ಢಾಕಾ: ಬಾಂಗ್ಲಾದೇಶದ ವಿರುದ್ಧ ಕೊನೆಯ ಟಿ-20 ಪಂದ್ಯದಲ್ಲಿ ಕೇವಲ 62 ರನ್ಗಳಿಗೆ ಆಲೌಟ್ ಆಗುವ ಮೂಲಕ ತನ್ನ ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕುಖ್ಯಾತಿಗೆ ಆಸ್ಪ್ರೇಲಿಯಾ ಪಾತ್ರವಾಗಿದೆ. 123 ರನ್ಗಳನ್ನು ಬೆನ್ನಟ್ಟಲಾಗದೇ 60 ರನ್ಗಳ ಅಂತರದಿಂದ ಕಾಂಗರೂ ಪಡೆ ಸೋಲು ಕಂಡಿದೆ.
-
Bangladesh win the #BANvAUS T20I series 4-1!
— ICC (@ICC) August 9, 2021 " class="align-text-top noRightClick twitterSection" data="
Shakib Al Hasan-led attack bowled Australia out for 62, guiding their side to a 60-run win 🙌
Scorecard: https://t.co/ap9nHpzYec pic.twitter.com/7WyjAmgiOv
">Bangladesh win the #BANvAUS T20I series 4-1!
— ICC (@ICC) August 9, 2021
Shakib Al Hasan-led attack bowled Australia out for 62, guiding their side to a 60-run win 🙌
Scorecard: https://t.co/ap9nHpzYec pic.twitter.com/7WyjAmgiOvBangladesh win the #BANvAUS T20I series 4-1!
— ICC (@ICC) August 9, 2021
Shakib Al Hasan-led attack bowled Australia out for 62, guiding their side to a 60-run win 🙌
Scorecard: https://t.co/ap9nHpzYec pic.twitter.com/7WyjAmgiOv
ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್ಗಳಿಸಿತ್ತು. ನಾಯಕ ಮೊಹ್ಮದುಲ್ಲಾ 19 ಮತ್ತು ನಯೀಮ್ 23 ರನ್ಗಳಿಸಿದ್ದೇ ತಂಡದ ಗರಿಷ್ಠ ಮೊತ್ತವಾಗಿತ್ತು . ಆಸ್ಟ್ರೇಲಿಯಾ ಪರ ನಥನ್ ಎಲ್ಲಿಸ್ 16ಕ್ಕೆ2, ಕ್ರಿಸ್ಚಿಯನ್ 17ಕ್ಕೆ2, ಅಶ್ಟನ್ ಟರ್ನರ್, ಆಶ್ಟನ್ ಅಗರ್ ಮತ್ತು ಜಂಪಾ ತಲಾ ಒಂದು ವಿಕೆಟ್ ಪಡೆದಿದ್ದರು.
123 ರನ್ಗಳ ಸುಲಭ ಗುರಿ ಹಿಂಬಾಲಿಸಿ ಹೊರಟ ಆಸ್ಟ್ರೇಲಿಯಾ ತಂಡ 13.4 ಓವರ್ಗಳ್ಲಲಿ 62 ರನ್ಗಳಿಗೆ ಆಲೌಟ್ ಆಗುವ ಮೂಲಕ 60 ರನ್ಗಳ ಸೋಲು ಕಂಡಿತು. ನಾಯಕ ಮ್ಯಾಥ್ಯೂ ವೇಡ್(22) ಮತ್ತು ಬೆನ್ ಮೆಕ್ಡರ್ಮೊಟ್ (17) ಎರಡಂಕಿ ಮೊತ್ತ ದಾಟಿದ ಬ್ಯಾಟ್ಸ್ಮನ್ಗಳು.
ಮಿಚಲ್ ಮಾರ್ಷ್(4), ಡೇನಿಯಲ್ ಕ್ರಿಸ್ಚಿಯನ್(3), ಅಲೆಕ್ಸ್ ಕ್ಯಾರಿ(3), ಹೆನ್ರಿಕ್ಸ್(3), ಅಗರ್(2) ಟರ್ನರ್(1) ಎಲ್ಲಿಸ್(1) ಜಂಪಾ(4) ಬಾಂಗ್ಲಾದೇಶದ ಬೌಲಿಂಗ್ ದಾಳಿಗೆ ತತ್ತರಿಸಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಒಂದು ಹಂತದಲ್ಲಿ 51ಕ್ಕೆ4 ವಿಕೆಟ್ ಕಳೆದುಕೊಂಡಿದ್ದ ಆಸೀಸ್ ಕೇವಲ 11 ರನ್ಗಳಿಸುವಷ್ಟರಲ್ಲೇ ಸರ್ವ ಪತನಗೊಂಡಿದ್ದು ಆಶ್ಚರ್ಯದ ಸಂಗತಿ.
ಬಾಂಗ್ಲಾದೇಶ ಪರ ನಸುಮ್ ಅಹ್ಮದ್ 8ಕ್ಕೆ 2,ಮೊಹಮದ್ ಸೈಫುದ್ದೀನ್ 12ಕ್ಕೆ 3, ಶಕಿಬ್ ಅಲ್ ಹಸನ್ 9ಕ್ಕೆ 4 ವಿಕೆಟ್ ಪಡೆದು ದಾಖಲೆಯ ಗೆಲುವು ಮತ್ತು ಆಸ್ಟ್ರೇಲಿಯಾ ವಿರುದ್ಧ ಮೊದಲ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಆಸ್ಟ್ರೇಲಿಯಾ 1877ರ ವರ್ಷಗಳ ನಂತರ ಯಾವುದೇ ಮಾದರಿಯಲ್ಲಿ ಇಷ್ಟು ಕಡಿಮೆ ಓವರ್ಗಳಲ್ಲಿ ಆಲೌಟ್ ಆಗಿರಲಿಲ್ಲ. ಅಲ್ಲದೇ ಕಾಂಗರೂ ಪಡೆ ಟಿ-20 ಕ್ರಿಕೆಟ್ನಲ್ಲಿ 62 ರನ್ಗೆ ಔಟ್ ಆಗಿರಲಿಲ್ಲ. ಆದರೆ ಇದೀಗ 62 ರನ್ಗೆ ಆಲೌಟ್ ಆಗುವ ಮೂಲಕ ಅತ್ಯಂತ ಕಡಿಮೆ ಮೊತ್ತಕ್ಕೆ ಔಟಾದ ಕುಖ್ಯಾತಿಗೆ ಒಳಗಾಗಿದೆ.
ಇದನ್ನು ಓದಿ:ಅಫ್ಘಾನಿಸ್ತಾನ ಬೌಲಿಂಗ್ ಕೋಚ್ ಆಗಿ ಆಸ್ಟ್ರೇಲಿಯಾದ ವೇಗಿ ಶಾನ್ ಟೈಟ್ ನೇಮಕ