ETV Bharat / sports

ಹರಿಣಗಳ ನಾಡಲ್ಲಿ ಇತಿಹಾಸ ಬರೆದ ಬಾಂಗ್ಲಾ: 2-1 ಅಂತರದಲ್ಲಿ ಏಕದಿನ ಸರಣಿ ಗೆಲುವು

ಭಾರತ ತಂಡವನ್ನು ವೈಟ್​​ವಾಷ್​ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಬಾಂಗ್ಲಾದೇಶ ತಿರುಗೇಟು ನೀಡಿದೆ. ಏಕದಿನ ಸರಣಿಯಲ್ಲಿ ಐತಿಹಾಸಿಕ ಜಯ ಸಾಧಿಸುವ ಮೂಲಕ ಹರಿಣಗಳ ನಾಡಲ್ಲಿ ಇತಿಹಾಸ ರಚನೆ ಮಾಡಿದೆ.

Bangladesh create history in South africa

author img

By

Published : Mar 23, 2022, 10:12 PM IST

ಸೆಂಚುರಿಯನ್​​(ದಕ್ಷಿಣ ಆಫ್ರಿಕಾ): ಸರಣಿ ಗೆಲ್ಲಲು ಉಭಯ ತಂಡಗಳಿಗೆ ನಿರ್ಣಾಯಕವಾಗಿದ್ದ ಕೊನೆಯ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಗೆಲುವಿನ ನಗೆ ಬೀರಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಕ್ರಿಕೆಟ್​​​ ಸರಣಿಯಲ್ಲಿ 2-1 ಅಂತರದಿಂದ ಗೆಲುವು ದಾಖಲು ಮಾಡುವ ಮೂಲಕ ಬಾಂಗ್ಲಾದೇಶ ದಕ್ಷಿಣ ಆಫ್ರಿಕಾದಲ್ಲಿ ಇತಿಹಾಸ ರಚಿಸಿತು. ಹರಿಣಗಳ ನಾಡಲ್ಲಿ ಬಾಂಗ್ಲಾದೇಶಕ್ಕಿದು ಚೊಚ್ಚಲ ಏಕದಿನ ಸರಣಿ ಗೆಲುವು.

Bangladesh create history in South africa

ಮೂರು ಏಕದಿನ ಪಂದ್ಯಗಳ ಪೈಕಿ ಮೊದಲ ಪಂದ್ಯದಲ್ಲಿ ಬಾಂಗ್ಲಾ ಗೆಲ್ಲುವ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿತ್ತು. ಎರಡನೇ ಪಂದ್ಯದಲ್ಲಿ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದ ಆತಿಥೇಯರು ಗೆಲುವು ಸಾಧಿಸಿದ್ದು ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿಕೊಂಡಿದ್ದರು. ಹೀಗಾಗಿ, ಇಂದಿನ ಪಂದ್ಯ ಇತ್ತಂಡಗಳಿಗೂ ನಿರ್ಣಾಯಕವಾಗಿತ್ತು.

ಬಾಂಗ್ಲಾ ಅಮೋಘ ಪ್ರದರ್ಶನ: ನಿರ್ಣಾಯಕ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ದ.ಆಫ್ರಿಕಾ ತಂಡಕ್ಕೆ ಹೇಳಿಕೊಳ್ಳುವಂತಹ ಆರಂಭ ಸಿಗಲಿಲ್ಲ. ಕೇವಲ 12ರನ್​ಗಳಿಸಿದ್ದ ವೇಳೆ ಕ್ವಿಂಟನ್ ಡಿಕಾಕ್​​ ಅವರು ಮೆಹದಿ ಹಸನ್​ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು. ಇದಾದ ಬಳಿಕ ವೆರ್ರೆನ್ನೆ(9), ನಾಯಕ ಬವುಮಾ (2)ರನ್​ಗಳಿಸಿ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಬಂದ ದುಸೆನ್​ ಕೂಡ 4ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ತಂಡ 83ರನ್ ​ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು.

ಇದಾದ ಬಳಿಕ ಒಂದಾದ ಮಿಲ್ಲರ್​​(16), ಪ್ರಿಟೊರಿಯಸ್​​(20) ತಂಡಕ್ಕೆ ಚೇತರಿಕೆ ನೀಡುವ ಕೆಲಸ ಮಾಡಿದರು. ಆದರೆ ಇವರ ವಿಕೆಟ್ ಪಡೆದುಕೊಳ್ಳುವಲ್ಲಿ ತಸ್ಕಿನ್​ ಯಶಸ್ವಿಯಾದರು. ಬಳಿಕ ಬಂದ ಕೇಶವ್​​ 28ರನ್​ಗಳಿಕೆ ಮಾಡಿ ತಂಡ 150ರ ಗಡಿ ದಾಟಿಸಿದರು. ಹೀಗಿದ್ದೂ ತಂಡ 37 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 154ರನ್​ಗಳಿಕೆ ಮಾಡಿತು.

  • History for Bangladesh 🎉

    They record their first-ever bilateral ODI series victory in South Africa with an emphatic nine-wicket win in the final match 👏 #SAvBAN pic.twitter.com/OJoAisR1OI

    — ICC (@ICC) March 23, 2022 " class="align-text-top noRightClick twitterSection" data=" ">

ಮಿಂಚಿದ ತಸ್ಕಿನ್​​: ಬಾಂಗ್ಲಾದೇಶದ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ತಸ್ಕಿನ್ ಅಹ್ಮದ್​ 9 ಓವರ್​ಗಳಲ್ಲಿ 35ರನ್ ನೀಡಿ 5 ವಿಕೆಟ್ ಪಡೆದುಕೊಂಡರು. ಇಳಿದಂತೆ ಶಕೀಬ್​​ 2 ವಿಕೆಟ್​ ಕಿತ್ತರೆ, ಇಸ್ಲಾಂ ಹಾಗೂ ಹಸನ್ ತಲಾ 1 ವಿಕೆಟ್ ಪಡೆದುಕೊಂಡರು.

ಸುಲಭವಾಗಿ ಗುರಿ ಮುಟ್ಟಿದ ಬಾಂಗ್ಲಾ: 155ರನ್​ಗಳ ಗುರಿ ಬೆನ್ನತ್ತಿದ ಬಾಂಗ್ಲಾ ದೇಶಕ್ಕೆ ಉತ್ತಮ ಅಡಿಪಾಯ ಸಿಕ್ಕಿತು. ಆರಂಭಿಕರಾಗಿ ಕಣಕ್ಕಿಳಿದ ತಮಿಮ್ ಇಕ್ಬಾಲ್ ಹಾಗೂ ಲಿಟನ್ ದಾಸ್ ಭರ್ಜರಿ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್​ ನಷ್ಟಕ್ಕೆ 127ರನ್​ಗಳಿಕೆ ಮಾಡಿತು.ಇಕ್ಬಾಲ್ ಅಜೇಯ 87ರನ್​, ಲಿಟನ್ ದಾಸ್​​ 48ರನ್​ಗಳಿಕೆ ಮಾಡಿದರು. ಇದಾದ ಬಳಿಕ ಶಕೀಬ್ ಅಲ್​ ಹಸನ್​ 18ರನ್​ಗಳಿಕೆ ಮಾಡಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಬಾಂಗ್ಲಾ ತಂಡ 26.3 ಓವರ್​​ಗಳಲ್ಲಿ 1 ವಿಕೆಟ್​ನಷ್ಟಕ್ಕೆ 156ರನ್​ಗಳಿಸಿ ಐತಿಹಾಸಿಕ ಜಯ ಸಾಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.