ETV Bharat / sports

ಏಕದಿನ ಸರಣಿಗೆ ಆಸೀಸ್​ ತಂಡ ಪ್ರಕಟ: ಗಾಯಾಳುಗಳಾದ ಮ್ಯಾಕ್ಸಿ, ಮಾರ್ಷ್, ರಿಚರ್ಡ್​ಸನ್​ ವಾಪಸ್​

ಭಾರತ ಆಸ್ಟ್ರೇಲಿಯಾ ಏಕದಿನ ಸರಣಿ - ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ - ಗ್ಲೆನ್​ ಮ್ಯಾಕ್ಸ್​ವೆಲ್​ ತಂಡಕ್ಕೆ ವಾಪಸ್​ - ಏಕದಿನ ವಿಶ್ವಕಪ್​ಗೆ ಪೂರ್ವ ತಯಾರಿ

ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ
ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ
author img

By

Published : Feb 23, 2023, 12:23 PM IST

ನವದೆಹಲಿ: ಬಾರ್ಡರ್​ ಗವಾಸ್ಕರ್ ಟೆಸ್ಟ್​ ಸರಣಿ ಮುಗಿದ ಬಳಿಕ ಮುಂದಿನ ತಿಂಗಳು ನಡೆಯುವ ಏಕದಿನ ಸರಣಿಗೆ ಕ್ರಿಕೆಟ್​ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದೆ. ಗಾಯಗೊಂಡು ಟೆಸ್ಟ್​ ಸರಣಿಯಿಂದ ದೂರವುಳಿದಿದ್ದ ಆಲ್​ರೌಂಡರ್​ಗಳಾದ ಗ್ಲೆನ್​ ಮ್ಯಾಕ್ಸ್​​ವೆಲ್​, ಮಿಚೆಲ್​ ಮಾರ್ಷ್​ ವೇಗಿ ರಿಚರ್ಡ್​ಸನ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂವರು ಆಟಗಾರರ ಪುನರಾಗಮನದಿಂದ ತಂಡ ಬಲ ಪಡೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

  • SQUAD: Glenn Maxwell and Mitch Marsh are set to return to Australian colours for the three-match ODI series against India in March pic.twitter.com/tSePIVUQ0W

    — Cricket Australia (@CricketAus) February 23, 2023 " class="align-text-top noRightClick twitterSection" data=" ">

ಟೆಸ್ಟ್​ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ವಿಫಲರಾಗಿರುವ ಪ್ಯಾಟ್​ ಕಮಿನ್ಸ್​ ಏಕದಿನ ತಂಡಕ್ಕೂ ನಾಯಕರಾಗಿರಲಿದ್ದಾರೆ. ಇತ್ತೀಚೆಗೆ ಏಕದಿನ ಸೇರಿದಂತೆ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಆ್ಯರೋನ್​ ಫಿಂಚ್​ ತೆರವಾಗಿದ್ದ ನಾಯಕನ ಸ್ಥಾನವನ್ನು ಕಮಿನ್ಸ್​ರನ್ನು ತುಂಬಲಿದ್ದಾರೆ. ಇದಲ್ಲದೇ, ಅನುಭವಿ ಬ್ಯಾಟರ್‌ಗಳಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಬುಶೇನ್​ ಕೂಡ ತಂಡದಲ್ಲಿದ್ದಾರೆ. ಹೊಡಿಬಡಿ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್​ ವಾಪಸಾತಿ ತಂಡಕ್ಕೆ ಹೆಚ್ಚಿನ ಬಲ ನೀಡಿದೆ. ಹಿರಿಯರು ಮತ್ತು ಕಿರಿಯರನ್ನೊಳಗೊಂಡ ತಂಡವನ್ನು ಕ್ರಿಕೆಟ್​ ಆಸ್ಟ್ರೇಲಿಯಾ ಹೆಸರಿಸಿದೆ.

ವಿಶ್ವಕಪ್​ಗೆ ಪೂರ್ವ ತಯಾರಿ: ಇನ್ನು ಏಕದಿನ ವಿಶ್ವಕಪ್​ಗೆ 7 ತಿಂಗಳು ಬಾಕಿ ಇದ್ದು, ಭಾರತದ ಉಪಖಂಡದಲ್ಲೇ ನಡೆಯುವ ಟೂರ್ನಿಗೆ ಈ ಸರಣಿ ಪೂರ್ವಾಭ್ಯಾಸವಾಗಲಿದೆ. ಆಸ್ಟ್ರೇಲಿಯಾ ಭಾರತದ ನೆಲದಲ್ಲಿ ಸರಣಿ ಆಡುವ ಮೂಲಕ ಇಲ್ಲಿನ ವಾತಾವರಣ ಮತ್ತು ಮೈದಾನದ ಬಗ್ಗೆ ತಿಳಿದುಕೊಳ್ಳಲು ಅವಕಾಶವಾಗಲಿದೆ. "ವಿಶ್ವಕಪ್‌ಗೆ ಕೇವಲ ಕೆಲವೇ ತಿಂಗಳುಗಳು ಬಾಕಿಯಿವೆ. ಭಾರತದಲ್ಲಿ ನಡೆಯುವ ಈ ಸರಣಿ ನಮ್ಮ ತಯಾರಿಯಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಗ್ಲೆನ್, ಮಿಚೆಲ್ ಮತ್ತು ರಿಚರ್ಡ್​ಸನ್​ ಅವರು ಉತ್ತಮ ಪ್ರದರ್ಶನ ತೋರುವ ಮೂಲಕ ವಿಶ್ವಕಪ್​ಗೆ ಸಜ್ಜಾಗಬೇಕಿದೆ ಎಂದು ತಂಡದ ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ ಹೇಳಿದರು.

ಇದಲ್ಲದೇ, ವೇಗಿಗಳ ವಿಭಾಗದಲ್ಲಿ ಅನುಭವಿ ಸೀಮರ್ ಜೋಶ್ ಹೇಜಲ್‌ವುಡ್ ನೇತೃತ್ವ ವಹಿಸಿದ್ದರೆ, ಮಿಚೆಲ್​ ಸ್ಟಾರ್ಕ್​, ಮಾರ್ಕಸ್ ಸ್ಟೋಯಿನೀಸ್​, ಸ್ಪಿನ್​ನಲ್ಲಿ ಆ್ಯಡಂ ಝಂಪಾ ಇರಲಿದ್ದಾರೆ. ತಂಡ ಸಮತೋಲನದಿಂದ ಕೂಡಿದೆ ಎಂದು ಬೈಲಿ ಅಭಿಪ್ರಾಯಪಟ್ಟರು.

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೊದಲ ಏಕದಿನ ಪಂದ್ಯ ಮಾರ್ಚ್ 17 ರಂದು ಮುಂಬೈನಲ್ಲಿ ನಡೆಯಲಿದೆ. ಉಳಿದ ಎರಡು ಪಂದ್ಯಗಳು ವಿಶಾಖಪಟ್ಟಣ (ಮಾರ್ಚ್ 19) ಮತ್ತು ಚೆನ್ನೈನಲ್ಲಿ (ಮಾರ್ಚ್ 22) ನಡೆಯಲಿದೆ.

ಆಸ್ಟ್ರೇಲಿಯಾ ಏಕದಿನ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಆ್ಯಸ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಟ್ರೇವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲಬುಶೇನ್​, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯಿನೀಸ್​, ಡೇವಿಡ್​ ವಾರ್ನರ್ ಮತ್ತು ಆ್ಯಡಂ ಝಂಪಾ.

ಓದಿ: ಟಾಟಾ ಪ್ರಾಯೋಜಕತ್ವದಲ್ಲಿ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.