ಮೆಲ್ಬೋರ್ನ್ : ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡ ಇನ್ನಿಂಗ್ಸ್ ಗೆಲುವು ದಾಖಲಿಸುವ ಮೂಲಕ ಸರಣಿ ತನ್ನದಾಗಿಸಿಕೊಂಡಿದೆ.
ಮೂರನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ವೇಗಿ ಸ್ಕಾಟ್ ಬೋಲ್ಯಾಂಡ್ ಆರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆತಿಥೇಯರು ಐದು ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದ್ದರಿಂದ ಆಸ್ಟ್ರೇಲಿಯಾ ಆಶಸ್ ಕಪ್ ಅನ್ನು ಮರಳಿ ಪಡೆದಿದೆ.
ಓದಿ: ವಿಮಾನದಲ್ಲಿ ದೋಷ: 2 ಗಂಟೆ ಕಾದ್ರೂ ಬಗೆಹರಿಯದ ಸಮಸ್ಯೆ, ವಿಶೇಷ ವಿಮಾನದಲ್ಲಿ ಪ್ರಯಾಣಿಸಲು ಸಿಎಂ ತೀರ್ಮಾನ
ಎರಡನೇ ದಿನಕ್ಕೆ 4 ವಿಕೆಟ್‌ಗಳನ್ನು ಕಳೆದುಕೊಂಡು 31 ರನ್ಗಳನ್ನು ಕಲೆ ಹಾಕಿತು. ಮೂರನೇ ದಿನದಾಟವನ್ನು ಆರಂಭಿಸಿದ ಇಂಗ್ಲೆಂಡ್ ತಂಡ ಕೆಲವೇ ರನ್ಗಳನ್ನು ಕಲೆ ಹಾಕಿ ಆಲೌಟ್ ಆಯಿತು.
ಬೋಲ್ಯಾಂಡ್ ತನ್ನ ಚೊಚ್ಚಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆಸ್ಟ್ರೇಲಿಯಾಕ್ಕೆ ಸ್ಮರಣೀಯ ಜಯ ತಂದುಕೊಟ್ಟರು. ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಕೇವಲ 68 ರನ್‌ಗಳಿಗೆ ಆಲೌಟ್ ಆಯಿತು.
ಸಂಕ್ಷಿಪ್ತ ಸ್ಕೋರ್‌ಗಳು : ಇಂಗ್ಲೆಂಡ್ 185 ಮತ್ತು 68 ಆಲೌಟ್ (ಜೋ ರೂಟ್ 28, ಬೆನ್ ಸ್ಟೋಕ್ಸ್ 11, ಸ್ಕಾಟ್ ಬೋಲ್ಯಾಂಡ್ 7 ರನ್‌ಗಳಿಗೆ 6 ವಿಕೆಟ್ ಕಬಳಿಸಿದ್ದಾರೆ); ಆಸ್ಟ್ರೇಲಿಯಾ 267 ರನ್ ಕಲೆಹಾಗಿದೆ.
ಎಂಸಿಜಿಯಲ್ಲಿ ನಡೆದ ಮೂರನೇ ಟೆಸ್ಟ್‌ನ ಮೂರನೇ ದಿನದಂದು ಆಸ್ಟ್ರೇಲಿಯಾ ತಂಡ ಗೆದ್ದ ನಂತರ ಇಂಗ್ಲೆಂಡ್ ನಾಯಕ ಜೋ ರೂಟ್ ನಿರಾಶೆ ವ್ಯಕ್ತಪಡಿಸಿದರು. ನಾಲ್ಕನೇ ಟೆಸ್ಟ್ ಜನವರಿ 5 ರಂದು ಸಿಡ್ನಿಯಲ್ಲಿ ನಡೆಯಲಿದೆ.
ರಿಕಿ ಪಾಂಟಿಂಗ್ ಟೀಕೆ : ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮಂಗಳವಾರ ಇಂಗ್ಲೆಂಡ್‌ನ ಕಳಪೆ ಪ್ರದರ್ಶನದ ಆಟವನ್ನು ಟೀಕಿಸಿದ್ದಾರೆ. ಆರಂಭದಿಂದಲೂ ನೀವು ಉತ್ತಮ ತಂಡವನ್ನು ಆರಿಸಬೇಕು. ಆ ತಂಡ ನಿಮ್ಮನ್ನು ಎಷ್ಟು ದೂರ ಕೊಂಡೊಯ್ಯುತ್ತದೆ ಎಂಬುದನ್ನು ನೋಡಿ. ಆಂಡರ್ಸನ್, ಬ್ರಾಡ್ ಬ್ರಿಸ್ಬೇನ್‌ನಲ್ಲಿ ಆಡದಿರುವುದು, ಜೋ ರೂಟ್ ಬ್ರಿಸ್ಬೇನ್‌ನಲ್ಲಿ ಮೊದಲು ಬೌಲಿಂಗ್ ಮಾಡದಿರುವುದು, ಮಾರ್ಕ್‌ವುಡ್ ಅಡಿಲೇಡ್‌ನಲ್ಲಿ ಆಡದಿರುವುದು ದಿಗ್ಭ್ರಮೆಗೊಳಿಸುವಂತಿದೆ ಎಂದು ರಿಕಿ ಪಾಂಟಿಂಗ್ ಅಚ್ಚರಿ ವ್ಯಕ್ತಪಡಿಸಿದರು.