ಮೆಲ್ಬೋರ್ನ್(ಆಸ್ಟ್ರೇಲಿಯಾ): ಸೆಪ್ಟೆಂಬರ್ 20ರಿಂದ ಭಾರತದ ವಿರುದ್ಧ ಆರಂಭಗೊಳ್ಳಿರುವ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಮುಂಬರುವ ಟಿ20 ವಿಶ್ವಕಪ್ಗೋಸ್ಕರ ಆಸ್ಟ್ರೇಲಿಯಾ ತಂಡ ಪ್ರಕಟಗೊಂಡಿದೆ. ಮುಖ್ಯವಾಗಿ ಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್ಗೆ ವಿಶ್ರಾಂತಿ ನೀಡಲಾಗಿದೆ.
-
World Cup squad assembled!
— Cricket Australia (@CricketAus) August 31, 2022 " class="align-text-top noRightClick twitterSection" data="
Here's the 15 who will represent our national men's team at the upcoming T20 World Cup and tour of India 🇦🇺 pic.twitter.com/DUgqUGWuyV
">World Cup squad assembled!
— Cricket Australia (@CricketAus) August 31, 2022
Here's the 15 who will represent our national men's team at the upcoming T20 World Cup and tour of India 🇦🇺 pic.twitter.com/DUgqUGWuyVWorld Cup squad assembled!
— Cricket Australia (@CricketAus) August 31, 2022
Here's the 15 who will represent our national men's team at the upcoming T20 World Cup and tour of India 🇦🇺 pic.twitter.com/DUgqUGWuyV
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗಿಯಾಗುವುದಕ್ಕೂ ಮುಂಚಿತವಾಗಿ ಆಸ್ಟ್ರೇಲಿಯಾ ಭಾರತದ ಪ್ರವಾಸ ಕೈಗೊಳ್ಳಲಿದ್ದು, ಈ ಟೂರ್ನಾಮೆಂಟ್ನಲ್ಲಿ ಭಾಗಿಯಾಗಲಿರುವ ತಂಡ ಪ್ರಕಟಗೊಂಡಿದೆ. ಡೇವಿಡ್ ವಾರ್ನರ್ಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನಕ್ಕೆ ಕ್ಯಾಮರೂನ್ ಗ್ರೀನ್ ಆಯ್ಕೆಯಾಗಿದ್ದಾರೆ.ಪಂಜಾಬ್ನ ಮೊಹಾಲಿಯಲ್ಲಿ ಸೆಪ್ಟೆಂಬರ್ 20 ರಂದು ಮೊದಲ T20 ಪಂದ್ಯ ಆರಂಭಗೊಳ್ಳಿದ್ದು, ತದನಂತರ ಎರಡನೇ ಪಂದ್ಯ (ಸೆಪ್ಟೆಂಬರ್ 23), ಮೂರನೇ (ಸೆಪ್ಟೆಂಬರ್ 25) ಪಂದ್ಯಗಳು ಕ್ರಮವಾಗಿ ನಾಗ್ಪುರ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿವೆ.
ಆಸ್ಟ್ರೇಲಿಯಾ ಆಯ್ಕೆದಾರರ ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ಮಾತನಾಡಿದ್ದು, ಕ್ಯಾಮರೂನ್ ಆಟದಲ್ಲಿ ಸುಧಾರಣೆ ಕಂಡು ಬಂದಿದ್ದು, ಹೀಗಾಗಿ, ಟಿ20 ಸರಣಿಯಲ್ಲಿ ಅವಕಾಶ ನೀಡಿದ್ದೇವೆ ಎಂದಿದ್ದಾರೆ.ಭಾರತದ ಪ್ರವಾಸದ ಬಳಿಕ ಆಸ್ಟ್ರೇಲಿಯಾ ತವರು ನೆಲದಲ್ಲಿ ವೆಸ್ಟ್ ಇಂಡೀಸ್, ಇಂಗ್ಲೆಂಡ್ ಹಾಗೂ ತದನಂತರ ಭಾರತದ ವಿರುದ್ಧ ಮತ್ತೊಮ್ಮೆ ಟಿ20 ಸರಣಿಯಲ್ಲಿ ಸೆಣಸಲಿದೆ. ತಂಡದಲ್ಲಿ ಮುಖ್ಯವಾಗಿ ಟಿಮ್ ಡೇವಿಡ್ಗೆ ಅವಕಾಶ ನೀಡಲಾಗಿದೆ.
ಭಾರತ ವಿರುದ್ಧದ T20I ಸರಣಿಗೆ ಆಸ್ಟ್ರೇಲಿಯಾ ತಂಡ: ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್ (ವಿ.ಕೀ), ಟಿಮ್ ಡೇವಿಡ್, ಆರನ್ ಫಿಂಚ್ (ಕ್ಯಾಪ್ಟನ್), ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಕ್ಯಾಮರೂನ್ ಗ್ರೀನ್, ಆಡಮ್ ಝಂಪಾ
ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಕೂಡ ಮುಂದಿನ ಕೆಲ ದಿನಗಳಲ್ಲಿ ಘೋಷಣೆಯಾಗಲಿದೆ. ಮುಂದಿನ ವಾರ ಆಯ್ಕೆಗಾರರ ಸಭೆ ನಡೆಯಲಿದ್ದು, 18 ಆಟಗಾರರ ತಂಡ ಪ್ರಕಟಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಪ್ರಮುಖವಾಗಿ ಏಷ್ಯಾಕಪ್ನಲ್ಲಿ ಸ್ಥಾನ ಪಡೆದುಕೊಂಡಿರುವ ಎಲ್ಲ ಪ್ಲೇಯರ್ಸ್ಗೆ ಚಾನ್ಸ್ ನೀಡುವ ಸಾಧ್ಯತೆ ಹೆಚ್ಚಾಗಿದೆ.