ಮೆಲ್ಬೋರ್ನ್: ಥಾಯ್ಲೆಂಡ್ನಲ್ಲಿ ರಜೆಗೆಂದು ತೆರಳಿ ಹೃದಯಾಘಾತದಿಂದ ಸಾವನ್ನಪ್ಪಿದ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕತೆ ಶೇನ್ ವಾರ್ನ್ ಅವರ ಅಂತ್ಯಸಂಸ್ಕಾರವನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸುವುದಾಗಿ ಭಾನುವಾರ ಆಸ್ಟ್ರೇಲಿಯಾ ಸರ್ಕಾರ ಖಚಿತಪಡಿಸಿದೆ.
ಆಸ್ಟ್ರೇಲಿಯಾದ ಸಂಸದ ಹಾಗೂ ವಿಕ್ಟೋರಿಯಾದ ಪ್ರೀಮಿಯರ್ ಡ್ಯಾನ್ ಆ್ಯಂಡ್ರ್ಯೂಸ್ ಟ್ವಿಟರ್ನಲ್ಲಿ ಈ ಬಗ್ಗೆ ಖಚಿತಪಡಿಸಿದ್ದಾರೆ. ನಾನು ವಾರ್ನ್ ಅವರ ಕುಟುಂಬದ ಜೊತೆಗೆ ಈ ಬಗ್ಗೆ ಮಾತನಾಡಿದ್ದು, ಅವರು ಸಾರ್ವಜನಿಕ ಶೋಕಾಚರಣೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
" ನಾನು ಇಂದು ವಾರ್ನ್ ಕುಟುಂಬದೊಂದಿಗೆ ಮಾತನಾಡಿದ್ದೇನೆ ಮತ್ತು ಶೇನ್ ಅವರನ್ನು ನೆನಪಿಟ್ಟುಕೊಳ್ಳಲು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡುವ ನನ್ನ ಪ್ರಸ್ತಾಪವನ್ನು ಅವರು ಒಪ್ಪಿಕೊಂಡಿದ್ದಾರೆ " ಎಂದು ಆ್ಯಂಡ್ರ್ಯೂಸ್ ಟ್ವೀಟ್ ಮಾಡಿದ್ದಾರೆ.
" ವಿಕ್ಟೋರಿಯನ್ನರು ತಮ್ಮ ಕ್ರೀಡೆಗೆ, ನಮ್ಮ ರಾಜ್ಯ ಮತ್ತು ದೇಶಕ್ಕೆ ವಾರ್ನ್ ನೀಡಿದ ಕೊಡುಗೆಗೆ ಗೌರವ ಸಲ್ಲಿಸಲು ಇದು ಒಂದು ಅವಕಾಶವಾಗಿದೆ, ಮುಂದಿನ ದಿನಗಳಲ್ಲಿ ವಿವರಗಳನ್ನು ಅಂತಿಮಗೊಳಿಸಲಾಗುವುದು ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ವಿಕ್ಟೋರಿಯಾದ ಸ್ಪಿನ್ ರಾಜನಿಗೆ ಶಾಶ್ವತ ಗೌರವಾರ್ಥವಾಗಿ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನ ಗ್ರೇಟ್ ಸದರ್ನ್ ಸ್ಟ್ಯಾಂಡ್ಗೆ 'SK ವಾರ್ನ್ ಸ್ಟ್ಯಾಂಡ್' ಎಂದು ನಾಮಕರಣ ಮಾಡಲಾಗುವುದು ಎಂದು ಆಂಡ್ರ್ಯೂಸ್ ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ. ಶೇನ್ ವಾರ್ನ್ ಎಂಸಿಜಿಯಲ್ಲಿ ತಮ್ಮ 700 ನೇ ಟೆಸ್ಟ್ ವಿಕೆಟ್ ಪಡೆದಿದ್ದರು.
ಇದನ್ನೂ ಓದಿ:ಶ್ರೀ'ಲಂಕಾ ದಹನ' ಮಾಡಿದ ಜಡೇಜಾ: ಭಾರತಕ್ಕೆ ಇನ್ನಿಂಗ್ಸ್ ಮತ್ತು 222 ರನ್ಗಳ ಜಯ