ETV Bharat / sports

ಭಾರತ ವಿರುದ್ಧ 2ಪಂದ್ಯ ಸೋತಿರುವ ಕಾಂಗರೂ ಪಡೆ.. ತಂಡದ ವಿರುದ್ಧ ತಿರುಗಿ ಬಿದ್ದ ಆಸ್ಟ್ರೇಲಿಯಾ ಮಾಜಿ ಆಟಗಾರರು! - ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್

ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿರುವ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈಗ ಭಾರತ ಸರಣಿ ವಶಪಡಿಸಿಕೊಳ್ಳಲು ಕೇವಲ ಒಂದು ಪಂದ್ಯವನ್ನು ಗೆಲ್ಲಬೇಕು. ಆದರೆ, ಭಾರತ 4-0 ಕ್ಲೀನ್ ಸ್ವೀಪ್ ಬಯಸಿದೆ. ಅದೇ ಸಮಯದಲ್ಲಿ, ದೆಹಲಿ ಟೆಸ್ಟ್‌ನಲ್ಲಿ ಸೋತ ನಂತರ, ಆಸ್ಟ್ರೇಲಿಯಾದ ಮಾಧ್ಯಮಗಳು ಮತ್ತು ಆಸ್ಟ್ರೇಲಿಯಾದ ಮಾಜಿ ಆಟಗಾರರು ತಮ್ಮದೇ ತಂಡದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

australia-team-on-target-of-australian-media
ಭಾರತ ವಿರುದ್ಧ 2ಪಂದ್ಯ ಸೋತಿರುವ ಕಾಂಗರೂ ಪಡೆ
author img

By

Published : Feb 20, 2023, 7:17 AM IST

ನವದೆಹಲಿ: ಬಾರ್ಡರ್ ಗವಾಸ್ಕರ್ ಟ್ರೋಫಿ 2023ರ 4 ಪಂದ್ಯಗಳ ಸರಣಿಯಲ್ಲಿ 2 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಸೋಲು ಅನುಭವಿಸಿದೆ. 2 ಪಂದ್ಯಗಳ ಪರಾಭವದ ಬಳಿಕ ಆಸ್ಟ್ರೇಲಿಯಾ ತಂಡ ಮತ್ತು ನಾಯಕ ಪ್ಯಾಟ್ ಕಮಿನ್ಸ್ ತಮ್ಮದೇ ದೇಶದ ಮಾಧ್ಯಮಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಆಸ್ಟ್ರೇಲಿಯದ ಮಾಧ್ಯಮಗಳು ಮತ್ತು ಆಸ್ಟ್ರೇಲಿಯಾದ ಮಾಜಿ ಆಟಗಾರರು ತಮ್ಮದೇ ತಂಡವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಮತ್ತು ಭಾರತ - ಆಸ್ಟ್ರೇಲಿಯಾ ಪಂದ್ಯದ ವೀಕ್ಷಕ ವಿವರಣೆಗಾರ ಮಾರ್ಕ್ ವಾ ಆಸ್ಟ್ರೇಲಿಯಾ ತಂಡವನ್ನು ತೀವ್ರವಾಗಿ ಟೀಕಿಸಿದ್ದಾರೆ. ದೆಹಲಿ ಟೆಸ್ಟ್ ಸೋಲು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿದ್ದಾರೆ.

ದೆಹಲಿ ಟೆಸ್ಟ್ ಗೆಲ್ಲಲು ಆಸ್ಟ್ರೇಲಿಯಾಕ್ಕೆ ಉತ್ತಮ ಅವಕಾಶ ಇತ್ತು ಎಂದು ಮಾರ್ಕ್ ವಾ ಹೇಳಿದ್ದಾರೆ. ಆದರೆ, ತಂಡ ಆ ಎಲ್ಲ ಅವಕಾಶಗಳನ್ನು ಕೈ ಚಲ್ಲಿದರು. ಈ ಮೂಲಕ ಸರಣಿಯಲ್ಲಿ ತಮ್ಮ ಸೋಲನ್ನು ಖಚಿತ ಪಡಿಸಿಕೊಂಡರಷ್ಟೇ ಅಲ್ಲ ಮತ್ತೊಮ್ಮೆ ಹೀನಾಯ ಸೋಲು ಅನುಭವಿಸಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಆಸ್ಟ್ರೇಲಿಯ ತಂಡ ಸರಣಿಯನ್ನು ಸಮಬಲ ಮಾಡಿಕೊಳ್ಳಲು ಹಾಗೂ ಜಯದ ಹಳಿಗೆ ಮರಳುವುದು ತುಂಬಾ ಕಷ್ಟಕರವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದ ಮಾಧ್ಯಮದೊಂದಿಗೆ ಮಾತನಾಡಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ಈ ಅವಮಾನಕರ ಸೋಲಿನಿಂದ ತುಂಬಾ ನಿರಾಶೆ ಮತ್ತು ಬೇಸರವಾಗಿದೆ ಎಂದು ಹೇಳಿದ್ದಾರೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾದ ಸ್ಪೋರ್ಟ್ಸ್ ಬೀಟ್ ಕವರ್ ಮಾಡುವ ಜಾನ್ ರಾಲ್ಫ್ ಅವರು ಟ್ವೀಟ್ ಮಾಡಿ ತಂಡದ ಪ್ರದರ್ಶನವನ್ನು ಟೀಕಿಸಿದ್ದಾರೆ. 'ಹೌದು, ಶಾಟ್ ಆಯ್ಕೆ ಭಯಾನಕವಾಗಿದೆ ಎಂದು ನಾನು ಒಪ್ಪುತ್ತೇನೆ. ಪಿಚ್‌ಗಳನ್ನು ದೂಷಿಸುವುದಿಲ್ಲ, ಭಾರತದಲ್ಲಿ ನಾವು ಸಾಕಷ್ಟು ಉತ್ತಮವಾಗಿಲ್ಲ ಎಂಬ ವಾಸ್ತವವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಟ್ವೀಟ್​ನಲ್ಲಿ ಹೇಳಿದ್ದಾರೆ.

  • I am choosing to get outraged about the doctored Indian decks again rather than accept the reality they bask in these conditions and we don't have many answers #moretroublethanearlysettlers

    — Jon Ralph (@RalphyHeraldSun) February 19, 2023 " class="align-text-top noRightClick twitterSection" data=" ">

ಈ ಬಗ್ಗೆ ಮತ್ತೊಂದು ಟ್ವೀಟ್ ಮಾಡಿರುವ ಜಾನ್​ ರಾಲ್ಫ್​, 'ಈ ವಾಸ್ತವವನ್ನು ಒಪ್ಪಿಕೊಳ್ಳುವ ಬದಲು, ನಾನು ಭಾರತೀಯ ಡೆಕ್ ಅನ್ನು ಮತ್ತೊಮ್ಮೆ ಹಾಳುಮಾಡುವುದರ ಬಗ್ಗೆ ಕೋಪಗೊಳ್ಳಲು ಬಯಸುತ್ತೇನೆ. ನಮ್ಮಲ್ಲಿ ಹೆಚ್ಚಿನ ಉತ್ತರಗಳಿಲ್ಲ ಎಂದಿದ್ದಾರೆ. ಪಂದ್ಯದ ನಾಯಕ ಪ್ಯಾಟ್ ಕಮಿನ್ಸ್ ಹೇಳಿಕೆ ಹಾಗೂ ಕ್ರಿಕೆಟ್ ಆಡಿದ ರೀತಿ ನನಗೆ ತುಂಬಾ ಕೋಪ ತಂದಿದೆ ಎಂದು ಜಾನ್​​​​​ ಟ್ವೀಟ್​​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡನೇ ಟೆಸ್ಟ್‌ನಲ್ಲಿ ಭಾರತ 6 ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿದೆ. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 263 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ 262 ರನ್ ಗಳಿಸಿತ್ತು. ಇದಾದ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 113 ರನ್‌ಗಳಿಗೆ ಕುಸಿದಿತ್ತು. ಪಂದ್ಯದ ಮೂರನೇ ದಿನ ಭಾರತ 26ನೇ ಓವರ್‌ನಲ್ಲಿ ಗುರಿ ಮುಟ್ಟುವ ಮೂಲಕ ಭರ್ಜರಿ ಜಯ ಸಾಧಿಸಿ ಗವಾಸ್ಕರ್​ - ಬಾರ್ಡರ್​​​​​​ ಟ್ರೋಫಿ ಎತ್ತಿ ಹಿಡಿಯುವಲ್ಲಿ ಒಂದು ಹೆಜ್ಜೆ ಮುಂದಡಿ ಇಟ್ಟಿದೆ.

  • Feels like I’m watching a highlights package in Delhi, India on the rampage.
    Anything above a 170 will be hard to chase. #INDvAUS

    — Tom Moody (@TomMoodyCricket) February 19, 2023 " class="align-text-top noRightClick twitterSection" data=" ">

ಇದನ್ನು ಓದಿ: ಕ್ರಿಕೆಟ್​ನಲ್ಲಿ ವಿರಾಟ್ ಮೈಲಿಗಲ್ಲು: ಅತಿ ವೇಗವಾಗಿ 25 ಸಾವಿರ ರನ್​ ಪೂರೈಸಿದ ಕಿಂಗ್​ ಕೊಹ್ಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.