ಡಾಕಾ (ಬಾಂಗ್ಲಾದೇಶ): ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ 546 ರನ್‌ಗಳ ಬೃಹತ್ ಮೊತ್ತದ ಗೆಲುವನ್ನು ದಾಖಲಿಸಿ 21 ನೇ ಶತಮಾನ ಕ್ರಿಕೆಟ್ನ ದೊಡ್ಡ ಗೆಲುವನ್ನು ಬರೆದಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ದೊಡ್ಡ ಅಂತರದ ಗೆಲುವು ಇದಾಗಿದೆ. ಇದಕ್ಕೂ ಮುನ್ನ ಟೆಸ್ಟ್ನಲ್ಲಿ ಎರಡು ಬೃಹತ್ ಗೆಲುವುಗಳು ದಾಖಲಾಗಿದ್ದವು. ಇಂಗ್ಲೆಂಡ್ 1928 ರಲ್ಲಿ ಆಸ್ಟ್ರೇಲಿಯಾವನ್ನು 675 ರನ್‌ಗಳಿಂದ ಸೋಲಿಸಿತ್ತು. ಆಸ್ಟ್ರೇಲಿಯಾ ಆರು ವರ್ಷಗಳ ಅಂದರೆ 1934ರಲ್ಲಿ ಇಂಗ್ಲೆಂಡ್ನ್ನು 562 ರನ್‌ಗಳಿಂದ ಸೋಲಿಸಿತ್ತು. ಬಾಂಗ್ಲಾದೇಶ ಮೂರನೇ ಬೃಹತ್ ಗೆಲುವು ದಾಖಲಿಸಿದೆ.
90 ವರ್ಷಗಳ ನಂತರ ಟೆಸ್ಟ್ನಲ್ಲಿ 500ಕ್ಕೂ ಹೆಚ್ಚು ರನ್ ಅಂತರದ ಗೆಲುವು: 1934 ರಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಆರು ವರ್ಷಗಳ ಹಿಂದಿನ ಸೇಡಿನ ಗೆಲುವನ್ನು ದಾಖಲಿಸಿತ್ತು. ಇದಾದ ನಂತರ ಟೆಸ್ಟ್ನಲ್ಲಿ ಇಷ್ಟು ಬೃಹತ್ ಮೊತ್ತದ ಗೆಲುವು ದಾಖಲಾಗಿರಲಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಬಾಂಗ್ಲಾದೇಶ ಆಡಿದ ಏಕೈಕ ಟೆಸ್ಟ್ನಲ್ಲಿ ಈ ದಾಖಲೆ ನಿರ್ಮಾಣವಾಗಿದೆ.
-
As comprehensive as it gets 💪
— ICC (@ICC) June 17, 2023 " class="align-text-top noRightClick twitterSection" data="
Bangladesh were dominant in their one-off Test against Afghanistan! #BANvAFG | Details 👇 https://t.co/JYWnuAUbvS
">As comprehensive as it gets 💪
— ICC (@ICC) June 17, 2023
Bangladesh were dominant in their one-off Test against Afghanistan! #BANvAFG | Details 👇 https://t.co/JYWnuAUbvSAs comprehensive as it gets 💪
— ICC (@ICC) June 17, 2023
Bangladesh were dominant in their one-off Test against Afghanistan! #BANvAFG | Details 👇 https://t.co/JYWnuAUbvS
ಜೂನ್ 14 ರಿಂದ ಜುಲೈ 16ರ ವರೆಗೆ ಒಂದು ಟೆಸ್ಟ್, ಮೂರು ಏಕದಿನ ಮತ್ತು ಎರಡು ಟಿ20 ಪಂದ್ಯಕ್ಕಾಗಿ ಅಫ್ಘಾನಿಸ್ತಾನ ಬಾಂಗ್ಲಾದೇಶದ ಪ್ರವಾಸದಲ್ಲಿದೆ. ಏಕೈಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಬೌಲಿಂಗ್ ಮಾಡುವ ನಿರ್ಣಯ ತೆಗೆದುಕೊಂಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಬಾಂಗ್ಲಾದ ನಜ್ಮುಲ್ ಹೊಸೈನ್ ಶಾಂಟೊ (146) ಶತಕ ಮತ್ತು ಮಹಮ್ಮದುಲ್ ಹಸನ್ ಜಾಯ್ (76) ಅವರ ಅರ್ಧಶತಕದ ನೆರವಿನಿಂದ 382 ರನ್ ಬೃಹತ್ ಇನ್ನಿಂಗ್ಸ್ ಆಡಿತ್ತು.ಇದೇ ಅಫ್ಘಾನಿಸ್ತಾನಕ್ಕೆ ಹೊರೆಯಾಗಿತ್ತು ಎಂದು ಹೇಳಬುದು. 7 ಜನ ಬೌಲರ್ಗಳ ಪ್ರಯತ್ನ ಪಟ್ಟರೂ ಅಫ್ಘಾನ್ಗೆ ಬಾಂಗ್ಲಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ಆಗಲಿಲ್ಲ.
ಎರಡನೇ ದಿನ ಮೊದಲ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನ್ ಅಲ್ಪಮೊತ್ತಕ್ಕೆ ಕುಸಿಯಿತು. ಎಬಾಡೋತ್ ಹೊಸೈನ್ ಅವರ ದಾಳಿಗೆ ಅಫ್ಘಾನ್ ಕುಸಿಯಿತು. ಕೇವಲ 39 ಓವರ್ಗಳನ್ನು ಆಡಿದ ಅಫ್ಘಾನಿಸ್ತಾನದ ಆಟಗಾರರು 146 ರನ್ ಗಳಿಸಲಷ್ಟೇ ಶಕ್ತರಾದರು. ಇದರಿಂದ 236 ರನ್ ಮುನ್ನಡೆಯನ್ನು ಬಾಂಗ್ಲಾ ಪಡೆಯಿತು. ಆದರೆ ಫಾಲೋ ಆನ್ ಕೊಡಲು ತಂಡ ಮುಂದಾಗಲಿಲ್ಲ. ಎರಡನೇ ಇನ್ನಿಂಗ್ಸ್ ಆಡಲು ಬಾಂಗ್ಲಾ ಅಣಿಯಾಯಿತು.
ಎರಡನೇ ಇನ್ನಿಂಗ್ಸ್ನಲ್ಲಿ ಮತ್ತೆ ನಜ್ಮುಲ್ ಹೊಸೈನ್ ಶಾಂಟೊ (124) ಶತಕ ಗಳಿಸಿದರು. ಅವರ ಜೊತೆಗೆ ಮೊಮಿನುಲ್ ಹಕ್ 121 ರನ್ ಗಳಿಸಿದರು. ಇದರಿಂದ ನಾಲ್ಕನೇ ದಿನಕ್ಕೆ 425 ರನ್ ಗಳಿಸಿತ್ತು. ಇದರಿಂದ 661 ರನ್ನ ಮುನ್ನಡೆ ಪಡೆದುಕೊಂಡಿತು. ಬೃಹತ್ ಮುನ್ನಡೆಯ ನಂತರ ಬಾಂಗ್ಲಾದೇಶದ ಡಿಕ್ಲೇರ್ ಘೋಷಣೆ ಮಾಡಿತು. ಇದರಿಂದ ಅಫ್ಘಾನ್ ಗೆಲುವಿಗೆ 662 ರನ್ನ ಅವಶ್ಯಕತೆ ಇತ್ತು.
ನಾಲ್ಕನೇ ದಿನದ ಕೊನೆಗೆಯಲ್ಲಿ ಬ್ಯಾಟಿಂಗ್ ಆರಂಭಿಸಿದ ಅಫ್ಘಾನ್ ದಿನದಾಟದ ಅಂತ್ಯಕ್ಕೆ 45 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿತ್ತು. ಐದನೇ ದಿನದ ಆಟ ಆರಂಭವಾಗುತ್ತಿದ್ದಂತೆ ಬಾಂಗ್ಲಾ ಬೌಲರ್ಗಳು ಪಾರಮ್ಯ ಮೆರೆದರು. ತಸ್ಕಿನ್ ಅಹ್ಮದ್ 4 ವಿಕೆಟ್ ಮತ್ತು ಶೋರಿಫುಲ್ ಇಸ್ಲಾಂ 3 ವಿಕೆಟ್ ಪಡೆದು ಮಿಂಚಿದರು. ಇದರಿಂದ ಅಫ್ಘಾನಿಸ್ಥಾನ 115ಕ್ಕೆ ಸರ್ವ ಪತನ ಕಂಡಿತು. ಇದರಿಂದ ಬಾಂಗ್ಲಾದೇಶ ಅತಿ ಹೆಚ್ಚ ರನ್ ಅಂತರದ ಗೆಲುವನ್ನು ದಾಖಲಿಸಿದೆ. ಟೆಸ್ಟ್ ಇತಿಹಾಸಲ್ಲಿ ಇದು ಮೂರನೇ ಬೃಹತ್ ಅಂತರದ ಗೆಲುವಾಗಿದೆ.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ 382 (ಶಾಂಟೊ 146, ಝಾಕಿರ್ 76; ಮಸೂದ್ 5-79) ಮತ್ತು 425/4 ಡೆಕ್ಲ್ (ಶಾಂಟೊ 124, ಮೊಮಿನುಲ್ 121*, ಝಾಕಿರ್ 71) ಅಫ್ಘಾನಿಸ್ತಾನ 146 (ಜಜೈ 36, ಜಮಾಲ್ 345; ಇಬಾಡೋಟ್ 31; ಇಬಾಡೋಟ್) ಮತ್ತು 457 (ರಹಮತ್ 30, ತಸ್ಕಿನ್ 4-37, ಶೋರಿಫುಲ್ 3-28) ಬಾಂಗ್ಲಾಕ್ಕೆ 546 ರನ್ ಗೆಲುವು
ಇದನ್ನೂ ಓದಿ: Rohit Sharma: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ರೋಹಿತ್ ಶರ್ಮಾಗೆ ಕೊಕ್ ಸಂಭವ: ರಹಾನೆಗೆ ಕ್ಯಾಪ್ಟನ್ ಹೊಣೆ?