ಅಡಿಲೇಡ್ : ಆಸ್ಟ್ರೇಲಿಯಾ ಮಹಿಳಾ ತಂಡದ ವೇಗದ ಬೌಲರ್ ಮೇಗನ್ ಶೂಟ್ ಮತ್ತು ಜೆಸ್ ಹೋಲಿಯೋಕ್ ಸಲಿಂಗ ದಂಪತಿಗೆ ಹೆಣ್ಣು ಮಗು ಜನಿಸಿದೆ. ಆಗಸ್ಟ್ 17ರಂದು ಹೆಣ್ಣು ಮಗು ಕೇವಲ 28 ವಾರಗಳಿಗೆ ಜನಿಸಿತು ಎಂದು ಶನಿವಾರ ಸಾಮಾಜಿಕ ಜಾಲತಾಣದ ಮೂಲಕ ಮೇಗನ್ ಶೂಟ್ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.
"ರಿಲೀ ಲೂಯಿಸ್ ಶೂಟ್ 28 ವಾರಗಳಿಗೆ ಇದೇ ಮಂಗಳವಾರ ಜನಿಸಿದ್ದಾಳೆ. ಅವಳ ತೂಕ ಕೇವಲ 858 ಗ್ರಾಮ್ ಇದೆ" ಎಂದು ಮೇಗನ್ ಸರಣಿ ಟ್ವೀಟ್ಗಳ ಮೂಲಕ ದಂಪತಿಯ ಫೋಟೊ ಶೇರ್ ಮಾಡಿಕೊಂಡಿದ್ದಾರೆ.
- " class="align-text-top noRightClick twitterSection" data="
">
"ನಮ್ಮಪುಟ್ಟ ಮಿರಾಕಲ್ ತುರ್ತು ಸಿಸೇರಿಯನ್ ಮೂಲಕ ಜನಿಸಿತು. ಅವಧಿಗೂ ಮುನ್ನ ಯಾವುದೇ ಸಂದರ್ಭದಲ್ಲಿ ಮಗು ಜನಿಸಬಹುದಾದ ತೊಂದರೆಯಿದೆ ಎಂದು 24ನೇ ವಾರದಿಂದಲೇ ವೈದ್ಯರು ನಮಗೆ ತಿಳಿಸಿದ್ದರು.
ಆದ್ದರಿಂದ ಸುಮಾರು 5 ವಾರಗಳ ಕಾಲ ಎಲ್ಲದ್ದಕ್ಕೂ ಸಿದ್ಧವಾಗಿದ್ದೆವು ಮತ್ತು ಇನ್ನು ಎಷ್ಟು ದೂರ ಹೋಗಬಹುದು ಎಂದು ಯೋಚಿಸುತ್ತಿದ್ದೆವು" ಎಂದು ಮತ್ತೊಂದು ಟ್ವೀಟ್ನಲ್ಲಿ ಹೇಳಿದ್ದಾರೆ. ನಾನು ಈ ಕುಟುಂಬದ ಭಾಗವಾಗಿರುವುದಕ್ಕೆ ಮತ್ತು ಈ ಇಬ್ಬರು ಸುಂದರ ಹುಡುಗಿಯರನ್ನು ಪಡೆದಿರುವುದಕ್ಕೆ ಅದೃಷ್ಟ ಮಾಡಿದ್ದೇನೆ ಎಂದು ಮೇಗನ್ ಹೇಳಿದ್ದಾರೆ.
-
~ Rylee Louise Schutt 💕
— Megan Schutt (@megan_schutt) August 21, 2021 " class="align-text-top noRightClick twitterSection" data="
~ 17/08/21 at 10:09pm
~ 28 Weeks 6 Days
~ 858gm pic.twitter.com/TfieNUNtDv
">~ Rylee Louise Schutt 💕
— Megan Schutt (@megan_schutt) August 21, 2021
~ 17/08/21 at 10:09pm
~ 28 Weeks 6 Days
~ 858gm pic.twitter.com/TfieNUNtDv~ Rylee Louise Schutt 💕
— Megan Schutt (@megan_schutt) August 21, 2021
~ 17/08/21 at 10:09pm
~ 28 Weeks 6 Days
~ 858gm pic.twitter.com/TfieNUNtDv
ಮೇಗನ್ ಮಾರ್ಚ್ 2019ರಲ್ಲಿ ತಮ್ಮ ದೀರ್ಘಕಾಲದ ಜೊತೆಗಾರ್ತಿ ಜೆಸ್ರನ್ನು ವಿವಾಹವಾಗಿದ್ದರು. 2021ರ ಮೇ ತಿಂಗಳಲ್ಲಿ ಈ ದಂಪತಿ ನವೆಂಬರ್ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಘೋಷಿಸಿಕೊಂಡಿದ್ದರು. ಇದೀಗ ಕೇವಲ ಏಳು ತಿಂಗಳಿಗೆ ಮಗು ಜನಸಿದೆ.
ಇದನ್ನು ಓದಿ: ಹೆಣ್ಣು ಮಗುವಿಗೆ ಜನ್ಮ ನೀಡಲಿದ್ದಾರಂತೆ ಆಸ್ಟೇಲಿಯಾ ಮಹಿಳಾ ಕ್ರಿಕೆಟರ್ ಪತ್ನಿ !!