ಮೌಂಗನುಯಿ: ಭಾರತ, ಪಾಕಿಸ್ತಾನ, ಇಂಗ್ಲೆಂಡ್ನಂತಹ ಬಲಿಷ್ಠ ತಂಡಗಳಿಗೆ ಸೋಲುಣಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಆಗಿರುವ ನ್ಯೂಜಿಲ್ಯಾಂಡ್ ತಂಡಕ್ಕೆ ತವರಿನಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಹಿನ್ನಡೆ ಅನುಭವಿಸಿದೆ.
ಬೇ ಓವಲ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಜೇಮಿಸನ್ ವ್ಯಾಗ್ನರ್ ಅಂತಹ ವಿಶ್ವ ಶ್ರೇಷ್ಠ ಬೌಲರ್ಗಳಿಗೆ ಟಕ್ಕರ್ ನೀಡಿ ಬರೋಬ್ಬರಿ 458 ರನ್ ದಾಖಲಿಸಿದ್ದಲ್ಲದೆ, ಆತಿಥೇಯ ತಂಡದ ವಿರುದ್ಧ 130 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ. ಆಶ್ಚರ್ಯ ಎಂದರೆ ಭಾರತ ಮತ್ತು ಪಾಕಿಸ್ತಾನ ತಂಡಗಳು ತಲಾ ಎರಡೂ ಟೆಸ್ಟ್ ಪಂದ್ಯಗಳನ್ನಾಡಿದ್ದರೂ ಒಮ್ಮೆಯೂ 300 ರ ಗಡಿ ದಾಟಿರಲಿಲ್ಲ. ಆದರೆ, ಬಾಂಗ್ಲಾದೇಶ ಮೊದಲ ಪಂದ್ಯದಲ್ಲೇ ಕಿವೀಸ್ಗೆ ಆಘಾತ ನೀಡಿದೆ.
-
New Zealand clean up the tail!
— ICC (@ICC) January 3, 2022 " class="align-text-top noRightClick twitterSection" data="
Shoriful Islam is claimed by Trent Boult and the tourists are bowled out for 458!
Watch #NZvBAN on https://t.co/WngPr0Ns1J in selected regions! #WTC23 pic.twitter.com/rJHywuTrZT
">New Zealand clean up the tail!
— ICC (@ICC) January 3, 2022
Shoriful Islam is claimed by Trent Boult and the tourists are bowled out for 458!
Watch #NZvBAN on https://t.co/WngPr0Ns1J in selected regions! #WTC23 pic.twitter.com/rJHywuTrZTNew Zealand clean up the tail!
— ICC (@ICC) January 3, 2022
Shoriful Islam is claimed by Trent Boult and the tourists are bowled out for 458!
Watch #NZvBAN on https://t.co/WngPr0Ns1J in selected regions! #WTC23 pic.twitter.com/rJHywuTrZT
ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್ ಡೆವೊನ್ ಕಾನ್ವೆ(122) ಶತಕದ ನೆರವಿನಿಂದ 328 ರನ್ಗಳಿಸಿತ್ತು. ಈ ಮೊತ್ತವನ್ನು ಹಿಂಬಾಲಿಸಿದ ಬಾಂಗ್ಲಾದೇಶ 176.2 ಓವರ್ಗಳಲ್ಲಿ 458 ರನ್ಗಳಿಸಿದೆ. ಮಹ್ಮದುಲ್ ಹಸನ್ ರಾಯ್ 78, ಶಂಟೋ 64, ನಾಯಕ ಮೊಮಿಮುಲ್ ಹಕ್ 88, ವಿಕೆಟ್ ಕೀಪರ್ ಲಿಟನ್ ದಾಸ್ 86 ಮತ್ತು ಮೆಹೆದಿ ಹಸನ್ 47 ರನ್ಗಳಿಸಿ 130 ರನ್ಗಳ ಮಹತ್ವದ ಮುನ್ನಡೆಗೆ ಕಾರಣರಾದರು.
ನ್ಯೂಜಿಲ್ಯಾಂಡ್ ಪರ ಸೌಥಿ 114ಕ್ಕೆ 2, ಬೌಲ್ಟ್ 85ಕ್ಕೆ4, ವ್ಯಾಗ್ನರ್ 101ಕ್ಕೆ 3 ಮತ್ತು ಜೇಮಿಸನ್ 78ಕ್ಕೆ1 ವಿಕೆಟ್ ಪಡೆದರು.
ಇದನ್ನೂ ಓದಿ:IND vs SA 2nd Test: 202 ರನ್ಗಳಿಗೆ ರಾಹುಲ್ ಪಡೆ ಆಲೌಟ್, ದಿನದಾಟದ ಅಂತ್ಯಕ್ಕೆ ಆಫ್ರಿಕಾ 35/1