ಸೇಂಟ್ ಲೂಸಿಯಾ: ಆಸ್ಟ್ರೇಲಿಯಾದ ಸೀಮಿತ ಓವರ್ಗಳ ತಂಡದ ನಾಯಕ ಆ್ಯರೋನ್ ಫಿಂಚ್ ಮಂಡಿ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ, ವಿಂಡೀಸ್ ವಿರುದ್ಧದ ಸರಣಿ ಮತ್ತು ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ.
ಶನಿವಾರ ವೆಸ್ಟ್ ಇಂಡೀಸ್ನಿಂದ ಹೊರಬಂದಿರುವ ಫಿಂಚ್, 14 ದಿನಗಳ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಕ್ವಾರಂಟೈನ್ ಮುಗಿದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ.
ಫಿಂಚ್ ಗಾಯ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ದೊಡ್ಡ ತಲೆನೋವಾಗಿದೆ. ಆದರೂ ಯುಎಇನಲ್ಲಿ ಅಕ್ಟೋಬರ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ವೇಳೆಗೆ ಫಿಂಚ್ ಸಂಪೂರ್ಣ ಗುಣಮುಖರಾಗುತ್ತಾರೆ ಎಂಬ ವಿಶ್ವಾಸದಲ್ಲಿ ಬೋರ್ಡ್ ಮತ್ತು ಆಯ್ಕೆಗಾರರಿದ್ದಾರೆ.
-
Australia captain Aaron Finch faces the prospect of surgery due to a knee injury.#WIvAUShttps://t.co/KvKZVe8T72
— ICC (@ICC) July 25, 2021 " class="align-text-top noRightClick twitterSection" data="
">Australia captain Aaron Finch faces the prospect of surgery due to a knee injury.#WIvAUShttps://t.co/KvKZVe8T72
— ICC (@ICC) July 25, 2021Australia captain Aaron Finch faces the prospect of surgery due to a knee injury.#WIvAUShttps://t.co/KvKZVe8T72
— ICC (@ICC) July 25, 2021
ಫಿಂಚ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ವಿಂಡೀಸ್ ವಿರುದ್ಧ ಏಕದಿನ ತಂಡ ಮುನ್ನಡೆಸಲಿದ್ದಾರೆ. ಆದರೆ ಬಾಂಗ್ಲಾದೇಶ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಯಾರು ನಾಯಕರಾಗಲಿದ್ದಾರೆ ಎಂದು ಇನ್ನೂ ತಿಳಿದುಬಂದಿಲ್ಲ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮ್ಯಾಥ್ಯೂ ವೇಡ್ ಮುನ್ನಡೆಸಬಹುದು ಎನ್ನಲಾಗುತ್ತಿದೆ.
ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ 4-1ರಲ್ಲಿ ಟಿ20 ಸರಣಿ ಸೋಲು ಕಂಡರೆ, ಏಕದಿನ ಸರಣಿ 1-1ರಲ್ಲಿ ಸಮಬಲವಾಗಿದ್ದು, ಮಂಗಳವಾರ ಸರಣಿ ನಿರ್ಧರಿಸುವ ಪಂದ್ಯ ನಡೆಯಲಿದೆ.
ಇದನ್ನೂ ಓದಿ: Tokyo Olympics Hockey: ಭಾರತೀಯ ಹಾಕಿ ತಂಡಕ್ಕೆ 7-1ರಿಂದ ಸೋಲುಣಿಸಿದ ಆಸ್ಟ್ರೇಲಿಯಾ