ಪರ್ತ್(ಆಸ್ಟ್ರೇಲಿಯಾ): ಟಿ20 ವಿಶ್ವಕಪ್ ಆತಿಥ್ಯ ವಹಿಸಿರುವ ಆಸ್ಟ್ರೇಲಿಯಾ ಗೆಲ್ಲಬೇಕಾದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಆಸೀಸ್ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ರ ಬಿರುಗಾಳಿಯ ಬ್ಯಾಟಿಂಗ್ಗೆ ಲಂಕಾ ಸೊಲ್ಲೆತ್ತದೆ ಸೋಲೊಪ್ಪಿಕೊಂಡಿತು.
ಸ್ಟೊಯಿನಿಸ್ ಅತಿವೇಗದ ಅರ್ಧಶತಕ ದಾಖಲೆ: ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 20 ಓವರ್ಗಳಲ್ಲಿ 6 ವಿಕೆಟ್ಗೆ 157 ರನ್ ಬಾರಿಸಿತು. ಗುರಿ ಬೆನ್ನತ್ತಿದ ಕಾಂಗರೂ ಪಡೆ ಮಾರ್ಕಸ್ ಸ್ಟೊಯಿನಿಸ್ರ ಅತಿ ವೇಗದ ಅರ್ಧಶತಕ ಮತ್ತು ನಾಯಕ ಆ್ಯರೋನ್ ಫಿಂಚ್ರ ತಾಳ್ಮೆಯ ಆಟದಿಂದ ಗೆಲವು ಸಾಧಿಸಿತು.
-
The joint-second-fastest fifty in the men's T20 World Cup 💥
— ICC (@ICC) October 25, 2022 " class="align-text-top noRightClick twitterSection" data="
Outstanding innings from Marcus Stoinis 🙌🏻#AUSvSL | #T20WorldCup pic.twitter.com/rRIHMeooVw
">The joint-second-fastest fifty in the men's T20 World Cup 💥
— ICC (@ICC) October 25, 2022
Outstanding innings from Marcus Stoinis 🙌🏻#AUSvSL | #T20WorldCup pic.twitter.com/rRIHMeooVwThe joint-second-fastest fifty in the men's T20 World Cup 💥
— ICC (@ICC) October 25, 2022
Outstanding innings from Marcus Stoinis 🙌🏻#AUSvSL | #T20WorldCup pic.twitter.com/rRIHMeooVw
ತಂಡ ಗೆಲ್ಲಲು 69 ರನ್ ಇದ್ದಾಗ ಮೈದಾನಕ್ಕೆ ಬಂದ ಮಾರ್ಕಸ್ ಸ್ಟೊಯಿನಿಸ್ ಲಂಕಾ ದಹನ ಮಾಡಿದರು. 6 ಸಿಕ್ಸರ್, 4 ಬೌಂಡರಿ ಸಮೇತ 18 ಎಸೆತಗಳಲ್ಲಿ 59 ರನ್ ಗಳಿಸಿದರು. ಉಳಿದ 10 ರನ್ಗಳು ಮಾತ್ರ ಆ್ಯರೋನ್ ಫಿಂಚ್ ಗಳಿಸಿದರು.
17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಟಿ20 ವಿಶ್ವಕಪ್‌ನಲ್ಲಿ ಅತಿವೇಗದ ಫಿಫ್ಟಿ ಬಾರಿಸಿದ ಜಂಟಿ 2ನೇ ಆಟಗಾರ ಎಂಬ ದಾಖಲೆಯನ್ನೂ ಅವರು ಬರೆದರು. ಯುವರಾಜ್ ಸಿಂಗ್ 2007 ರಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ, ಡಚ್ ಕ್ರಿಕೆಟಿಗ ಸ್ಟೀಫನ್ ಮೈಬರ್ಗ್ 17 ಎಸೆತಗಳಲ್ಲಿ 50 ರನ್ ಸಿಡಿಸಿದ್ದರು.
ನಾಯಕ ಆ್ಯರೋನ್ ಫಿಂಚ್ ನೆಲಕಚ್ಚಿ ಬ್ಯಾಟ್ ಮಾಡಿ 42 ಎಸೆತಗಳಲ್ಲಿ ಔಟಾಗದೇ 31, ಮಿಚೆಲ್ ಮಾರ್ಷ್ 17, ಡೇವಿಡ್ ವಾರ್ನರ್ 11, ಗ್ಲೆನ್ ಮ್ಯಾಕ್ಸವೆಲ್ 23 ರನ್ ಗಳಿಸಿದರು.
ಲಂಕಾಗೆ ನಿಸ್ಸಂಕಾ, ಅಸಲಂಕಾ ನೆರವು: ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸಿಂಹಳೀಯರ ಆರಂಭವೂ ಉತ್ತಮವಾಗಿರಲಿಲ್ಲ. ಟಿ20 ಪ್ಲೇಯರ್ ಕುಸಾಲ್ ಮೆಂಡಿಸ್ 5 ರನ್ಗೆ ಔಟಾಗಿ ನಿರಾಸೆ ಮೂಡಿಸಿದರು. ಬಳಿಕ ಜೊತೆಗೂಡಿದ ಪಥುಮ್ ನಿಸ್ಸಂಕಾ 40, ಧನಂಜಯ್ ಡಿ ಸಿಲ್ವಾ 26 ರನ್ ಮಾಡಿದರೆ, ಚರಿತಾ ಅಸಲಂಕಾ 38, ರನ್ ಗಳಿಸಿದರು. ಇದಾದ ಬಳಿಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 157 ರನ್ಗಳ ಸಾಧಾರಣ ಮೊತ್ತ ಗಳಿಸಿತು.
ಶ್ರೀಲಂಕಾ 2 ಪಂದ್ಯಗಳಲ್ಲಿ 1 ಗೆದ್ದು 1 ಸೋತರೆ, ಆಸ್ಟ್ರೇಲಿಯಾ ಕೂಡ ತಲಾ 1 ಸೋತು, ಗೆದ್ದಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾಗೆ ಲಂಕಾ ಸವಾಲು; ಆತ್ಮವಿಶ್ವಾಸದಲ್ಲಿ ಶನಕಾ ಬಳಗ