ETV Bharat / sports

ವಿಲ್ಲೋ ಮರದ ಬದಲು ಬಿದಿರಿನಲ್ಲಿ ಕ್ರಿಕೆಟ್​ ಬ್ಯಾಟ್ ತಯಾರಿಸುವುದು ತುಂಬಾ ಅಗ್ಗ: ಯುಕೆ ಸಂಶೋಧಕರು - ಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು

ಬಿದಿರಿನ ಬ್ಯಾಟ್​ನಲ್ಲಿರುವ ಸ್ವೀಟ್​ ಸ್ಪಾಟ್ ಆರಂಭದಲ್ಲೇ​ ಯಾರ್ಕರ್​ ಎಸೆತಗಳಿಗೆ ಬೌಂಡರಿ ಬಾರಿಸಲು ಸುಲಭಗೊಳಿಸುತ್ತದೆ, ಆದರೆ ಇದು ಎಲ್ಲಾ ರೀತಿಯ ಸ್ಟ್ರೋಕ್​ಗಳಿಗೆ ರೋಮಾಂಚನಕಾರಿಯಾಗಿದೆ ಎಂದು ದಿ ಟೈಮ್ಸ್​ಗೆ ಶಾ ಹೇಳಿದ್ದಾರೆ.

ವಿಲ್ಲೋ ಮರದ ಬದಲು ಬಿದಿರಿನಲ್ಲಿ ಕ್ರಿಕೆಟ್​ ಬ್ಯಾಟ್

author img

By

Published : May 10, 2021, 9:09 PM IST

ಲಂಡನ್: ಕ್ರಿಕೆಟ್​ ಬ್ಯಾಟ್​ಗಳನ್ನು ವಿಲ್ಲೋ ಮರದ ಬದಲಾಗಿ ಬಿದಿರಿನಿಂದ ತಯಾರಿಸಬಹುದೇ? ಈ ಪ್ರಶ್ನೆಗೆ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ಸಾಧ್ಯ ಎಂದು ತಿಳಿಸಿದೆ.

ಸಾಂಪ್ರದಾಯಿಕವಾಗಿ ಕ್ರಿಕೆಟ್​ ಬ್ಯಾಟ್​ಗಳನ್ನು ಇಂಗ್ಲಿಷ್​ ಅಥವಾ ಕಾಶ್ಮೀರ​ ವಿಲ್ಲೋ ಮರಳಗಳಿಂದ ತಯಾರಿಸಲಾಗುತ್ತದೆ. ಆದರೆ, ಕೆಂಬ್ರಿಡ್ಜ್​ ವಿಶ್ವವಿದ್ಯಾಲಯದ ಸಂಶೋಧಕರಾದ ಡ್ಯಾರ್ಸಿಲ್ ಶಾ ಮತ್ತು ಬೆನ್​ ಟಿಂಕ್ಲರ್​- ಡೇವಿಸ್​ ಅವರ ಅಧ್ಯಯನದ ಪ್ರಕಾರ ಬಿದಿರಿನಿಂದ ಬ್ಯಾಟ್ ತಯಾರು ಮಾಡುವುದು ಅತ್ಯಂತ ಅಗ್ಗದ ಆಯ್ಕೆ ಎಂದು ತಿಳಿಸಿದ್ದಾರೆ.

ಬಿದಿರಿನ ಬ್ಯಾಟ್​ನಲ್ಲಿರುವ ಸ್ವೀಟ್​ ಸ್ಪಾಟ್ ಆರಂಭದಲ್ಲೇ​ ಯಾರ್ಕರ್​ ಎಸೆತಗಳಿಗೆ ಬೌಂಡರಿ ಬಾರಿಸಲು ಸುಲಭಗೊಳಿಸುತ್ತದೆ, ಆದರೆ, ಇದು ಎಲ್ಲಾ ರೀತಿಯ ಸ್ಟ್ರೋಕ್​ಗಳಿಗೆ ರೋಮಾಂಚನಕಾರಿಯಾಗಿದೆ ಎಂದು ದಿ ಟೈಮ್ಸ್​ಗೆ ಶಾ ಹೇಳಿದ್ದಾರೆ.

ದಿ ಗಾರ್ಡಿಯನ್ ದಿನಪತ್ರಿಕೆಯ ವರದಿಯ ಪ್ರಕಾರ, ಸಾಂಪ್ರಾದಾಯಿಕವಾಗಿ ಬ್ಯಾಟ್ ತಯಾರಿಸುವ ಇಂಗ್ಲಿಷ್​ ವಿಲ್ಲೋ ಮರವನ್ನು ಪೂರೈಸುವುದಕ್ಕೆ ಕೆಲವು ಸಮಸ್ಯೆ ಉಂಟಾಗುತ್ತಿದೆ. ಬ್ಯಾಟ್ ತಯಾರಿಸುವ ಮರ 15 ವರ್ಷಗಳ ಮರವನ್ನು ಕಟಾವು ಮಾಡಬೇಕಾಗುತ್ತದೆ. ಅಲ್ಲದೇ ಬ್ಯಾಟ್​ ಉತ್ಪಾದನೆಯ ವೇಳೆ ಶೇಕಡಾ 15ರಿಂದ 30 ರಷ್ಟು ಮರವನ್ನು ಸಹ ವ್ಯರ್ಥವಾಗುತ್ತದೆ ಎಂದು ತಿಳಿದು ಬಂದಿದೆ.

ಬಿದಿರಿನಲ್ಲಿ ಬ್ಯಾಟ್ ತಯಾರಿಸುವುದು ಅಗ್ಗ ಹಾಗೂ ಅದು ಹೇರಳವಾಗಿ ದೊರೆಯುತ್ತದೆ ಮತ್ತು ವೇಗವಾಗಿ ಬೆಳೆಯುವ ಸುಸ್ಥಿರ ವಸ್ತುವಾಗಿದೆ ಸಂಶೋಧಕ ಶಾ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಮರ ಕಡಿದ ಮೇಲೆ ಬೇರುಗಳು ಚಿಗುರುತ್ತವೆ ಮತ್ತು 7 ವರ್ಷಗಳಲ್ಲಿ ಅವು ಕೂಡ ಪ್ರಬುದ್ಧತೆ ತಲುಪಿರುತ್ತವೆ ಎಂದು ಹೇಳಿದ್ದಾರೆ.

ಅವರು ಬರೆದಿರುವ ಲೇಖನದಲ್ಲಿ ಬಿದಿರಿನಿಂದ ತಯಾರಿಸುವ ಬ್ಯಾಟ್​, ವಿಲ್ಲೋ ಬ್ಯಾಟ್​ಗಿಂತಲೂ ಗಟ್ಟಿಯಾಗಿ ಮತ್ತು ಬಲವಾಗಿರುತ್ತದೆ. ಜೊತೆಗೆ ಇದೇ ರೀತಿಯ ಕಂಪನ ಕಾರ್ಯಕ್ಷಮತೆ ಹೊಂದಿರುತ್ತದೆ. ಇದು ವಿಲ್ಲೋ ಬ್ಯಾಟ್​ಗಿಂತಲೂ ಭಾರವಾಗಿರುತ್ತದೆ. ನಾವು ಅದನ್ನು ಇನ್ನು ಉತ್ತಮಗೊಳಿಸಲು ನೋಡುತ್ತಿದ್ದೇವೆ ಎಂದು ಶಾ ವಿವರಿಸಿದ್ದಾರೆ.

ಬಿದಿರಿನ ಬ್ಯಾಟ್​ ಕಲ್ಪನೆಯು ಆರಂಭಿಕರಿಗೆ ಒಂದು ತಾಜಾತನ ಎನಿಸಬಹುದು. ಆದರೆ ಇದನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಳಸಬಹುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಏಕೆಂದರೆ ಐಸಿಸಿಯ ನಿಯಮಗಳು ಮರದಿಂದ ಮಾಡಿದ ಬ್ಯಾಟ್​ಗಳಿಗೆ ಮಾತ್ರ ಅವಕಾಶ ನೀಡುತ್ತದೆ.

ಇದನ್ನು ಓದಿ: ಟಿ-20 ವಿಶ್ವಕಪ್​ಗಾಗಿ ಲಂಕಾ ತಂಡಕ್ಕೆ ರ‍್ಯಾಲಿ ಕಿಂಗ್ ಮಾಲಿಂಗ ಮರಳುವ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.