ETV Bharat / sports

ಟಿ-20 ಪಂದ್ಯ: ಆಸ್ಟ್ರೇಲಿಯಾ ತಂಡಕ್ಕೆ ಆಘಾತಕಾರಿ ಸೋಲುಣಿಸಿದ ಬಾಂಗ್ಲಾದೇಶ

author img

By

Published : Aug 3, 2021, 10:41 PM IST

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಆಸೀಸ್ ಬೌಲರ್​ಗಳ ದಾಳಿಗೆ ಕಂಗೆಟ್ಟು 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 131 ರನ್​ಗಳಿಸಿತ್ತು. ಮೊಹಮ್ಮದ್ ನಯೀಮ್ 30, ಶಕಿಬ್ ಅಲ್ ಹಸನ್​ 36, ಮೊಹಮ್ಮದುಲ್ಲಾ 20 ಅಫೀಫ್ ಹುಸೇನ್​ 23 ರನ್​ಗಳಿಸಿದ್ದರು.

Australia tour of Bangladesh 2021
Australia tour of Bangladesh 2021

ಢಾಕಾ: ಅತಿಥೇಯ ಬಾಂಗ್ಲದೇಶ ತಂಡ ಮೊದಲ ಟಿ-20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಕೇವಲ 132 ರನ್​ಗಳ ಗುರಿ ನೀಡಿಯೂ 23 ರನ್​ಗಳ ರೋಚಕ ಜಯ ಸಾಧಿಸಿದೆ. ಇದು ಟಿ-20 ಕ್ರಿಕೆಟ್​ನಲ್ಲಿ ಆಸೀಸ್ ವಿರುದ್ಧ ಮೊದಲ ಜಯ ಆಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಆಸೀಸ್ ಬೌಲರ್​ಗಳ ದಾಳಿಗೆ ಕಂಗೆಟ್ಟು 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 131 ರನ್​ಗಳಿಸಿತ್ತು. ಮೊಹಮ್ಮದ್ ನಯೀಮ್ 30, ಶಕಿಬ್ ಅಲ್ ಹಸನ್​ 36, ಮೊಹಮ್ಮದುಲ್ಲಾ 20 ಅಫೀಫ್ ಹುಸೇನ್​ 23 ರನ್​ಗಳಿಸಿದ್ದರು.

Bangladesh win their first-ever T20I against Australia ✨

Nasum Ahmed's sensational performance of 4/19 helps the hosts clinch a 23-run victory in Dhaka 👏 #BANvAUS | https://t.co/PlxU4Zp9fM pic.twitter.com/Wz97VnSuAW

— ICC (@ICC) August 3, 2021

ಮಿಚೆಲ್ ಸ್ಟಾರ್ಕ್​ 33ಕ್ಕೆ 2, ಹೆಜಲ್​ವುಡ್​ 24ಕ್ಕೆ 3, ಜಂಪಾ ಮತ್ತು ಆ್ಯಂಡ್ರ್ಯೂ ಟೈ ತಲಾ ಒಂದು ವಿಕೆಟ್ ಪಡೆದಿದ್ದರು.

132 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡ 20 ಓವರ್​ಗಳಲ್ಲಿ 108 ರನ್​ಗಳಿಗೆ ಆಲೌಟ್ ಆಗುವ ಮೂಲಕ 23 ರನ್​ಗಳ ಸೋಲು ಕಂಡಿತು. ಮಿಚೆಲ್ ಮಾರ್ಷ್​ 45 ಎಸೆತಗಳಲ್ಲಿ 45 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಉಳಿದ ಯಾವುದೇ ಬ್ಯಾಟ್ಸ್​ಮನ್ 20ರ ಗಡಿ ದಾಟಲಿಲ್ಲ. ಮಿಚೆಲ್ ಸ್ಟಾರ್ಕ್ (14) ಮತ್ತು ವೇಡ್​ (13) ಮಾತ್ರ ಮಾರ್ಷ್​ ಹೊರತುಪಡಿಸಿ ಎರಡಂಕಿ ಮೊತ್ತ ದಾಖಲಿಸಿದರು.

ನಸುಮ್ ಅಹ್ಮದ್​ 19ಕ್ಕೆ 4 ವಿಕೆಟ್​, ಮುಷ್ತಫಿಜುರ್ ರಹಮಾನ್ ,ಶೋರಿಫುಲ್ ಹಕ್​ ತಲಾ 2 ವಿಕೆಟ್​ ಮತ್ತು ಮೆಹಿದಿ ಹಸನ್​ ಮತ್ತು ಶಕಿಬ್ ಅಲ್ ಹಸನ್ ತಲಾ ಒಂದು ವಿಕೆಟ್​ ಪಡೆದು ಬಾಂಗ್ಲಾದೇಶಕ್ಕೆ ಕಾಂಗರೂಗಳ ವಿರುದ್ಧ ಮೊದಲ ಜಯ ಸಾಧಿಸಲು ನೆರವಾದರು.

ಇದನ್ನು ಓದಿ:ಆತನ ಸಾಮರ್ಥ್ಯ ಏನೆಂದು ನಮಗೆ ಗೊತ್ತು, ಟೀಕೆಗೆ ತಲೆಕೆಡಿಸಿಕೊಳಲ್ಲ : ಪೂಜಾರ ಬೆನ್ನಿಗೆ ನಿಂತ ಕೊಹ್ಲಿ

ಢಾಕಾ: ಅತಿಥೇಯ ಬಾಂಗ್ಲದೇಶ ತಂಡ ಮೊದಲ ಟಿ-20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಕೇವಲ 132 ರನ್​ಗಳ ಗುರಿ ನೀಡಿಯೂ 23 ರನ್​ಗಳ ರೋಚಕ ಜಯ ಸಾಧಿಸಿದೆ. ಇದು ಟಿ-20 ಕ್ರಿಕೆಟ್​ನಲ್ಲಿ ಆಸೀಸ್ ವಿರುದ್ಧ ಮೊದಲ ಜಯ ಆಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಆಸೀಸ್ ಬೌಲರ್​ಗಳ ದಾಳಿಗೆ ಕಂಗೆಟ್ಟು 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 131 ರನ್​ಗಳಿಸಿತ್ತು. ಮೊಹಮ್ಮದ್ ನಯೀಮ್ 30, ಶಕಿಬ್ ಅಲ್ ಹಸನ್​ 36, ಮೊಹಮ್ಮದುಲ್ಲಾ 20 ಅಫೀಫ್ ಹುಸೇನ್​ 23 ರನ್​ಗಳಿಸಿದ್ದರು.

ಮಿಚೆಲ್ ಸ್ಟಾರ್ಕ್​ 33ಕ್ಕೆ 2, ಹೆಜಲ್​ವುಡ್​ 24ಕ್ಕೆ 3, ಜಂಪಾ ಮತ್ತು ಆ್ಯಂಡ್ರ್ಯೂ ಟೈ ತಲಾ ಒಂದು ವಿಕೆಟ್ ಪಡೆದಿದ್ದರು.

132 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡ 20 ಓವರ್​ಗಳಲ್ಲಿ 108 ರನ್​ಗಳಿಗೆ ಆಲೌಟ್ ಆಗುವ ಮೂಲಕ 23 ರನ್​ಗಳ ಸೋಲು ಕಂಡಿತು. ಮಿಚೆಲ್ ಮಾರ್ಷ್​ 45 ಎಸೆತಗಳಲ್ಲಿ 45 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಉಳಿದ ಯಾವುದೇ ಬ್ಯಾಟ್ಸ್​ಮನ್ 20ರ ಗಡಿ ದಾಟಲಿಲ್ಲ. ಮಿಚೆಲ್ ಸ್ಟಾರ್ಕ್ (14) ಮತ್ತು ವೇಡ್​ (13) ಮಾತ್ರ ಮಾರ್ಷ್​ ಹೊರತುಪಡಿಸಿ ಎರಡಂಕಿ ಮೊತ್ತ ದಾಖಲಿಸಿದರು.

ನಸುಮ್ ಅಹ್ಮದ್​ 19ಕ್ಕೆ 4 ವಿಕೆಟ್​, ಮುಷ್ತಫಿಜುರ್ ರಹಮಾನ್ ,ಶೋರಿಫುಲ್ ಹಕ್​ ತಲಾ 2 ವಿಕೆಟ್​ ಮತ್ತು ಮೆಹಿದಿ ಹಸನ್​ ಮತ್ತು ಶಕಿಬ್ ಅಲ್ ಹಸನ್ ತಲಾ ಒಂದು ವಿಕೆಟ್​ ಪಡೆದು ಬಾಂಗ್ಲಾದೇಶಕ್ಕೆ ಕಾಂಗರೂಗಳ ವಿರುದ್ಧ ಮೊದಲ ಜಯ ಸಾಧಿಸಲು ನೆರವಾದರು.

ಇದನ್ನು ಓದಿ:ಆತನ ಸಾಮರ್ಥ್ಯ ಏನೆಂದು ನಮಗೆ ಗೊತ್ತು, ಟೀಕೆಗೆ ತಲೆಕೆಡಿಸಿಕೊಳಲ್ಲ : ಪೂಜಾರ ಬೆನ್ನಿಗೆ ನಿಂತ ಕೊಹ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.