ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ತಮ್ಮ ಬಹುಕಾಲದ ಗೆಳತಿ ಎಮ್ಮಾ ಮೆಕಾರ್ಥಿ ಅವರನ್ನು ಭಾನುವಾರ ವರಿಸಿದ್ದಾರೆ. ವಿವಾಹದ ಬಳಿಕ ಪತ್ನಿ ಜೊತೆಗೆ ಕೈ ಹಿಡಿದುಕೊಂಡಿರುವ ಫೋಟೋವನ್ನು ಲಿಯಾನ್ ಇನ್ಸ್ಟಾಗ್ರಾಮನಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗೆ "ಮಿಸ್ಟರ್ ಅಂಡ್ ಮಿಸೆಸ್" ಕ್ಯಾಪ್ಶನ್ ಕೊಟ್ಟಿದ್ದಾರೆ. ಇದಕ್ಕೆ ಸಹ ಆಟಗಾರರಾದ ಸೀನ್ ಅಬಾಟ್, ಮ್ಯಾಥ್ಯೂ ರೆನ್‌ಶಾ, ಪೀಟರ್ ಸಿಡಲ್ ಮತ್ತು ಜೋಶ್ ಹೆಜೆಲ್ವುಡ್ ಸೇರಿದಂತೆ ಹಲವರು ಕಮೆಂಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಶ್ರೀಲಂಕಾ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಟೆಸ್ಟ್ ಸರಣಿಯ ಬಳಿಕ ವಿವಾಹವಾಗುವುದಾಗಿ ಸುಳಿವು ನೀಡಿದ್ದರು. ಅದರಂತೆ ಇದೀಗ ಎಮ್ಮಾ ಅವರನ್ನು ಬಾಳ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ನಾಥನ್ ಲಿಯಾನ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ.
ಇದನ್ನೂ ಓದಿ: IND vs WI ODI: ಸಂಘಟಿತ ಹೋರಾಟಕ್ಕೆ ಸಂದ ಫಲ; ಕೆರಿಬಿಯನ್ನರ ವಿರುದ್ಧ ಸರಣಿ ಗೆದ್ದ ಭಾರತ