ETV Bharat / sports

ಸ್ಟನ್ನಿಂಗ್​ ಕ್ಯಾಚ್​ ಹಿಡಿದು, ರಾಹುಲ್​ಗೆ ಪೆವಿಲಿಯನ್​ ಹಾದಿ ತೋರಿಸಿದ ಬೈರ್​​ಸ್ಟೋವ್​! - ಮೂರನೇ ಟೆಸ್ಟ್​ ಪಂದ್ಯ

3ನೇ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಸ್ಟನ್ನಿಂಗ್​​ ಕ್ಯಾಚ್​ ಪಡೆದುಕೊಳ್ಳುವ ಮೂಲಕ ಬೈರ್​​ಸ್ಟೋವ್​​​ ಎಲ್ಲರ ಗಮನ ಸೆಳೆದಿದ್ದಾರೆ.

Bairstow
Bairstow
author img

By

Published : Aug 27, 2021, 8:06 PM IST

ಲೀಡ್ಸ್​​(ಇಂಗ್ಲೆಂಡ್​​): ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿಕೊಂಡಿದೆ. ಮೊದಲ ಇನ್ನಿಂಗ್ಸ್​​​ನಲ್ಲಿ ಕೇವಲ 78ರನ್​ಗಳಿಗೆ ತಂಡ ಆಲೌಟ್​ ಆಗಿದ್ದು, ಇದೀಗ ಎರಡನೇ ಇನ್ನಿಂಗ್ಸ್​​ನಲ್ಲಿ ಬ್ಯಾಟಿಂಗ್ ನಡೆಸುತ್ತಿದೆ.

ಎರಡನೇ ಇನ್ನಿಂಗ್ಸ್​​ನಲ್ಲೂ ಆರಂಭಿಕ ಆಘಾತಕ್ಕೊಳಗಾಗಿರುವ ಟೀಂ ಇಂಡಿಯಾ ಆರಂಭದಲ್ಲೇ ಕನ್ನಡಿಗ ಕೆ.ಎಲ್​ ರಾಹುಲ್​ ವಿಕೆಟ್​ ಕಳೆದುಕೊಂಡಿದೆ. ಕೇವಲ 8ರನ್​​ಗಳಿಕೆ ಮಾಡಿದ್ದ ಸಂದರ್ಭದಲ್ಲಿ ಓವರ್​​ಟೊನ್ ಎಸೆದ ಓವರ್​​ನಲ್ಲಿ ಕ್ಯಾಚ್​ ನೀಡಿ ನಿರ್ಗಮಿಸಿದರು. ಸ್ಲೀಪ್​ನಲ್ಲಿ ನಿಂತಿದ್ದ ಬೈರ್​ಸ್ಟೋವ್​ ಸ್ಟನ್ನಿಂಗ್​ ಕ್ಯಾಚ್​ ಹಿಡಿಯುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿರಿ: 3ನೇ ಟೆಸ್ಟ್​​​: 432ರನ್​ಗಳಿಗೆ ಆಲೌಟ್ ಆದ ಇಂಗ್ಲೆಂಡ್​.. 354ರನ್​ಗಳ ಭರ್ಜರಿ ಮುನ್ನಡೆ

ಮೊದಲ ಇನ್ನಿಂಗ್ಸ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ಬೈರ್​ಸ್ಟೋವ್​ ವಿಫಲವಾದರೂ ಕೂಡ ಕ್ಷೇತ್ರರಕ್ಷಣೆ ವೇಳೆ ಅತ್ಯದ್ಭುತವಾಗಿ ಕ್ಯಾಚ್ ಹಿಡಿದು, ತಂಡಕ್ಕೆ ಮೆಲುಗೈ ತಂದುಕೊಟ್ಟಿದ್ದಾರೆ. ಮೊದಲ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್​ ತಂಡ 432ರನ್​ಗಳಿಗೆ ಆಲೌಟ್​​ ಆಗಿದ್ದು, ಬರೋಬ್ಬರಿ 345ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಇಂಗ್ಲೆಂಡ್ ಕ್ಯಾಪ್ಟನ್ ರೂಟ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.