ಮೆಲ್ಬೋರ್ನ್: ಕಳೆದ ಕೆಲ ತಿಂಗಳಿಂದ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಆಸ್ಟ್ರೇಲಿಯಾ ಸೀಮಿತ ಓವರ್ಗಳ ನಾಯಕ ಆ್ಯರೋನ್ ಪಿಂಚ್ ಏಕದಿನ ಕ್ರಿಕೆಟ್ನಿಂದ ದಿಢೀರ್ ನಿವೃತ್ತಿ ಪಡೆದಿದ್ದಾರೆ. ಈ ಕುರಿತಂತೆ ಕ್ರಿಕೆಟ್ ಆಸ್ಟ್ರೇಲಿಯಾ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಸ್ಫೋಟಕ ಬ್ಯಾಟರ್ನ ಯುಗಾಂತ್ಯವಾಗಿದೆ.
ಭಾನುವಾರ(ಸೆ.11) ನ್ಯೂಜಿಲ್ಯಾಂಡ್ ತಂಡದ ಎದುರು ಕೊನೆಯ ಏಕದಿನ ಪಂದ್ಯ ನಡೆಯಲಿದ್ದು, ಇದಾದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಅವರು ಹೊರಗುಳಿಯಲಿದ್ದಾರೆ. ಆದರೆ, ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ಕ್ರಿಕೆಟ್ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದ ಫಿಂಚ್, ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
-
⭐️ 145 ODIs
— Cricket Australia (@CricketAus) September 9, 2022 " class="align-text-top noRightClick twitterSection" data="
⭐️ 5401 runs
⭐️ 17 centuries
⭐️ 2020 Aus men’s ODI Player of the Year
⭐️ 2015 World Cup winner https://t.co/60KYlfwhMq
">⭐️ 145 ODIs
— Cricket Australia (@CricketAus) September 9, 2022
⭐️ 5401 runs
⭐️ 17 centuries
⭐️ 2020 Aus men’s ODI Player of the Year
⭐️ 2015 World Cup winner https://t.co/60KYlfwhMq⭐️ 145 ODIs
— Cricket Australia (@CricketAus) September 9, 2022
⭐️ 5401 runs
⭐️ 17 centuries
⭐️ 2020 Aus men’s ODI Player of the Year
⭐️ 2015 World Cup winner https://t.co/60KYlfwhMq
ಆ್ಯರೋನ್ ಫಿಂಚ್ ಕಳೆದ 7 ಏಕದಿನ ಪಂದ್ಯಗಳ ಇನ್ನಿಂಗ್ಸ್ನಲ್ಲಿ ಕ್ರಮವಾಗಿ 0,5,5,1,15,0,0 ರನ್ ಮಾತ್ರ ಗಳಿಕೆ ಮಾಡಿದ್ದು, ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಹೀಗಾಗಿ, ಈ ನಿರ್ಧಾರ ಕೈಗೊಂಡಿದ್ದಾರೆ. ಆಸ್ಟ್ರೇಲಿಯಾ ತಂಡದ ಪರ ಫಿಂಚ್ ಒಟ್ಟು 145 ಏಕದಿನ ಪಂದ್ಯಗಳನ್ನಾಡಿದ್ದು, 5401 ರನ್ಗಳಿಸಿದ್ದಾರೆ. ಇದರಲ್ಲಿ 17 ಶತಕ ಸೇರಿಕೊಂಡಿವೆ. 2020ರಲ್ಲಿ ಏಕದಿನ ಕ್ರಿಕೆಟ್ನ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿ ಗೆದ್ದಿದ್ದರು. ಜೊತೆಗೆ 2015ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು.
ನ್ಯೂಜಿಲ್ಯಾಂಡ್ ವಿರುದ್ಧ ನಡೆದಿರುವ ಕಳೆದ ಎರಡು ಏಕದಿನ ಪಂದ್ಯಗಳಲ್ಲೂ ಫಿಂಚ್ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿ, ಅವರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕೆಕೆಆರ್ ಸೇರಿದ ಸ್ಫೋಟಕ ಬ್ಯಾಟರ್: ಅಲೆಕ್ಸ್ ಹೇಲ್ಸ್ ಸ್ಥಾನಕ್ಕೆ ಆ್ಯರೋನ್ ಫಿಂಚ್ ಆಯ್ಕೆ
ಮುಂಬರುವ ಟಿ20 ವಿಶ್ವಕಪ್ಗೋಸ್ಕರ ಈಗಾಗಲೇ ಆಸ್ಟ್ರೇಲಿಯಾ ತಂಡ ಪ್ರಕಟಗೊಂಡಿದ್ದು, ನಾಯಕತ್ವ ಜವಾಬ್ದಾರಿಯನ್ನು ಫಿಂಚ್ ಅವರಿಗೆ ನೀಡಲಾಗಿದೆ.