ದುಬೈ: ಆಸ್ಟ್ರೇಲಿಯಾದ ಮಾರಕ ಬೌಲಿಂಗ್ ದಾಳಿಗೆ ಉತ್ತರಿಸಲಾಗದ ಬಾಂಗ್ಲಾದೇಶ ತಂಡ 15 ಓವರ್ಗಳಲ್ಲಿ ಕೇವಲ 73 ರನ್ಗಳಿಸಿ ಆಲೌಟ್ ಆಗಿದೆ.
ಟಾಸ್ ಸೋತು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಆಡಿದ ಬಾಂಗ್ಲಾದೇಶ ಹಿಂದಿನ ಪಂದ್ಯಗಳಂತೆ ಈ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ತಂಡದ ಯಾವೊಬ್ಬ ಬ್ಯಾಟರ್ ಕೂಡ 20ರ ಗಡಿದಾಟಲಿಲ್ಲ. ಅರಂಭಿಕ ಬ್ಯಾಟರ್ ಮೊಹಮ್ಮದ್ ನಯೀಮ್ 17, ನಾಯಕ ಮಹಮುದುಲ್ಲಾ ಮತ್ತು ಶಮೀಮ್ ಹೊಸೈನ್ 19 ರನ್ಗಳಿಸಿ ಎರಡಂಕಿ ಮೊತ್ತ ದಾಖಲಿಸಿದರು. ಉಳಿದೆಲ್ಲಾ ಬ್ಯಾಟರ್ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.
-
What a spell from the Australian leggie 💫#T20WorldCup | #AUSvBAN | https://t.co/r00X0zOgH1 pic.twitter.com/Ie2F2RtAsl
— ICC (@ICC) November 4, 2021 " class="align-text-top noRightClick twitterSection" data="
">What a spell from the Australian leggie 💫#T20WorldCup | #AUSvBAN | https://t.co/r00X0zOgH1 pic.twitter.com/Ie2F2RtAsl
— ICC (@ICC) November 4, 2021What a spell from the Australian leggie 💫#T20WorldCup | #AUSvBAN | https://t.co/r00X0zOgH1 pic.twitter.com/Ie2F2RtAsl
— ICC (@ICC) November 4, 2021
ಲಿಟನ್ ದಾಸ್ ತಾವೆದುರಿಸಿ ಮೊದಲ ಎಸೆತದಲ್ಲೇ ಸ್ಟಾರ್ಕ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ಸೌಮ್ಯ ಸರ್ಕಾರ್ 5, ರಹೀಮ್ 1, ಅಫೀಫ್ ಹೊಸೈನ್ 0, ಮೆಹೆದಿ ಹಸನ್ 0, ಮುಸ್ತಫಿಜುರ್ ರೆಹಮಾನ್ 4 ಮತ್ತು ಶಾರಿಫುಲ್ ಇಸ್ಲಾಮ್ 0ಗೆ ವಿಕೆಟ್ ಒಪ್ಪಿಸಿದರು.
ಆಸ್ಟ್ರೇಲಿಯಾ ಪರ ಆ್ಯಡಂ ಜಂಪಾ 19ಕ್ಕೆ 5, ಜೋಸ್ ಹೆಜಲ್ವುಡ್ 8ಕ್ಕೆ2, ಮಿಚೆಲ್ ಸ್ಟಾರ್ಕ್ 21ಕ್ಕೆ2, ಗ್ಲೇನ್ ಮ್ಯಾಕ್ಸ್ವೆಲ್ 6ಕ್ಕೆ1 ವಿಕೆಟ್ ಪಡೆದು ಬಾಂಗ್ಲಾದೇಶ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದರು.