ETV Bharat / sports

Australia squad: ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ.. ಟೀಮ್​ ಸೇರಿಕೊಂಡ ಸ್ಮಿತ್​, ಕಮಿನ್ಸ್​, ಗ್ರೀನ್​, ಮ್ಯಾಕ್ಸ್​ವೆಲ್​ - ETV Bharath Karnataka

Australia squad for India tour: ಸೆಪ್ಟೆಂಬರ್​ 22 ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಮೂರು ಏಕದಿನ ಪಂದ್ಯದ ಸರಣಿಗೆ 18 ಜನ ಸದಸ್ಯರ ತಂಡವನ್ನು ಆಸಿಸ್​ ಪ್ರಕಟಿಸಿದೆ.

Australia squad
Australia squad
author img

By ETV Bharat Karnataka Team

Published : Sep 17, 2023, 8:57 PM IST

ಸಿಡ್ನಿ ( ಆಸ್ಟ್ರೇಲಿಯಾ): ಸೆಪ್ಟೆಂಬರ್ 22 ರಿಂದ ಭಾರತದ ವಿರುದ್ಧ ಆಸ್ಟ್ರೇಲಿಯಾ ವಿಶ್ವಕಪ್​ನ ತಯಾರಿ ಹಿನ್ನೆಲೆಯಲ್ಲಿ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಗೆ ಆಸ್ಟ್ರೇಲಿಯಾ ತನ್ನ 18 ಸದಸ್ಯರ ತಂಡವನ್ನು ಪ್ರಕಟಿಸಿದೆ. ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಪ್ಯಾಟ್ ಕಮಿನ್ಸ್ ನಾಯಕರಾಗಿ ಮರಳಿರುವುದರ ಜೊತೆಗೆ ಹಲವು ಪ್ರಮುಖ ಆಟಗಾರರು ವಾಪಸಾಗಿರುವುದು ಆಸ್ಟ್ರೇಲಿಯಾಕ್ಕೆ ಪುಷ್ಟಿ ನೀಡಿದೆ.

ಬುಹುತೇಕ ಗಾಯದ ಕಾರಣದಿಂದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಸ್ಟ್ರೇಲಿಯಾ ಕೆಲ ಪಂದ್ಯಗಳನ್ನು ಕಳೆದುಕೊಂಡಿದೆ. ಇಂದು ಏಕದಿನ ಸರಣಿಯ ಫೈನಲ್​ ಮ್ಯಾಚ್​ನಲ್ಲಿ ಸೌಥ ಆಫ್ರಿಕಾ ಸರಣಿ ಜಯ ಸಾಧಿಸಿದೆ. ಸೋತಿರುವ ಆಸಿಸ್​ ತಂಡ ಖಾಲಿ ಕೈಯಲ್ಲಿ ಭಾರತ ಪ್ರವಾಸ ಮಾಡಲಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಮತ್ತು ಆ್ಯಶಸ್​ ಸರಣಿಯಲ್ಲಿ ಗಾಯಗೊಂಡು ಕಾಂಗರೂ ಪಡೆಯ ಪ್ರಮುಖ ಆಟಗಾರರು ಹರಿಣಗಳ ವಿರುದ್ಧದ ಸರಣಿಯಲ್ಲಿ ಆಡಿರಲಿಲ್ಲ. ಅನುಭವಿಗಳು ವಿಶ್ವಕಪ್​ಗೂ ಮುನ್ನ ಭಾರತದ ವಿರುದ್ಧದ ಸರಣಿಯಲ್ಲಿ ಕಮ್​ಬ್ಯಾಕ್​ ಮಾಡುತ್ತಿದ್ದಾರೆ.

  • Australian ODI squad vs India:

    Pat Cummins (C), Abbott, Carey, Ellis, Green, Hazlewood, Inglis, Spencer Johnson, Labuschagne, Mitchell Marsh, Maxwell, Sangha, Matt Short, Smith, Starc, Stoinis, Warner, Zampa pic.twitter.com/5ipyykcVsC

    — Johns. (@CricCrazyJohns) September 17, 2023 " class="align-text-top noRightClick twitterSection" data=" ">

ಪ್ಯಾಟ್​ ಕಮಿನ್ಸ್​ ಮತ್ತು ಸ್ಟೀವ್ ಸ್ಮಿತ್ ಅವರು ಮಣಿಕಟ್ಟಿನ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದರು. ಆದರೆ ಮಿಚೆಲ್ ಸ್ಟಾರ್ಕ್​ ಯುಕೆಯಿಂದ ಹಿಂದಿರುಗಿದ ನಂತರ ಅವರ ತೊಡೆಸಂದು ಮತ್ತು ಭುಜದಲ್ಲಿ ನೋವನ್ನು ಅನುಭವಿಸಿದರು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟಿ20 ಪಂದ್ಯಗಳನ್ನು ಆಡಿದ ಗ್ಲೆನ್ ಮ್ಯಾಕ್ಸ್‌ವೆಲ್ ಪಾದದ ನೋವಿಗೆ ತುತ್ತಾಗಿದ್ದರು. ಅವರ ಮಗುವಿನ ಜನನದ ಹಿನ್ನೆಲೆಯಲ್ಲಿ ತವರಿಗೆ ಮರಳಿದ ಮ್ಯಾಕ್ಸಿ ಏಕದಿನ ಪಂದ್ಯಗಳಿಗೆ ಅಲಭ್ಯರಾಗಿದ್ದರು. ವೇಗಿ ಕ್ಯಾಮರೂನ್ ಗ್ರೀನ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಈಗ ಎಲ್ಲಾ ಆಟಗಾರರು ಭಾರತದ ವಿರುದ್ಧದ ಪಂದ್ಯಕ್ಕೆ ತಂಡವನ್ನು ಸೇರಿಕೊಂಡಿದ್ದಾರೆ.

ಸಪ್ಟೆಂಬರ್​ 28ಕ್ಕೆ ವಿಶ್ವಕಪ್​ನಲ್ಲಿ ಆಡುವ 15 ಜನ ಸದಸ್ಯರ ತಂಡವನ್ನು ಪ್ರಕಟಿಸಬೇಕಿದೆ. ಈಗಾಗಲೇ ಆಸ್ಟ್ರೇಲಿಯಾ 18 ಜನರ ವಿಶ್ವಕಪ್​ ತಂಡ ಪ್ರಕಟಿಸಿದೆ. ಆದರೆ 28ರ ಒಳಗೆ ಮೂರು ಆಟಗಾರರನ್ನು ಕೈಬಿಡಬೇಕಿದೆ. ಇದಕ್ಕೆ ಭಾರತದ ಪ್ರವಾಸ ಆಸ್ಟ್ರೇಲಿಯಾಕ್ಕೆ ಬಹಳ ಮುಖ್ಯವಾಗಿದೆ. ಇಲ್ಲಿನ ಮೈದಾನದಲ್ಲಿ ತಂಡದ ಆಟಗಾರರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಆಧಾರದಲ್ಲಿ ವಿಶ್ವಕಪ್​ ತಂಡದ ಪ್ಲೆಯರ್​ಗಳನ್ನು ಅಂತಿಮಗೊಳಿಸಲಿದೆ.

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲ್ಯಾಬುಸ್‌ಚಾಗ್ನೆ, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಿಚಲ್​ ಸ್ಟಾರ್ಕ್​, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ

ಇದನ್ನೂ ಓದಿ: Asia Cup 2023: 5 ವರ್ಷದ ಟ್ರೋಫಿ ಬರ ನೀಗಿಸಿಕೊಂಡ ಭಾರತ.. ಏಷ್ಯಾಕಪ್​ಗೆ ಭಾರತವೇ ಬಾಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.