ಹಸನ್ (29) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಆಸೆಯಾದರು. ಆದರೆ, ಈ ಜೋಡಿಯನ್ನು ವಾಶಿಂಗ್ಟನ್ ಸುಂದರ್ ಬೇರ್ಪಡಿಸಿದರು.
ಇತ್ತ, ಸಾಧಾರಣ ಟಾರ್ಗೆಟ್ ಕಾರಣಕ್ಕೆ ಬಾಂಗ್ಲಾ ಆಟಗಾರರು ಹೆಚ್ಚು ಆತಂಕಕ್ಕೀಡಾಗದೇ ಬ್ಯಾಟ್ ಬೀಸಿದರು. ಇದರಿಂದ ನಂತರ ಬಂದ ಮುಶ್ಫಿಕರ್ ರಹೀಮ್ (18) ಹಾಗೂ ಮಹಮ್ಮದುಲ್ಲಾ (14) ತಾಳ್ಮೆಯ ಆಟ ಪ್ರದರ್ಶಿಸಿದರು. ಆದರೆ, ಟೀಂ ಇಂಡಿಯಾದ ಬೌಲರ್ಗಳನ್ನು ಹೆಚ್ಚು ಕಾಡಿದ್ದು ಮೆಹದಿ ಹಸನ್. ಕೊನೆಯ ವಿಕೆಟ್‌ನಲ್ಲಿ ಮೆಹದಿ ಹಸನ್ ಜೊತೆಗೂಡಿದ ಮುಸ್ತಫಿಜುರ್ ರೆಹಮಾನ್ ನೆಲ ಕಚ್ಚಿ ಆಟವಾದರು. ಈ ಒಂದು ವಿಕೆಟ್ ಪಡೆಯಲು ಭಾರತದ ಬೌಲರ್ಗಳು ತಿಣುಕಾಟ ನಡೆಸಿದರೂ, ಸಫಲವಾಗಲಿಲ್ಲ.
ಕೊನೆಯವರೆಗೂ ಮೆಹದಿ ಹಸನ್ (38) ಹಾಗೂ ಮುಸ್ತಫಿಜುರ್ ರೆಹಮಾನ್ (10) ಅಜೇಯ ಆಟವಾಡುವ ಮೂಲಕ ಬಾಂಗ್ಲಾಕ್ಕೆ ರೋಚಕ ಗೆಲುವು ತಂದುಕೊಟ್ಟರು. ಟೀಂ ಇಂಡಿಯಾ ಪರವಾಗಿ ಮೊಹಮ್ಮದ್ ಸಿರಾಜ್ 3 ವಿಕೆಟ್, ಕುಲದೀಪ್ ಸೇನ್, ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದರೆ, ದೀಪಕ್ ಚಹಾರ್ ಹಾಗೂ ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಪಡೆದರು.
ಬಾಂಗ್ಲಾ ಬೌಲಿಂಗ್ಗೆ ಭಾರತ ಪರದಾಟ: ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ್ದ ಟೀಂ ಇಂಡಿಯಾ ಆರಂಭದಿಂದಲೇ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಬಾಂಗ್ಲಾ ಬೌಲರ್ಗಳ ಅದ್ಭುತ ಬೌಲಿಂಗ್ ಮುಂದೆ ಭಾರತದ ಆಟಗಾರರು ಬ್ಯಾಟ್ ಬೀಸಲು ಪರದಾಡಿದರು.
ನಿಧಾನಗತಿಯ ಪಿಚ್‌ನಲ್ಲಿ ಶಕೀಬ್ ಅಲ್ ಹಸನ್ ಪೇಸ್ ಮತ್ತು ಲೆಂಥ್ ಬೌಲಿಂಗ್ನಿಂದ ಟೀಂ ಇಂಡಿಯಾ ಆಟಗಾರರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ತಾವು ಎಸೆತ 10 ಓವರ್ಗಳಲ್ಲಿ ಕೇವಲ 36 ರನ್ ನೀಡಿ ಐದು ವಿಕೆಟ್ ಕಂಬಳಿಸಿದರು. ಅಲ್ಲದೇ, ಎರಡು ಮೆಡನ್ ಓವರ್‌ಗಳನ್ನು ಶಕೀಬ್ ಅಲ್ ಹಸನ್ ಎಸೆದರು. ಇತ್ತ, ಎಬಾಡೋಟ್ ಹುಸೇನ್ ಸಹ ಶಾರ್ಟ್ ಬಾಲ್‌ಗಳಲ್ಲಿ 8.2 ಓವರ್‌ಗಳನ್ನು ಎಸೆದು 47 ರನ್ಗೆ 4 ವಿಕೆಟ್ ಪಡೆದರು. ಮೆಹಿದಿ ಹಸನ್ ಮಿರಾಜ್ ಒಂದು ವಿಕೆಟ್ ಪಡೆದಿದ್ದರು.
ಫಲಿಸದ ಕೆಎಲ್ ರಾಹುಲ್ ಆಟ: ಟೀಂ ಇಂಡಿಯಾ ಪರವಾಗಿ ಕೆಎಲ್ ರಾಹುಲ್ ಉತ್ತಮ ಬ್ಯಾಟ್ ಮೂಲಕ 70 ಎಸೆತಗಳಲ್ಲಿ 73 ರನ್ ಗಳಿಸಿದ್ದರು. ಆದರೆ, ಉಳಿದ ಬ್ಯಾಟರ್‌ಗಳಿಂದ ಯಾವುದೇ ನಿರೀಕ್ಷಿತ ರನ್ಗಳು ಬರಲಿಲ್ಲ. ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ನಾಯಕ ರೋಹಿತ್ ಶರ್ಮಾ 27 ರನ್ ಸಿಡಿಸಿರು. ಆದರೆ, ಮತ್ತೊಬ್ಬ ಆಟಗಾರ ಶಿಖರ್ ಧವನ್ 17 ಬಾಲ್ ಎದುರಿಸಿ ಕೇವಲ 7 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.
ಭರವಸೆಯ ಆಟಗಾರರ ವಿರಾಟ್ ಕೊಹ್ಲಿ ಸಹ 9 ರನ್ಗಳಿಗೆ ಪೆವಿಲಿಯನ್ಗೆ ಸೇರಿದ್ದರು. ಉಳಿದಂತೆ ಶ್ರೇಯಸ್ ಅಯ್ಯರ್ (24) ಮತ್ತು ವಾಷಿಂಗ್ಟನ್ ಸುಂದರ್ (19) ಮಾತ್ರ ಒಂದಂಕಿ ರನ್ ಬಾರಿಸಿದರು. ನಂತರ ಯಾವ ಆಟಗಾರರು ಕೂಡ ಒಂದಂಕಿ ಗಡಿ ದಾಟಲು ಸಾಧ್ಯವಾಗಲಿಲ್ಲ. ಮೊಹಮ್ಮದ್ ಸಿರಾಜ್ (9), ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಸೆನ್ (ಅಜೇಯ) ತಲಾ 2 ರನ್ ಹಾಗೂ ದೀಪಕ್ ಚಹರ್, ಶಹಬಾಜ್ ಅಹ್ಮದ್ ಶೂನ್ಯಕ್ಕೆ ಔಟಾಗಿದ್ದರು. ಈ ಮೂಲಕ ಸಾಧಾರಣ 186 ರನ್ಗಳನ್ನು ಭಾರತ ಕಲೆ ಹಾಕಿತ್ತು.
ಇದನ್ನೂ ಓದಿ: ಫಿಟ್ನೆಸ್‌ಗಾಗಿ ರೋಹಿತ್ ಶರ್ಮಾ ಹೆಚ್ಚು ಶ್ರಮಿಸಬೇಕು: ಮಣಿಂದರ್ ಸಿಂಗ್